
ಟೆಸ್ಟ್ ಕ್ರಿಕೆಟ್ ಆಡುವ ಮಹದಾಸೆಯೊಂದಿಗೆ ಐಪಿಎಲ್ನಿಂದ ಹಿಂದೆ ಸರಿದಿದ್ದ ಆಸ್ಟ್ರೇಲಿಯಾದ ಸ್ಟಾರ್ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಬರೋಬ್ಬರಿ 9 ವರ್ಷಗಳ ಬಳಿಕ ಐಪಿಎಲ್ ಆಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಆಸೀಸ್ ವೇಗಿಯ ಈ ಯೋಚನೆಯ ಹಿಂದೆ ಮಹತ್ವದ ಕಾರಣವೂ ಇದ್ದು, ವೇಗಿ ಮುಂದಿನ ವರ್ಷ ಜೂನ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ತಮ್ಮನ್ನು ತಾವು ಚೆನ್ನಾಗಿ ಸಿದ್ಧಪಡಿಸಿಕೊಳ್ಳುವ ಸಲುವಾಗಿ ಐಪಿಎಲ್‌ನಲ್ಲಿ ಆಡಲು ಮುಂದಾಗಿದ್ದಾರೆ.

2015 ರಲ್ಲಿ ಕೊನೆಯ ಬಾರಿಗೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಸ್ಟಾರ್ಕ್ ಆ ನಂತರ ರಾಷ್ಟ್ರೀಯ ತಂಡಕ್ಕೆ ಹೆಚ್ಚು ಒತ್ತು ನೀಡುವ ಸಲುವಾಗಿ ಐಪಿಎಲ್ನಿಂದ ಹಿಂದೆ ಸರಿದಿದ್ದರು.

ಈ ಎಡಗೈ ವೇಗಿ ಇದುವರೆಗೆ 27 ಐಪಿಎಲ್ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದು, 7. 17 ರ ಎಕಾನಮಿಯಲ್ಲಿ 34 ವಿಕೆಟ್ ಪಡೆದಿದ್ದಾರೆ. ಇದರಲ್ಲಿ 15 ರನ್ಗಳಿಗೆ ನಾಲ್ಕು ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.

ಇನ್ನು 2014 ರ ಐಪಿಎಲ್‌ನಲ್ಲಿ 14 ಪಂದ್ಯಗಳನ್ನು ಆಡಿದ್ದ ಸ್ಟಾರ್ಕ್ 2015 ರಲ್ಲಿ 13 ಪಂದ್ಯಗಳಲ್ಲಿ ಆರ್ಸಿಬಿ ತಂಡವನ್ನು ಪ್ರತಿನಿಧಿಸಿದ್ದರು. 2018 ರಲ್ಲಿ, ಅವರು ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಗಾಯದಿಂದಾಗಿ ಅವರು ಲೀಗ್ನಿಂದ ಹಿಂದೆ ಸರಿಯಬೇಕಾಯಿತು.

ಆದಾಗ್ಯೂ, ಮುಂದಿನ ವರ್ಷ ಜೂನ್‌ನಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ಐಪಿಎಲ್‌ನಲ್ಲಿ ಆಡುವುದು ಮಾರ್ಕ್ಯೂ ಪಂದ್ಯಾವಳಿಗೆ ಸೂಕ್ತ ಸಿದ್ಧತೆಯಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಐಪಿಎಲ್‌ನ 17 ನೇ ಆವೃತ್ತಿಯನ್ನು ಆಡಲು ಸ್ಟಾರ್ಕ್ ಆಸಕ್ತಿ ತೋರುತ್ತಿದ್ದಾರೆ ಎಂದು ವರದಿಯಾಗಿದೆ.
![ಈ ಬಗ್ಗೆ ಮಾತನಾಡಿರುವ ಸ್ಟಾರ್ಕ್, ಎಂಟು ವರ್ಷಗಳು ಕಳೆದಿವೆ ನೋಡಿ. ನಾನು [ಮುಂದಿನ] ವರ್ಷದಲ್ಲಿ ಖಂಡಿತವಾಗಿಯೂ ಐಪಿಎಲ್ಗೆ ಮರಳುತ್ತೇನೆ. ಇತರ ವಿಷಯಗಳ ಜೊತೆಗೆ, ಇದು ಮುಂದಿನ ಟಿ20 ವಿಶ್ವಕಪ್‌ಗೆ ಉತ್ತಮ ತಯಾರಿಗೆ ಅವಕಾಶ ಮಾಡಿಕೊಡಲಿದೆ ಎಂದು ಸ್ಟಾರ್ಕ್ ವಿಲೋ ಟಾಕ್ ಕ್ರಿಕೆಟ್ ಪಾಡ್‌ಕ್ಯಾಸ್ಟ್‌ಗೆ ತಿಳಿಸಿದ್ದಾರೆ.](https://images.tv9kannada.com/wp-content/uploads/2023/09/Starc-5.jpg)
ಈ ಬಗ್ಗೆ ಮಾತನಾಡಿರುವ ಸ್ಟಾರ್ಕ್, ಎಂಟು ವರ್ಷಗಳು ಕಳೆದಿವೆ ನೋಡಿ. ನಾನು [ಮುಂದಿನ] ವರ್ಷದಲ್ಲಿ ಖಂಡಿತವಾಗಿಯೂ ಐಪಿಎಲ್ಗೆ ಮರಳುತ್ತೇನೆ. ಇತರ ವಿಷಯಗಳ ಜೊತೆಗೆ, ಇದು ಮುಂದಿನ ಟಿ20 ವಿಶ್ವಕಪ್‌ಗೆ ಉತ್ತಮ ತಯಾರಿಗೆ ಅವಕಾಶ ಮಾಡಿಕೊಡಲಿದೆ ಎಂದು ಸ್ಟಾರ್ಕ್ ವಿಲೋ ಟಾಕ್ ಕ್ರಿಕೆಟ್ ಪಾಡ್‌ಕ್ಯಾಸ್ಟ್‌ಗೆ ತಿಳಿಸಿದ್ದಾರೆ.
Published On - 10:17 am, Thu, 7 September 23