- Kannada News Photo gallery Cricket photos WPL 2023 MIW vs UP Here is the photos of Mumbai Indians Women vs UP Warriorz Eliminator Match
MIW vs UPW, WPL 2023: ಮುಂಬೈ-ಯುಪಿ ಎಲಿಮಿನೇಟರ್ ಪಂದ್ಯದ ಕೆಲ ರೋಚಕ ಫೋಟೋಗಳು ಇಲ್ಲಿದೆ ನೋಡಿ
WPL 2023: ಬ್ಯಾಟಿಂಗ್-ಬೌಲಿಂಗ್ ಎರಡೂ ವಿಭಾಗಗಳಲ್ಲಿ ಮಿಂಚಿನ ಪ್ರದರ್ಶನ ತೋರಿದ ಮುಂಬೈ ಇಂಡಿಯನ್ಸ್ ಮಹಿಳಾ ತಂಡ ಮಾರ್ಚ್ 26 ಭಾನುವಾರದಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಫೈನಲ್ ಹಣಾಹಣಿಯಲ್ಲಿ ಮುಖಾಮುಖಿ ಆಗಲಿದೆ.
Updated on: Mar 25, 2023 | 8:29 AM

ಮುಂಬೈನ ಡಾ. ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಹರ್ಮನ್ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ 72 ರನ್ಗಳ ಅಮೋಘ ಗೆಲುವು ಸಾಧಿಸುವ ಮೂಲಕ ಫೈನಲ್ಗೆ ಅರ್ಹತೆ ಪಡೆದುಕೊಂಡಿತು.

ಬ್ಯಾಟಿಂಗ್-ಬೌಲಿಂಗ್ ಎರಡೂ ವಿಭಾಗಗಳಲ್ಲಿ ಮಿಂಚಿನ ಪ್ರದರ್ಶನ ತೋರಿದ ಮುಂಬೈ ಇಂಡಿಯನ್ಸ್ ಮಹಿಳಾ ತಂಡ ಮಾರ್ಚ್ 26 ಭಾನುವಾರದಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಫೈನಲ್ ಹಣಾಹಣಿಯಲ್ಲಿ ಮುಖಾಮುಖಿ ಆಗಲಿದೆ.v

ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಮಹಿಳಾ ತಂಡಕ್ಕೆ ಆರಂಭಿಕ ಆಟಗಾರ್ತಿ ಯಾಸ್ತಿಕಾ ಭಾಟಿಯಾ (21) ಮತ್ತು ಹೇಲಿ ಮ್ಯಾಥ್ಯೂಸ್ (26) ಉತ್ತಮ ಆರಂಭ ನೀಡಿದರು.

ಬಳಿಕ ಶುರುವಾಗಿದ್ದು ನೇಟ್ ಸ್ಕಿವರ್ ಸ್ಫೋಟಕ ಆಟ. ಕೇವಲ 6 ರನ್ ಗಳಿಸಿದ್ದಾಗ ಸ್ಕಿವರ್ ಕ್ಯಾಚ್ ಕೈಚೆಲ್ಲಿದ್ದು ಯುಪಿಗೆ ದೊಡ್ಡ ಹಿನ್ನಡೆ ಆಯಿತು. ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಅಟ್ಟಿದ ಆಂಗ್ಲ ಆಲ್ ರೌಂಡರ್ ಸ್ಕಿವರ್ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಸ್ಕಿವರ್ 38 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ನೊಂದಿಗೆ ಅಜೇಯ 72 ರನ್ ಚಚ್ಚಿದರು. ಪರಿಣಾಮ ಮುಂಬೈ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿತು.

ಬೃಹತ್ ಗುರಿ ಬೆನ್ನಟ್ಟಿದ ಯುಪಿಗೆ ಉತ್ತಮ ಆರಂಭ ಸಿಗಲಿಲ್ಲ. 21 ರನ್ ಆಗುವ ಹೊತ್ತಿಗೆ 3 ದೊಡ್ಡ ವಿಕೆಟ್‌ಗಳನ್ನು ಕಳೆದುಕೊಂಡಿತು. ಪಂದ್ಯಾವಳಿಯಲ್ಲಿ ಪ್ರಚಂಡ ಫಾರ್ಮ್‌ನಲ್ಲಿದ್ದ ತಹ್ಲಿಯಾ ಮೆಕ್‌ಗ್ರಾತ್ (7) ಸೇರಿದಂತೆ 11 ರನ್‌ಗಳಿಗೆ ನಾಯಕಿ ಅಲಿಸ್ಸಾ ಹೀಲಿ ಔಟಾದರು.

ಅಂತಿಮವಾಗಿ ಯುಪಿ 17.4 ಓವರ್‌ನಲ್ಲಿ 110 ರನ್‌ಗಳಿಗೆ ಸರ್ವಪತನವಾಯಿತು. ಮುಂಬೈ ವೇಗಿ ಇಸ್ಸಿ ವಾಂಗ್ ಹ್ಯಾಟ್ರಿಕ್ ವಿಕೆಟ್ ಕಿತ್ತು ಮಿಂಚಿದರು. ಒಟ್ಟು 4 ಓವರ್ಗಳಲ್ಲಿ ಕೇವಲ 15 ರನ್ ನೀಡಿ 4 ವಿಕೆಟ್ ಪಡೆದರು.
