ಶತಕವಿಲ್ಲದೆ ಸಾವಿರ ದಿನಗಳನ್ನು ಪೂರೈಸಿದ ಬಾಬರ್ ಆಝಂ

Updated on: Oct 21, 2025 | 9:54 AM

Pakistan vs South Africa, 2nd Test: ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಪಾಕಿಸ್ತಾನ್ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 259 ರನ್ ಕಲೆಹಾಕಿದೆ.

1 / 5
ಪಾಕಿಸ್ತಾನ್ ತಂಡದ ಸ್ಟಾರ್ ಬ್ಯಾಟರ್ ಬಾಬರ್ ಆಝಂ ಟೆಸ್ಟ್ ಶತಕ ಬಾರಿಸದೇ ಮೂರು ವರ್ಷಗಳೇ ಕಳೆದಿವೆ. ಈ ಕಾಯುವಿಕೆ ಇದೀಗ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಮುಂದುವರೆದಿದೆ. ಲಾಹೋರ್​ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಬರ್ 23, 42 ರನ್​ಗಳಿಸಿ ಔಟಾಗಿದ್ದರು.

2 / 5
ಇದೀಗ ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಕೇವಲ 16 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಅಂದರೆ 2022 ರಿಂದ 28 ಟೆಸ್ಟ್ ಇನಿಂಗ್ಸ್ ಆಡಿರುವ ಬಾಬರ್ ಒಂದೇ ಒಂದು ಸೆಂಚುರಿ ಬಾರಿಸಲು ಸಾಧ್ಯವಾಗಿಲ್ಲ.

3 / 5
ಇನ್ನು ಬಾಬರ್ ಆಝಂ ಕೊನೆಯ ಬಾರಿಗೆ ಟೆಸ್ಟ್ ಸೆಂಚುರಿ ಸಿಡಿಸಿದ್ದು 2022 ರಲ್ಲಿ. ಕರಾಚಿಯಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ 161 ರನ್ ಬಾರಿಸಿದ್ದು ಕೊನೆ. ಇದಾದ ಬಳಿಕ ಅವರಿಗೆ ಮೂರಂಕಿ ಮೊತ್ತ ಗಳಿಸಲು ಸಾಧ್ಯವಾಗಿಲ್ಲ ಎಂಬುದೇ ಅಚ್ಚರಿ.

4 / 5
ಅಷ್ಟೇ ಅಲ್ಲದೆ ಕಳೆದ 28 ಟೆಸ್ಟ್ ಇನಿಂಗ್ಸ್​ಗಳಲ್ಲಿ ಕಲೆಹಾಕಿದ್ದು ಕೇವಲ 651 ರನ್​ಗಳು ಮಾತ್ರ. ಇದರ ನಡುವೆ ಬಾರಿಸಿರುವುದು ಕೇವಲ  3 ಅರ್ಧಶತಕಗಳನ್ನು ಮಾತ್ರ ಎಂದರೆ ನಂಬಲೇಬೇಕು. ಅಂದರೆ ಕೇವಲ 24 ರ ಸರಾಸರಿಯಲ್ಲಿ ರನ್ ಕಲೆಹಾಕಿರುವ ಬಾಬರ್ ಆಝಂ ಅವರನ್ನು ತಂಡದಿಂದ ಕೈ ಬಿಡಬೇಕೆಂಬ ಕೂಗುಗಳು ಕೇಳಿ ಬರಲಾರಂಭಿಸಿದೆ.

5 / 5
ಒಟ್ಟಿನಲ್ಲಿ 1030 ದಿನಗಳಿಂದ ಟೆಸ್ಟ್ ಶತಕದ ಬರ ಅನುಭವಿಸುತ್ತಿರುವ ಬಾಬರ್ ಆಝಂ ಇದೀಗ ಟೆಸ್ಟ್ ತಂಡದಿಂದಲೇ ಹೊರಬೀಳುವ ಭೀತಿಯಲ್ಲಿದ್ದಾರೆ. ಇದಾಗ್ಯೂ ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್​ ಮೂಲಕ ಸಾವಿರ ದಿನಗಳ ಕಾಯುವಿಕೆಯನ್ನು ಅಂತ್ಯಗೊಳಿಸಲಿದ್ದಾರಾ ಕಾದು ನೋಡಬೇಕಿದೆ.

Published On - 9:53 am, Tue, 21 October 25