Babar Azam: ಭಾರತದ ಆತಿಥ್ಯವನ್ನು ಮತ್ತೊಮ್ಮೆ ಕೊಂಡಾಡಿದ ಪಾಕ್ ನಾಯಕ ಬಾಬರ್
Babar Azam: ಬಾಬರ್ ನಾಯಕತ್ವದಲ್ಲಿ ಪಾಕ್ ತಂಡ ಅಮೇರಿಕಾ ಹಾಗೂ ವೆಸ್ಟ್ ಇಂಡೀಸ್ನಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್‌ಗೆ ಭರ್ಜರಿ ತಯಾರಿ ನಡೆಸುತ್ತಿದೆ. ಈ ನಡುವೆ ಪಾಕ್ ತಂಡದ ನಾಯಕನಾಗಿ ಮತ್ತೆ ಆಯ್ಕೆಯಾಗಿರುವ ಬಾಬರ್ ಆಝಂ ಭಾರತದಲ್ಲಿ ನಡೆದ 2023 ರ ಏಕದಿನ ವಿಶ್ವಕಪ್ ವೇಳೆ ಪಾಕ್ ತಂಡಕ್ಕೆ ಸಿಕ್ಕ ಆತಿಥ್ಯಕ್ಕೆ ಭಾರತವನ್ನು ಮನಸಾರೆ ಹಾಡಿ ಹೊಗಳಿದ್ದಾರೆ.
1 / 8
ಕಳೆದೊಂದು ವರ್ಷದೊಳಗೆ ಪಾಕ್ ಕ್ರಿಕೆಟ್ನಲ್ಲಿ ಸಾಕಷ್ಟು ಬದಲಾವಣೆಗಳಾದವು. ನಾಯಕನಿಂದ ಹಿಡಿದು, ಕೋಚ್, ತಂಡದ ಸಹಾಯಕ ಸಿಬ್ಬಂದಿ, ಮಂಡಳಿ ಅಧ್ಯಕ್ಷರವರೆಗೆ ಹಲವು ಬದಲಾವಣೆಗಳಾದವು. ಆದರೂ ತಂಡದ ಪ್ರದರ್ಶನದಲ್ಲಿ ಮಾತ್ರ ಸುಧಾರಣೆ ಕಂಡುಬರಲಿಲ್ಲ.
2 / 8
ಇದೀಗ ತನ್ನ ಬದಲಾವಣೆಯ ಪರ್ವವನ್ನು 2024ರಲ್ಲೂ ಮುಂದುವರೆಸಿರುವ ಪಾಕ್ ಮಂಡಳಿ ಮತ್ತೊಮ್ಮೆ ತನ್ನ ಹಳೆಯ ನಾಯಕನಿಗೆ ತಂಡದ ನಾಯಕತ್ವವನ್ನು ಹಸ್ತಾಂತರಿಸಿದೆ. ಅಂದರೆ 2023ರ ಏಕದಿನ ವಿಶ್ವಕಪ್ವರೆಗೆ ಪಾಕ್ ತಂಡವನ್ನು ಮುನ್ನಡೆಸಿದ್ದ ಬಾಬರ್ ಆಝಂಗೆ ಮತ್ತೆ ತಂಡದ ನಾಯಕತ್ವ ನೀಡಲಾಗಿದೆ.
3 / 8
ವಾಸ್ತವವಾಗಿ 2023ರ ಏಕದಿನ ವಿಶ್ವಕಪ್ನಲ್ಲಿ ಪಾಕ್ ತಂಡ ತೀರ ಕಳಪೆ ಪ್ರದರ್ಶನ ನೀಡಿತ್ತು. ಲೀಗ್ನಲ್ಲಿ ಆಡಿದ್ದ 9 ಪಂದ್ಯಗಳಲ್ಲಿ ತಂಡ ನಾಲ್ಕು ಪಂದ್ಯಗಳನ್ನು ಮಾತ್ರ ಗೆದ್ದು, ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿತ್ತು. ಆ ಬಳಿಕ ಬಾಬರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ವೇಗಿ ಶಾಹೀನ್ ಅಫ್ರಿದಿಗೆ ನಾಯಕತ್ವ ಹಸ್ತಾಂತರಿಸಲಾಗಿತ್ತು.
4 / 8
ಆದರೆ ನಾಯಕ ಬದಲಾದರೂ ತಂಡದ ಪ್ರದರ್ಶನ ಮಾತ್ರ ಬದಲಾಗಲಿಲ್ಲ. ತಂಡ ಈ ಒಂದು ವರ್ಷದಲ್ಲಿ ಗೆದ್ದಿದ್ದಕ್ಕಿಂತ ಸೋತಿದ್ದೆ ಹೆಚ್ಚು ಹೀಗಾಗಿ ಮತ್ತೆ ನಾಯಕತ್ವ ಬದಲಿಸಲು ಮುಂದಾದ ಮಂಡಳಿ, ಮಾಜಿ ನಾಯಕ ಬಾಬರ್ಗೆ ಮತ್ತೆ ತಂಡದ ನಾಯಕತ್ವ ಹಸ್ತಾಂತರಿಸಿದೆ.
5 / 8
ಬಾಬರ್ ನಾಯಕತ್ವದಲ್ಲಿ ಪಾಕ್ ತಂಡ ಅಮೇರಿಕಾ ಹಾಗೂ ವೆಸ್ಟ್ ಇಂಡೀಸ್ನಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್‌ಗೆ ಭರ್ಜರಿ ತಯಾರಿ ನಡೆಸುತ್ತಿದೆ. ಈ ನಡುವೆ ಪಾಕ್ ತಂಡದ ನಾಯಕನಾಗಿ ಮತ್ತೆ ಆಯ್ಕೆಯಾಗಿರುವ ಬಾಬರ್ ಆಝಂ ಭಾರತದಲ್ಲಿ ನಡೆದ 2023 ರ ಏಕದಿನ ವಿಶ್ವಕಪ್ ವೇಳೆ ಪಾಕ್ ತಂಡಕ್ಕೆ ಸಿಕ್ಕ ಆತಿಥ್ಯಕ್ಕೆ ಭಾರತವನ್ನು ಮನಸಾರೆ ಹಾಡಿ ಹೊಗಳಿದ್ದಾರೆ.
6 / 8
ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತವೆ. ಅದರಂತೆ ಏಕದಿನ ವಿಶ್ವಕಪ್ ಆಡಲು ಭಾರತಕ್ಕೆ ಬಂದಿದ್ದ ಪಾಕ್ ತಂಡಕ್ಕೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ನೀಡಲಾಗಿತ್ತು. ಅಲ್ಲದೆ ಇಡೀ ಭಾರತೀಯ ನಾಗರೀಕರು ಪಾಕ್ ತಂಡವನ್ನು ಆದರದಿಂದ ಸ್ವಾಗತಿಸಿದ್ದರು.
7 / 8
ಹಲವು ವರ್ಷಗಳ ಬಳಿಕ ಭಾರತಕ್ಕೆ ಬಂದಿದ್ದ ಪಾಕ್ ಕ್ರಿಕೆಟಿಗರು ಹೈದರಾಬಾದ್ ಬಿರಿಯಾನಿಗೆ ಫಿದಾ ಆಗಿದ್ದರು. ಪಾಕ್ ಆಟಗಾರರು ಇರುವಷ್ಟು ದಿನ ಅವರಿಗೆ ಯಾವುದೇ ಕೊರತೆಯಾಗದಂತೆ ಬಿಸಿಸಿಐ ನೋಡಿಕೊಂಡಿತ್ತು. ಇದೀಗ ಅದನ್ನು ನೆನೆಸಿಕೊಂಡಿರುವ ಬಾಬರ್ ಭಾರತವನ್ನು ಹೊಗಳಿದ್ದಾರೆ.
8 / 8
ಝಲ್ಮಿ ಟಿವಿಯೊಂದಿಗೆ ಮಾತನಾಡಿದ ಬಾಬರ್, ‘2023 ರ ವಿಶ್ವಕಪ್‌ಗೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಮತ್ತು ಭಾರತದಾದ್ಯಂತ ನಮಗೆ ದೊರೆತ ಸ್ವಾಗತ ಅದ್ಭುತವಾಗಿತ್ತು. ಅದೊಂದು ವಿಭಿನ್ನ ಅನುಭವ. ಇದು ಅವರ ಪ್ರೀತಿಯಾಗಿತ್ತು, ಭಾರತೀಯ ಜನರು ನಮ್ಮನ್ನು ತುಂಬಾ ಪ್ರೀತಿಸುತ್ತಿದ್ದರು, ಅವರು ನಮ್ಮ ಕ್ರಿಕೆಟ್ ಅನ್ನು ಮೆಚ್ಚಿದರು ಎಂದಿದ್ದಾರೆ.