The Hundred: ಮಾರಾಟವಾಗದೆ ಉಳಿದ ಬಾಬರ್, ರಿಜ್ವಾನ್, ಪೊಲಾರ್ಡ್, ರಸೆಲ್..!
The Hundred: ಎಲ್ಲಾ ಎಂಟು ತಂಡಗಳು ತಮಗೆ ಬೇಕಾದ ಆಟಗಾರನಿಗಾಗಿ ಸಾಕಷ್ಟು ಹಣ ನೀಡಿ ಖರೀದಿಸಿವೆ. ಆದರೆ ಈ ಹರಾಜಿನಲ್ಲಿ ಅನೇಕ ಸ್ಟಾರ್ ಆಟಗಾರರು ಮಾರಾಟವಾಗದೆ ಉಳಿದಿದ್ದು, ಕ್ರಿಕೆಟ್ ಲೋಕದಲ್ಲಿ ಅಚ್ಚರಿ ಮೂಡಿಸಿದೆ.
1 / 5
ದಿ ಹಂಡ್ರೆಡ್ ಟಿ20 ಲೀಗ್ನ ಮೂರನೇ ಸೀಸನ್ ಆರಂಭಕ್ಕೆ ಎಲ್ಲ ರೀತಿಯ ತಯಾರಿ ಆರಂಭವಾಗಿದೆ. ಆಗಸ್ಟ್ 1ರಿಂದ ಆರಂಭವಾಗಲಿರುವ ಈ ಲೀಗ್‌ಗಾಗಿ ಹರಾಜು ಪ್ರಕ್ರಿಯೆ ಈಗಾಗಲೇ ನಡೆದಿದ್ದು, ಎಲ್ಲಾ ಎಂಟು ತಂಡಗಳು ತಮಗೆ ಬೇಕಾದ ಆಟಗಾರನಿಗಾಗಿ ಸಾಕಷ್ಟು ಹಣ ನೀಡಿ ಖರೀದಿಸಿವೆ. ಆದರೆ ಈ ಹರಾಜಿನಲ್ಲಿ ಅನೇಕ ಸ್ಟಾರ್ ಆಟಗಾರರು ಮಾರಾಟವಾಗದೆ ಉಳಿದಿದ್ದು, ಕ್ರಿಕೆಟ್ ಲೋಕದಲ್ಲಿ ಅಚ್ಚರಿ ಮೂಡಿಸಿದೆ.
2 / 5
ಅಚ್ಚರಿಯೆಂದರೆ ಎಂಟು ತಂಡಗಳ ಪೈಕಿ ಯಾವ ತಂಡವೂ ಪಾಕಿಸ್ತಾನದ ನಾಯಕ ಬಾಬರ್ ಆಜಮ್ ಮತ್ತು ಸ್ಟಾರ್ ಬ್ಯಾಟ್ಸ್ ಮನ್ ಮೊಹಮ್ಮದ್ ರಿಜ್ವಾನ್ ಅವರನ್ನು ಖರೀದಿಸಿಲ್ಲ. ಈ ಇಬ್ಬರ ಹೊರತಾಗಿ ವೆಸ್ಟ್ ಇಂಡೀಸ್‌ನ ಕೀರಾನ್ ಪೊಲಾರ್ಡ್ ಮತ್ತು ಆಂಡ್ರೆ ರಸೆಲ್ ಸಹ ಮಾರಾಟವಾಗಲಿಲ್ಲ.
3 / 5
ಇದರಲ್ಲಿ ಬಾಬರ್ ಮಾರಾಟವಾಗದೆ ಉಳಿದಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಟಿ20 ಮಾದರಿಯಲ್ಲಿ ಬಾಬರ್ ಅವರ ದಾಖಲೆ ಅದ್ಭುತವಾಗಿದೆ. ಇತ್ತೀಚೆಗೆ ನಡೆದ ಪಾಕಿಸ್ತಾನ್ ಸೂಪರ್ ಲೀಗ್ನಲ್ಲೂ ಅವರ ಬ್ಯಾಟ್ನಿಂದ ಸಾಕಷ್ಟು ರನ್ಗಳು ಹೊರಬಿದ್ದವು. ಪಿಎಸ್ಎಲ್ನಲ್ಲಿ 11 ಪಂದ್ಯಗಳನ್ನಾಡಿದ್ದ ಬಾಬರ್, 50ಕ್ಕೂ ಹೆಚ್ಚು ಸರಾಸರಿಯಲ್ಲಿ 522 ರನ್ ಬಾರಿಸಿದ್ದಾರೆ. ಹಾಗೆಯೇ ರಿಜ್ವಾನ್ ಕೂಡ ಆಡಿರುವ 12 ಪಂದ್ಯಗಳಲ್ಲಿ 550 ರನ್ ಬಾರಿಸಿದ್ದಾರೆ.
4 / 5
ಈ ಇಬ್ಬರು ಆಟಗಾರರು ಮಾರಾಟವಾಗದಿರಲು ಪ್ರಮುಖ ಕಾರಣ ಬಾಬರ್ ಆಜಂ ಮತ್ತು ರಿಜ್ವಾನ್ ಪೂರ್ಣ ಸೀಸನ್ನಗೆ ಲಭ್ಯವಿಲ್ಲದೆ ಇರದಿರುವುದು. ಆಗಸ್ಟ್‌ನಲ್ಲಿ ಪಾಕಿಸ್ತಾನ ತಂಡ ಅಫ್ಘಾನಿಸ್ತಾನ ವಿರುದ್ಧ ಸರಣಿ ಆಡಬೇಕಿದೆ. ಹೀಗಾಗಿ ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಇಡೀ ಸೀಸನ್ ಆಡುತ್ತಾರೆ ಎಂದು ತಂಡಗಳಿಗೆ ಖಚಿತವಾಗಿಲ್ಲ. ಹೀಗಾಗಿ ಈ ಇಬ್ಬರನ್ನು ಖರೀದಿಸಿಲ್ಲ.
5 / 5
ಆದರೆ ಈ ಇಬ್ಬರ ಹೊರತಾಗಿ, ಪಾಕಿಸ್ತಾನದ ವೇಗದ ಬೌಲರ್‌ಗಳಾದ ಶಾಹೀನ್ ಶಾ ಆಫ್ರಿದಿ, ಹ್ಯಾರಿಸ್ ರೌಫ್ ಉತ್ತಮ ಬೆಲೆಗೆ ಮಾರಾಟವಾಗಿದ್ದಾರೆ. ಅದರಲ್ಲೂ ಪಿಎಸ್ಎಲ್ ವಿಜೇತ ನಾಯಕ, ಶಾಹೀನ್ ಅವರನ್ನು ವೆಲ್ಸ್ ಫೈರ್ ತಂಡ ಸುಮಾರು ಒಂದು ಕೋಟಿ ರೂಪಾಯಿಗೆ ಖರೀದಿಸಿದೆ. ಆದರೆ ಬಾಬರ್ ಅಜಮ್ ಮತ್ತು ರಿಜ್ವಾನ್ ಅವರು ಅತ್ಯುತ್ತಮ ಫಾರ್ಮ್‌ನಲ್ಲಿರುವಾಗ ಏಕೆ ಖರೀದಿಸಲಿಲ್ಲ ಎಂದು ಅನೇಕ ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದಾರೆ.