Aaron Finch retirement: ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಡಿಢೀರ್ ನಿವೃತ್ತಿ ಘೋಷಿಸಿದ ಆಸ್ಟ್ರೇಲಿಯಾ ಟಿ20 ನಾಯಕ ಆ್ಯರೋನ್ ಫಿಂಚ್
TV9 Web | Updated By: Vinay Bhat
Updated on:
Feb 07, 2023 | 10:05 AM
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಟಿ20 ನಾಯಕ ಆ್ಯರೋನ್ ಫಿಂಚ್ (Aaron Finch) ಅವರು ಮಂಗಳವಾರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ತಮ್ಮ 12 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕನ್ನು ಅಂತ್ಯಗೊಳಿಸಿದ್ದಾರೆ.
1 / 8
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಟಿ20ನಾಯಕ ಆ್ಯರೋನ್ ಫಿಂಚ್ (Aaron Finch) ಅವರು ಮಂಗಳವಾರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ತಮ್ಮ 12 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕನ್ನು ಅಂತ್ಯಗೊಳಿಸಿದ್ದಾರೆ.
2 / 8
ಆಸ್ಟ್ರೇಲಿಯಾ ಟಿ20 ಕ್ರಿಕೆಟ್ ತಂಡದ ನಾಯಕರಾಗಿ ದಾಖಲೆಯ 76 ಪಂದ್ಯಗಳಲ್ಲಿ ತಮ್ಮ ತಂಡವನ್ನು ಮುನ್ನಡೆಸಿರುವ ಆ್ಯರೋನ್ ಫಿಂಚ್ ಇದೀಗ ಎಲ್ಲ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ಹಿಂದೆ ಸರಿದಿದ್ದಾರೆ.
3 / 8
2011ರಲ್ಲಿ ಇಂಗ್ಲೆಡ್ ವಿರುದ್ಧದ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಫಿಂಚ್ ಪದಾರ್ಪಣೆ ಮಾಡಿದ್ದರು. ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿದ 3ನೇ ಆಟಗಾರ ಎಂಬ ದಾಖಲೆ ಫಿಂಚ್ ಹೆಸರಿನಲ್ಲಿದೆ.
4 / 8
ಫಿಂಚ್ ಇಲ್ಲಿಯವರೆಗೂ 254 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದಾರೆ. ಇದರಲ್ಲಿ 19 ಶತಕಗಳೊಂದಿಗೆ 8804 ರನ್‌ಗಳನ್ನು ಸಿಡಿಸಿದ್ದಾರೆ. ಇಲ್ಲಿಯವರೆಗೂ 103 ಟಿ20 ಪಂದ್ಯಗಳಾಡಿರುವ ಅವರು, 76 ಪಂದ್ಯಗಳನ್ನು ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದಾರೆ.
5 / 8
"2024ರ ಮುಂದಿನ ಟಿ20 ವಿಶ್ವಕಪ್ ವರೆಗೆ ನಾನು ಆಡುವುದು ಅನುಮಾನ. ಹೀಗಾಗಿ ಟಿ20 ನಾಯಕತ್ವದಿಂದ ಕೆಳಗಿಳಿಯಲು ಇದು ಸರಿಯಾದ ಸಮಯ. 12 ವರ್ಷಗಳ ಕಾಲ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಲು ಮತ್ತು ಸಾರ್ವಕಾಲಿಕ ಶ್ರೇಷ್ಠ ಆಟಗಾರರೊಂದಿಗೆ ಮತ್ತು ವಿರುದ್ಧ ಆಡಲು ಸಾಧ್ಯವಾಗಿರುವುದು ನಂಬಲಾಗದ ಗೌರವವಾಗಿದೆ," ಎಂದು ಫಿಂಚ್ ಹೇಳಿದ್ದಾರೆ.
6 / 8
"ನನ್ನ 12 ವರ್ಷಗಳ ಸುದೀರ್ಘ ಕ್ರಿಕೆಟ್ ಜೀವನದಲ್ಲಿ ಹಲವು ಕ್ರಿಕೆಟ್ ದಿಗ್ಗಜರ ಜೊತೆ ಹಾಗೂ ವಿರುದ್ದ ಆಡಿರುವ ಬಗ್ಗೆ ಅಪಾರ ಹೆಮ್ಮೆ ಇದೆ. ತಂಡಕ್ಕೆ ಏಕದಿನ ವಿಶ್ವಕಪ್ ಹಾಗೂ ಟಿ20 ವಿಶ್ವಕಪ್ ಸೇರಿದಂತೆ ಕೆಲವು ಸ್ಮರಣೀಯ ಪ್ರಶಸ್ತಿಗಳನ್ನು ಗೆದ್ದುಕೊಟ್ಟಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ," ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
7 / 8
2013ರಲ್ಲಿ ಇಂಗ್ಲೆಡ್ ವಿರುದ್ಧ ಆ್ಯರೋನ್ ಫಿಂಚ್ ಟಿ20ಯಲ್ಲಿ 63 ಎಸೆತದಲ್ಲಿ 156 ರನ್‌ಗಳಿಸಿದ್ದರು. ಇದು ಪುರುಷರ ಟಿ20 ಪಂದ್ಯದಲ್ಲಿ ಆಟಗಾರನೊಬ್ಬ ಸಿಡಿಸಿದ 3ನೇ ಅತಿ ಹೆಚ್ಚಿನ ಸ್ಕೋರ್ ಎಂದು ದಾಖಲಾಗಿದೆ.
8 / 8
ಕಳೆದ ಅಕ್ಟೋಬರ್‌ನಲ್ಲಿ ಟಿ20 ಕ್ರಿಕೆಟ್‌ನಲ್ಲಿ ಗಮನಹರಿಸಲು ಆ್ಯರೋನ್ ಫಿಂಚ್ ಏಕದಿನ ಸ್ವರೂಪದಿಂದ ನಿವೃತ್ತಿಯಾಗಿದ್ದರು. ಅನಂತರ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಆಸ್ಟ್ರೇಲಿಯಾದ ಏಕದಿನ ಮತ್ತು ಟೆಸ್ಟ್ ತಂಡದ ನಾಯಕತ್ವ ಜವಾಬ್ದಾರಿ ವಹಿಸಿಕೊಂಡರು. ಕ್ರಿಕೆಟ್ ಆಸ್ಟ್ರೇಲಿಯಾ ಟಿ20 ಕ್ರಿಕೆಟ್‌ಗೆ ನೂತನ ನಾಯಕನನ್ನು ಇನ್ನಷ್ಟೆ ಘೋಷಿಸಬೇಕಿದೆ.
Published On - 10:05 am, Tue, 7 February 23