- Kannada News Photo gallery Cricket photos IPL 2024 Delhi Capitals all-rounder Mitchell Marsh suffering from hamstring injury
IPL 2024: ಡೆಲ್ಲಿ ಆಲ್ರೌಂಡರ್ ಮಿಚೆಲ್ ಮಾರ್ಷ್ಗೆ ಗಾಯ! ಐಪಿಎಲ್ನಿಂದ ಔಟ್?
IPL 2024, Mitchell Marsh: ತಂಡದ ಸ್ಟಾರ್ ಆಲ್ ರೌಂಡರ್ ಮಿಚೆಲ್ ಮಾರ್ಷ್ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದಾರೆ. ನಿನ್ನೆ ನಡೆದ ಮುಂಬೈ ವಿರುದ್ಧದ ಪಂದ್ಯಕ್ಕೆ ಗೈರಾಗಿದ್ದ ಮಾರ್ಷ್ ಆಟಕ್ಕೆ ಮರಳುವ ಬಗ್ಗೆ ಇನ್ನು ಖಚಿತ ಮಾಹಿತಿ ಸಿಕ್ಕಿಲ್ಲ.
Updated on: Apr 08, 2024 | 5:56 PM

ನಡೆಯುತ್ತಿರುವ ಐಪಿಎಲ್ 17ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕಳಪೆ ಪ್ರದರ್ಶನ ಮುಂದುವರೆಸಿದೆ. ಏಪ್ರಿಲ್ 7 ರಂದು ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ತಮ್ಮ ನಾಲ್ಕನೇ ಪಂದ್ಯದಲ್ಲಿ ಸೋತ ಡೆಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಭಾರಿ ಕುಸಿತ ಕಂಡಿದೆ.

ಈ ನಡುವೆ ತಂಡದಿಂದ ಆಘಾತಕ್ಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ತಂಡದ ಸ್ಟಾರ್ ಆಲ್ ರೌಂಡರ್ ಮಿಚೆಲ್ ಮಾರ್ಷ್ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದಾರೆ. ನಿನ್ನೆ ನಡೆದ ಮುಂಬೈ ವಿರುದ್ಧದ ಪಂದ್ಯಕ್ಕೆ ಗೈರಾಗಿದ್ದ ಮಾರ್ಷ್ ಆಟಕ್ಕೆ ಮರಳುವ ಬಗ್ಗೆ ಇನ್ನು ಖಚಿತ ಮಾಹಿತಿ ಸಿಕ್ಕಿಲ್ಲ.

ಮಂಡಿರಜ್ಜು ಗಾಯದಿಂದಾಗಿ ಮಿಚೆಲ್ ಮಾರ್ಷ್ ಮುಂಬೈ ವಿರುದ್ಧ ಕಣಕ್ಕಿಳಿದಿರಲಿಲ್ಲ. ಹೀಗಾಗಿ ವೇಗಿ ಜೇ ರಿಚರ್ಡ್‌ಸನ್‌ರನ್ನು ಆಡಿಸಲಾಯಿತು. ಇದರ ಪರಿಣಾಮವಾಗಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಒಬ್ಬ ಆಲ್ರೌಂಡರ್ ಕೊರತೆ ಉಂಟಾಯಿತು. ಅಂತಿಮವಾಗಿ ತಂಡ ಇದರ ಭಾರವನ್ನು ಸೋಲಿನ ರೂಪದಲ್ಲಿ ಹೊರಬೇಕಾಯಿತು.

ಇನ್ನು ಮುಂಬೈ ವಿರುದ್ಧದ ಪಂದ್ಯ ಮುಗಿದ ಬಳಿಕ ಮಿಚೆಲ್ ಮಾರ್ಷ್ ಗಾಯದ ಬಗ್ಗೆ ಮಾಹಿತಿ ನೀಡಿದ ಡೆಲ್ಲಿ ತಂಡದ ಸಹಾಯಕ ಕೋಚ್ ಪ್ರವೀಣ್ ಆಮ್ರೆ, ಮಿಚೆಲ್ ಮಾರ್ಷ್ ಕನಿಷ್ಠ ಒಂದು ವಾರ ತಂಡದಿಂದ ಹೊರಗುಳಿಯುವ ಸಾಧ್ಯತೆಗಳಿವೆ ಎಂದಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ನಮ್ಮ ಕೆಲವು ಆಟಗಾರರು ಗಾಯಗೊಂಡಿದ್ದಾರೆ. ಅದರಲ್ಲಿ ಕೊಂಚ ಆತಂಕ ಹುಟ್ಟಿಸುವುದೆಂದರೆ ಅದು ಮಿಚ್ ಮಾರ್ಷ್ ಇಂಜುರಿ. ಸದ್ಯ ಅವರು ಸ್ಕ್ಯಾನ್‌ಗೆ ಹೋಗಿದ್ದು, ಫಿಸಿಯೋ ಒಂದು ವಾರದಲ್ಲಿ ವರದಿಯನ್ನು ನಮಗೆ ನೀಡುತ್ತಾರೆ.

ಆಗ ವಾಸ್ತವ ಸ್ಥಿತಿ ಏನೆಂದು ತಿಳಿಯಲಿದೆ. ಆ ನಂತರ ಮಿಚೆಲ್ ಮಾರ್ಷ್ ಇಡೀ ಸೀಸನ್ ಆಡುತ್ತಾರೆಯೇ ಅಥವಾ ಇಲ್ಲವೇ ಎಂಬುದು ವರದಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದಿದ್ದಾರೆ. ಆಮ್ರೆ ಹೇಳಿಕೆ ಡೆಲ್ಲಿಗೆ ಕೊಂಚ ಹಿನ್ನಡೆಯನ್ನುಂಟು ಮಾಡಿದೆ. ಏಕೆಂದರೆ ಸತತ ಸೋಲುಗಳಿಂದ ಕಂಗೆಟ್ಟಿರುವ ತಂಡಕ್ಕೆ ಮಾರ್ಷ್ ಅಲಭ್ಯತೆ ಇನ್ನಷ್ಟು ಸಂಕಷ್ಟ ತರಲಿದೆ.




