
ಆಸ್ಟ್ರೇಲಿಯಾದಲ್ಲಿ ಆಸೀಸ್ ಪಡೆಯನ್ನು ಬಗ್ಗು ಬಡಿಯುವಲ್ಲಿ ಕೊನೆಗೂ ಇಂಗ್ಲೆಂಡ್ ತಂಡ ಯಶಸ್ವಿಯಾಗಿದೆ. ಅದು ಕೂಡ ಕೇವಲ 479 ಎಸೆತಗಳಲ್ಲಿ ಕಟ್ಟಿ ಹಾಕುವ ಮೂಲಕ ಎಂಬುದು ವಿಶೇಷ. ಅಂದರೆ ಎರಡೂ ಇನಿಂಗ್ಸ್ಗಳ ಮೂಲ ಆಸ್ಟ್ರೇಲಿಯಾ ಬ್ಯಾಟರ್ಗಳು ಎದುರಿಸಿದ್ದು ಕೇವಲ 479 ಎಸೆತಗಳನ್ನು ಮಾತ್ರ.

ಮೊದಲ ಇನಿಂಗ್ಸ್ನಲ್ಲಿ 45.2 ಓವರ್ಗಳನ್ನು ಎದುರಿಸಿದ್ದ ಆಸ್ಟ್ರೇಲಿಯಾ ಬ್ಯಾಟರ್ಗಳು ದ್ವಿತೀಯ ಇನಿಂಗ್ಸ್ನಲ್ಲಿ 34/3 ಓವರ್ಗಳಲ್ಲಿ ಆಲೌಟ್ ಆಗಿದ್ದರು. ಈ ಮೂಲಕ ಇಂಗ್ಲೆಂಡ್ ತಂಡವು 479 ಎಸೆತಗಳಲ್ಲಿ ಆಸೀಸ್ ಪಡೆಯನ್ನು ಕಟ್ಟಿ ಹಾಕುವಲ್ಲಿ ಇಂಗ್ಲೆಂಡ್ ಬೌಲರ್ಗಳು ಯಶಸ್ವಿಯಾಗಿದ್ದರು.

ವಿಶೇಷ ಎಂದರೆ ಇದು 97 ವರ್ಷಗಳಲ್ಲೇ ಆಸ್ಟ್ರೇಲಿಯಾ ತಂಡದ ಅತ್ಯಂತ ಕಳಪೆ ಪ್ರದರ್ಶನವಾಗಿದೆ. ಅಂದರೆ ಟೆಸ್ಟ್ ಪಂದ್ಯವೊಂದರಲ್ಲಿ ಆಸ್ಟ್ರೇಲಿಯಾ ತಂಡ 500 ಕ್ಕಿಂತ ಕಡಿಮೆ ಎಸೆತಗಳನ್ನು ಎದುರಿಸುತ್ತಿರುವುದು 5ನೇ ಬಾರಿ. ಇದಕ್ಕೂ ಮುನ್ನ 1928 ರಲ್ಲಿ ಇಂಗ್ಲೆಂಡ್ ವಿರುದ್ಧ 457 ಎಸೆತಗಳಲ್ಲಿ ಎರಡೂ ಇನಿಂಗ್ಸ್ಗಳನ್ನೂ ಕೊನೆಗೊಳಿಸಿದ್ದರು.

ಇದೀಗ ಬರೋಬ್ಬರಿ 97 ವರ್ಷಗಳ ಬಳಿಕ ಇಂಗ್ಲೆಂಡ್ ತಂಡವು ಮತ್ತೊಮ್ಮೆ ಆಸ್ಟ್ರೇಲಿಯಾ ತಂಡವನ್ನು 479 ಎಸೆತಗಳಲ್ಲಿ ನಿಯಂತ್ರಿಸಿದೆ. ಈ ನಿಯಂತ್ರಣದೊಂದಿಗೆ ಆಸ್ಟ್ರೇಲಿಯಾ ತಂಡಕ್ಕೆ ಹೀನಾಯ ಸೋಲುಣಿಸುವಲ್ಲಿಯೂ ಯಶಸ್ವಿಯಾಗಿದೆ. ಅದು ಕೂಡ ದಶಕಗಳ ಬಳಿಕ ಎಂಬುದು ಮತ್ತೊಂದು ವಿಶೇಷ.

ಅಂದರೆ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾದಲ್ಲಿ ಕೊನೆಯ ಟೆಸ್ಟ್ ಪಂದ್ಯ ಗೆದ್ದಿದ್ದು 2011 ರಲ್ಲಿ. ಇದಾದ ಬಳಿಕ ಆಂಗ್ಲರ ಪಡೆ ಕಾಂಗರೂನಾಡಿನಲ್ಲಿ ಕಣಕ್ಕಿಳಿದ 18 ಮ್ಯಾಚ್ಗಳಲ್ಲಿ 16 ಪಂದ್ಯಗಳಲ್ಲಿ ಸೋಲುಂಡಿದ್ದರು. ಇನ್ನು ಎರಡು ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿತ್ತು. ಇದೀಗ 14 ವರ್ಷಗಳ ಬಳಿಕ ಆಸ್ಟ್ರೇಲಿಯಾ ಪಿಚ್ನಲ್ಲಿ ಇಂಗ್ಲೆಂಡ್ ತಂಡ 4 ವಿಕೆಟ್ಗಳ ಸ್ಮರಣೀಯ ಗೆಲುವು ದಾಖಲಿಸಿದೆ.