T20 World Cup 2024: ಟಿ20 ವಿಶ್ವಕಪ್ನಲ್ಲೂ ಕಳಪೆ ಪ್ರದರ್ಶನ; ಮತ್ತೆ ಬಾಬರ್ ಆಝಂ ತಲೆದಂಡ?
T20 World Cup 2024: ಎರಡನೇ ಬಾರಿಗೆ ತಂಡದ ನಾಯಕತ್ವವಹಿಸಿಕೊಂಡಿದ್ದ ಬಾಬರ್ ಆಝಂ ಕಥೆ ಏನಾಗಲಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇದಕ್ಕೆ ಪೂರಕವಾಗಿ ಇದೀಗ ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಪಿಸಿಬಿ ಬಾಬರ್ ಭವಿಷ್ಯದ ಬಗ್ಗೆ ಈಗಾಗಲೇ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
1 / 6
ಟಿ20 ವಿಶ್ವಕಪ್ ಗೆಲ್ಲುವ ಲೆಕ್ಕಾಚಾರ ಹಾಕಿಕೊಂಡು ಮಿನಿ ವಿಶ್ವಸಮರಕ್ಕೆ ಎಂಟ್ರಿಕೊಟ್ಟಿದ್ದ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಮೊದಲು ಅಮೆರಿಕ ವಿರುದ್ಧ ಸೋತಿದ್ದ ಬಾಬರ್ ಪಡೆ ಆ ಬಳಿಕ ಟೀಂ ಇಂಡಿಯಾ ವಿರುದ್ಧ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿತ್ತು.
2 / 6
ಕೆನಡಾ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಪಾಕಿಸ್ತಾನ ತಂಡ ಇದೀಗ ಟಿ20 ವಿಶ್ವಕಪ್‌ನ ಸೂಪರ್ 8 ತಲುಪುವುದು ಕಷ್ಟಕರ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಪಾಕಿಸ್ತಾನ ತಂಡವು ಸೂಪರ್ 8 ತಲುಪದಿದ್ದರೆ ಅನೇಕ ಆಟಗಾರರನ್ನು ತಂಡದಿಂದ ಕೈಬಿಡಬಹುದು ಎಂದು ಹೇಳಲಾಗುತ್ತಿದೆ.
3 / 6
ಇದರೊಂದಿಗೆ ಎರಡನೇ ಬಾರಿಗೆ ತಂಡದ ನಾಯಕತ್ವವಹಿಸಿಕೊಂಡಿದ್ದ ಬಾಬರ್ ಆಝಂ ಕಥೆ ಏನಾಗಲಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇದಕ್ಕೆ ಪೂರಕವಾಗಿ ಇದೀಗ ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಪಿಸಿಬಿ ಬಾಬರ್ ಭವಿಷ್ಯದ ಬಗ್ಗೆ ಈಗಾಗಲೇ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
4 / 6
ಜಿಯೋ ನ್ಯೂಸ್‌ನ ಸುದ್ದಿ ಪ್ರಕಾರ, ಪಾಕಿಸ್ತಾನದ ಕಳಪೆ ಪ್ರದರ್ಶನದ ಹೊರತಾಗಿಯೂ, ಬಾಬರ್ ಆಝಂ ಅವರನ್ನು ನಾಯಕತ್ವದಿಂದ ತೆಗೆದುಹಾಕುವುದಿಲ್ಲ ಎಂದು ವರದಿಯಾಗಿದೆ. ಬಾಬರ್ ಅವರನ್ನು ನಾಯಕನಾಗಿ ಉಳಿಸಿಕೊಳ್ಳಲು ಪಿಸಿಬಿ ನಿರ್ಧರಿಸಿದೆ.
5 / 6
ಮುಂದಿನ ವರ್ಷ ನಡೆಯಲ್ಲಿರುವ ಅಂದರೆ 2025 ರಲ್ಲಿ ನಡೆಯಲ್ಲಿರುವ ಚಾಂಪಿಯನ್ಸ್ ಟ್ರೋಫಿವರೆಗೆ ಬಾಬರ್ ಆಝಂ ಅವರಿಗೆ ತಂಡದ ನಾಯಕತ್ವವನ್ನು ನೀಡಲಾಗಿದೆ ಮತ್ತು ಆ ಪಂದ್ಯಾವಳಿಯ ಫಲಿತಾಂಶದ ನಂತರವೇ ಬಾಬರ್ ಅವರನ್ನು ನಾಯಕರಾಗಿ ಮುಂದುವರೆಸಬೇಕೇ? ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ವರದಿಯಾಗಿದೆ.
6 / 6
ಇತ್ತೀಚೆಗೆ, ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಪಾಕಿಸ್ತಾನಿ ತಂಡದಲ್ಲಿ ಮೇಜರ್ ಸರ್ಜರಿಯ ಅವಶ್ಯಕತೆ ಇದೆ ಎಂದಿದ್ದರು. ಈ ಮೂಲಕ ಟಿ20 ವಿಶ್ವಕಪ್ನಿಂದ ಪಾಕ್ ತಂಡ ಹೊರಬಿದ್ದ ನಂತರ ತಂಡದಲ್ಲಿ ಬದಲಾವಣೆಯ ಗಾಳಿ ಬೀಸಲಿದೆ ಎಂಬ ಸುಳಿವು ನೀಡಿದ್ದರು. ಆದರೆ ನಖ್ವಿ ಅವರ ಈ ಹೇಳಿಕೆಯ ನಂತರ ಮಂಡಳಿಯಲ್ಲಿ ಕೋಲಾಹಲ ಎದ್ದಿತ್ತು. ಹೀಗಾಗಿ ಈಗ ಯು-ಟರ್ನ್ ತೆಗೆದುಕೊಂಡಿದ್ದು, ತಂಡದ ಜೊತೆ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.