Azhar Ali: ಕ್ರಿಕೆಟ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ ಪಾಕಿಸ್ತಾನ ಸ್ಟಾರ್ ಆಟಗಾರ ಅಜರ್ ಅಲಿ
TV9 Web | Updated By: Vinay Bhat
Updated on:
Dec 17, 2022 | 10:58 AM
Azhar Ali retirement: ಪಾಕಿಸ್ತಾನ ಕ್ರಿಕೆಟ್ ತಂಡದ ಹಿರಿಯ ಅನುಭವಿ ಆಟಗಾರ, ಮಾಜಿ ನಾಯಕ ಅಜರ್ ಅಲಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇಂದು ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಅಂತಿಮ ಪಂದ್ಯ ಇವರ ಕೊನೆಯ ಪಂದ್ಯವಾಗಿರಲಿದೆ.
1 / 7
ಪಾಕಿಸ್ತಾನ ಕ್ರಿಕೆಟ್ ತಂಡದ ಹಿರಿಯ ಅನುಭವಿ ಆಟಗಾರ, ಮಾಜಿ ನಾಯಕ ಅಜರ್ ಅಲಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇಂದು ಕರಾಚಿಯಲ್ಲಿ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಇವರ ವೃತ್ತಿ ಜೀವನದ ಕೊನೆಯ ಪಂದ್ಯವಾಗಿರಲಿದೆ.
2 / 7
ಯೂನಿಸ್ ಖಾನ್ (10,099 ರನ್), ಜಾವೇದ್ ಮಿಯಾಂದಾದ್ (8,832), ಇಂಜಮಾಮ್-ಉಲ್-ಹಕ್ (8,829), ಮತ್ತು ಮೊಹಮ್ಮದ್ ಯೂಸುಫ್ (7,530) ನಂತರ ಅಜರ್ 96 ಪಂದ್ಯಗಳಲ್ಲಿ 42.49 ಸರಾಸರಿ ಮೂಲಕ 7,097 ರನ್ ಗಳಿಸಿದ ಪಾಕಿಸ್ತಾನದ ಐದನೇ ಟೆಸ್ಟ್ ಬ್ಯಾಟರ್ ಆಗಿದ್ದಾರೆ.
3 / 7
25ನೇ ವಯಸ್ಸಿನಲ್ಲಿ, ಅಜರ್ 2010 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಲಾರ್ಡ್ಸ್‌ನಲ್ಲಿ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಆಡಿದರು. ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ಮಿಂಚಿದರು. ಒಟ್ಟು 34 ಅರ್ಧ ಶತಕ ಮತ್ತು 19 ಬಾರಿಸಿದ್ದಾರೆ.
4 / 7
37 ವರ್ಷದ ಅಜರ್ ಅವರು ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ತ್ರಿಶತಕ ದಾಖಲಿಸಿದ ಏಕೈಕ ಪಾಕಿಸ್ತಾನಿ ಬ್ಯಾಟರ್ ಆಗಿದ್ದಾರೆ. ಅವರು 2016 ರಲ್ಲಿ ದುಬೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಈ ಸಾಧನೆ ಮಾಡಿದರು. ಈ ಪಂದ್ಯದಲ್ಲಿ ಅಜರ್ ಅಜೇಯ 302 ಗಳಿಸಿದ್ದರು.
5 / 7
ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಜರ್, "ನನ್ನ ದೇಶವನ್ನು ಅತ್ಯುನ್ನತ ಮಟ್ಟದಲ್ಲಿ ಪ್ರತಿನಿಧಿಸಲು ದೊರೆತ ಅವಕಾಶ ನನಗೆ ದೊಡ್ಡ ಗೌರವವಾಗಿದೆ. ಆದರೆ ಈ ನಿರ್ಧಾರವನ್ನು ತೆಗೆದುಕೊಳ್ಳುವುದು ಬಹಳ ಕಠಿಣವಾಗಿರುತ್ತದೆ. ಸಾಕಷ್ಟು ಆಲೋಚಿಸಿದ ಬಳಿಕ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯಲು ಇದು ಸೂಕ್ತ ಸಂದರ್ಭ ಎಂದು ನಾನು ನಿರ್ಧಿರಿಸಿದ್ದೇನೆ" ಎಂದು ಹೇಳಿದ್ದಾರೆ.
6 / 7
ನಾನು ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿ ಅಂದುಕೊಂಡಿದ್ದ ಬಹುತೇಕ ಸಾಧನೆಗಳನ್ನು ಮಾಡಲು ಸಾಧ್ಯವಾಗಿದೆ. ನನಗೆ ಪಾಕಿಸ್ತಾನ ತಂಡವನ್ನು ಮುನ್ನಡೆಸುವ ಅವಕಾಶ ದೊರೆಯಿತು. ನಾನು ಜೀವನದ ಅತ್ಯಂತ ಸುಂದರವಾದ ಕ್ಷಣಗಳನ್ನು ಗಳಿಸಿದ್ದೇನೆ. ನನ್ನ ತಂಡದವರಿಗೆ, ನನ್ನ ಕೋಚ್ಗಳಿಗೆ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂಬುದು ಅಜರ್ ಮಾತು.
7 / 7
ಅಜರ್ ಅಲಿ ಏಕದಿನ ಕ್ರಿಕೆಟ್ ಮಾದರಿಯಿಂದ 2018ರಲ್ಲಿ ನಿವೃತ್ತಿ ಘೋಷಣೆ ಮಾಡಿದ್ದರು. 2016ರಿಂದ 2020ರ ಅವಧಿಯಲ್ಲಿ ಅಜರ್ ಅಲಿ 9 ಟೆಸ್ಟ್ ಪಂದ್ಯಗಳಲ್ಲಿ ಪಾಕ್ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ. 12 ವರ್ಷಗಳ ವೃತ್ತಿಜೀವನದಲ್ಲಿ, ಅಜರ್ ಎರಡು ದ್ವಿಶತಕಗಳನ್ನು ಸಹ ಗಳಿಸಿದ್ದಾರೆ.
Published On - 10:58 am, Sat, 17 December 22