ಬಿಬಿಎಲ್​ನಿಂದ ಹೊರಬಿದ್ದ ಬಾಬರ್ ಪ್ರತಿ ರನ್​ಗೆ ಪಡೆದ ಸಂಭಾವನೆ ಎಷ್ಟು ಲಕ್ಷ ಗೊತ್ತಾ?

Updated on: Jan 22, 2026 | 9:34 PM

Babar Azam BBL performance: ಪಾಕಿಸ್ತಾನದ ಬಾಬರ್ ಅಜಮ್ ಬಿಬಿಎಲ್ 2025/26 ರಲ್ಲಿ ಸಿಡ್ನಿ ಸಿಕ್ಸರ್ಸ್ ಪರ ಅತಿ ಹೆಚ್ಚು ವೇತನ ಪಡೆದ (₹2.35 ಕೋಟಿ) ವಿದೇಶಿ ಆಟಗಾರರಾಗಿದ್ದರು. ಆದರೆ, ಕಳಪೆ ಪ್ರದರ್ಶನ (202 ರನ್‌ಗಳು, ಕಡಿಮೆ ಸ್ಟ್ರೈಕ್ ರೇಟ್) ಮತ್ತು ಅಕಾಲಿಕ ನಿರ್ಗಮನದ ನಡುವೆಯೂ ಅವರು ಪ್ರತಿ ರನ್‌ಗೆ ಸುಮಾರು ₹1.26 ಲಕ್ಷ ವೇತನ ಪಡೆದಿದ್ದಾರೆ.

1 / 6
ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಮ್ 2025/26 ರ ಬಿಗ್ ಬ್ಯಾಷ್ ಲೀಗ್​ನಲ್ಲಿ ಅತ್ಯಂತ ದುಬಾರಿ ವಿದೇಶಿ ಆಟಗಾರನಾಗಿ ಸಿಡ್ನಿ ಸಿಕ್ಸರ್ಸ್‌ ತಂಡವನ್ನು ಸೇರಿಕೊಂಡಿದ್ದರು. ಆದಾಗ್ಯೂ ಅವರು ಪಡೆದ ವೇತನಕ್ಕೆ ಸಮನಾದ ಪ್ರದರ್ಶನವನ್ನು ಬಾಬರ್​ಗೆ ನೀಡಲು ಸಾಧ್ಯವಾಗಲಿಲ್ಲ. ಇದರಿಂದಾಗಿಯೇ ಬಾಬರ್​ ಈ ಲೀಗ್​ನಲ್ಲಿ ಸಾಕಷ್ಟು ಅವಮಾನಗಳನ್ನು ಅನುಭವಿಸಬೇಕಾಯಿತು.

2 / 6
ಬಿಗ್ ಬ್ಯಾಷ್ ಲೀಗ್​ನಲ್ಲಿ ಇದೇ ಮೊದಲ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಬಾಬರ್ ಪ್ರದರ್ಶನ ತೀರ ಕಳಪೆಯಾಗಿತ್ತು. ಪ್ರತಿ ರನ್ ಗಳಿಸಲು ಬಾಬರ್ ಹರಸಾಹಸ ಪಡಬೇಕಾಯಿತು. ಕಳಪೆ ಫಾರ್ಮ್​ ಜೊತೆಗೆ ರಾಷ್ಟ್ರೀಯ ಕರ್ತವ್ಯದಿಂದಾಗಿ ಬಾಬರ್ ಸೀಸನ್ ಮಧ್ಯದಲ್ಲೇ ಲೀಗ್ ತೊರೆದಿದ್ದಾರೆ. ಪರಿಣಾಮವಾಗಿ, ಬಾಬರ್ ಗಳಿಸಿದ ಪ್ರತಿ ರನ್​ಗೆ ಸಿಡ್ನಿ ಸಿಕ್ಸರ್ಸ್‌ ಲಕ್ಷಾಂತರ ರೂಗಳ ವೇತನ ನೀಡಬೇಕಾಗಿ ಬಂದಿದೆ.

3 / 6
ಮಾಧ್ಯಮ ವರದಿಗಳ ಪ್ರಕಾರ, ಬಾಬರ್ ಆಝಂ ಜೊತೆ ಸಿಡ್ನಿ ಸಿಕ್ಸರ್ಸ್‌ ಫ್ರಾಂಚೈಸಿ ಪ್ಲಾಟಿನಂ ಒಪ್ಪಂದವನ್ನು ಮಾಡಿಕೊಂಡಿತ್ತು. ಇದರ ಪ್ರಕಾರ ಬಾಬರ್​ಗೆ ಸುಮಾರು 2.35 ಕೋಟಿ ಭಾರತೀಯ ರೂಪಾಯಿ ವೇತನ ಸಿಗಲಿದೆ. ಇದು ಬಿಬಿಎಲ್ ಇತಿಹಾಸದಲ್ಲಿ ವಿದೇಶಿ ಆಟಗಾರನಿಗೆ ನೀಡಲಾದ ಅತಿದೊಡ್ಡ ಪ್ಯಾಕೇಜ್ ಆಗಿದೆ.

4 / 6
ಸಿಡ್ನಿ ಸಿಕ್ಸರ್ಸ್‌ ಪರ ಬಾಬರ್ ಆಝಂ 11 ಪಂದ್ಯಗಳನ್ನಾಡಿ ಒಟ್ಟು 202 ರನ್ ಗಳಿಸಿದರು. ಅವರ ಸರಾಸರಿ 22.44 ಮತ್ತು ಸ್ಟ್ರೈಕ್ ರೇಟ್ 103.06 ಆಗಿತ್ತು. ಇದರಲ್ಲಿ ಎರಡು ಅರ್ಧಶತಕಗಳು ಸೇರಿವೆ. ಆದರೆ ಎಲ್ಲಾ ಪಂದ್ಯಗಳಲ್ಲಿ ಅವರ ಆಮೆಗತಿಯ ಬ್ಯಾಟಿಂಗ್‌ ಸಾಕಷ್ಟು ಟೀಕೆಗಳಿಗೆ ಗುರಿಯಾಯಿತು. ಬಾಬರ್ ಅವರ ಈ ನಿದಾನಗತಿಯ ಬ್ಯಾಟಿಂಗ್‌ ತಂಡವನ್ನು ಒತ್ತಡಕ್ಕೊಳಗಾಗುವಂತೆ ಮಾಡಿತ್ತು.

5 / 6
ಇದು ಮಾತ್ರವಲ್ಲದೆ ಭಾಗಶಃ ಪಂದ್ಯಗಳಲ್ಲಿ, ಬಾಬರ್ ಬೇಗನೆ ವಿಕೆಟ್ ಒಪ್ಪಿಸಿದರು ಅಥವಾ ತಮ್ಮ ನಿಧಾನಗತಿಯ ಬ್ಯಾಟಿಂಗ್​ನಿಂದ ತಂಡದ ಮೇಲೆ ಒತ್ತಡ ಹೇರಿದರು. ಇದೆಲ್ಲದರ ನಡುವೆಯೂ ಬಾಬರ್ ಪ್ರತಿ ರನ್‌ಗೆ ಸುಮಾರು 1.26-1.27 ಲಕ್ಷ ರೂ. ವೇತನ ಪಡೆಯಲಿದ್ದಾರೆ.

6 / 6
ಬಿಬಿಎಲ್​​ನಲ್ಲಿ ಸಾಕಷ್ಟು ಟೀಕೆಗಳಿಗೆ ಗುರಿಯಾದ ಬಾಬರ್ ತಮ್ಮ ಸ್ಟ್ರೈಕ್ ರೇಟ್​ನಿಂದ ಚರ್ಚೆಯ ವಿಷಯವಾಗಿದ್ದರು. ಇದು ಮಾತ್ರವಲ್ಲದೆ ಸ್ಟೀವ್ ಸ್ಮಿತ್ ಸ್ಟ್ರೈಕ್ ನೀಡಲು ನಿರಾಕರಿಸಿದ್ದು ಕೂಡ ವಿವಾದ ಹುಟ್ಟುಹಾಕಿತ್ತು. ಇದೆಲ್ಲದರ ನಡುವೆ ಇದೀಗ ಸೀಸನ್ ಅರ್ಧಕ್ಕೆ ತಂಡ ತೊರೆದಿರುವ ಬಾಬರ್​ಗೆ ಮುಂದಿನ ಆವೃತ್ತಿಯ ಬಿಬಿಎಲ್​ನಲ್ಲಿ ಆಡುವ ಅವಕಾಶ ಸಿಗುವ ಸಾಧ್ಯತೆಗಳಿಲ್ಲ ಎನ್ನಬಹುದು.