ವಿಶ್ವಕಪ್ ಮಧ್ಯದಲ್ಲೇ ತಂಡವನ್ನು ತೊರೆದು ತವರಿಗೆ ಮರಳಿದ ಬಾಂಗ್ಲಾ ನಾಯಕ ಶಕೀಬ್..!

|

Updated on: Oct 26, 2023 | 8:35 AM

ICC World Cup 2023: ತಂಡದ ನಾಯಕ ಶಕೀಬ್ ಅಲ್ ಹಸನ್ ತಂಡವನ್ನು ಮಧ್ಯದಲ್ಲೇ ಬಿಟ್ಟು ವ್ಯಕ್ತಿಯೊಬ್ಬರನ್ನು ಭೇಟಿ ಮಾಡಲು ಢಾಕಾಗೆ ಹೋಗಿದ್ದಾರೆ ಎಂದು ವರದಿಯಾಗಿದೆ. ವರದಿ ಪ್ರಕಾರ ಶಕೀಬ್, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ನಂತರ ತನ್ನ ಮಾರ್ಗದರ್ಶಕ ನಜ್ಮುಲ್ ಅಬೇದಿನ್ ಫಹೀಮ್ ಅವರನ್ನು ಭೇಟಿ ಮಾಡಲು ಢಾಕಾಗೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.

1 / 9
2023ರ ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ತಂಡಕ್ಕೆ ಇಲ್ಲಿಯವರೆಗೆ ವಿಶೇಷವಾದದ್ದೇನೂ ಸಾಧ್ಯವಾಗಿಲ್ಲ. ಈ ತಂಡ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಬಾಂಗ್ಲಾದೇಶ ಇದುವರೆಗೆ ಒಟ್ಟು ಐದು ಪಂದ್ಯಗಳನ್ನು ಆಡಿದ್ದು, ಒಂದರಲ್ಲಿ ಮಾತ್ರ ಗೆದ್ದಿದೆ. ನಾಲ್ಕರಲ್ಲಿ ಸೋಲನ್ನು ಎದುರಿಸಬೇಕಾಗಿದೆ.

2 / 9
ಇಂತಹ ಪರಿಸ್ಥಿತಿಯಲ್ಲಿ ತಂಡದ ನಾಯಕ ಶಕೀಬ್ ಅಲ್ ಹಸನ್ ತಂಡವನ್ನು ಮಧ್ಯದಲ್ಲೇ ಬಿಟ್ಟು ವ್ಯಕ್ತಿಯೊಬ್ಬರನ್ನು ಭೇಟಿ ಮಾಡಲು ಢಾಕಾಗೆ ಹೋಗಿದ್ದಾರೆ ಎಂದು ವರದಿಯಾಗಿದೆ.

3 / 9
ವರದಿ ಪ್ರಕಾರ ಶಕೀಬ್, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ನಂತರ ತನ್ನ ಮಾರ್ಗದರ್ಶಕ ನಜ್ಮುಲ್ ಅಬೇದಿನ್ ಫಹೀಮ್ ಅವರನ್ನು ಭೇಟಿ ಮಾಡಲು ಢಾಕಾಗೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.

4 / 9
ಶಕೀಬ್ ಢಾಕಾ ತಲುಪಿ ನೇರವಾಗಿ ಅಲ್ಲಿನ ಶೇರ್-ಎ-ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂಗೆ ಹೋಗಿದ್ದು, ಅಲ್ಲಿ ಮೂರು ಗಂಟೆಗಳ ಕಾಲ ಅಭ್ಯಾಸ ನಡೆಸಿದ್ದಾರೆ. ಈ ವೇಳೆ ಶಕೀಬ್ ಥ್ರೋಡೌನ್​ನಲ್ಲಿ ಅಭ್ಯಾಸ ನಡೆಸಿದ್ದು, ಮೂರು ದಿನಗಳ ಕಾಲ ಅಲ್ಲಿಯೇ ಅಭ್ಯಾಸ ನಡೆಸಲಿದ್ದಾರೆ ಎಂದು ಫಹೀಮ್ ಹೇಳಿದ್ದಾರೆ. ಇದಾದ ಬಳಿಕ ಮತ್ತೆ ಕೋಲ್ಕತ್ತಾಗೆ ಮರಳಲಿದ್ದಾರೆ.

5 / 9
ಈ ಬಾರಿಯ ವಿಶ್ವಕಪ್‌ನಲ್ಲಿ ಶಕೀಬ್ ಅವರ ಸಾಧನೆ ವಿಶೇಷವೇನೂ ಆಗಿಲ್ಲ. ಬ್ಯಾಟಿಂಗ್‌ನಲ್ಲಿ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಶಕೀಬ್, ಆಡಿರುವ ನಾಲ್ಕು ಪಂದ್ಯಗಳಲ್ಲಿ ಒಂದೇ ಒಂದು ಅರ್ಧಶತಕವನ್ನು ಗಳಿಸಿಲ್ಲ.

6 / 9
ನ್ಯೂಜಿಲೆಂಡ್ ವಿರುದ್ಧ ಶಕೀಬ್ 40 ರನ್​ಗಳ ಇನ್ನಿಂಗ್ಸ್ ಆಡಿದ್ದರು. ಆದರೆ ಇದನ್ನು ಹೊರತುಪಡಿಸಿ ಯಾವುದೇ ಪರಿಣಾಮಕಾರಿ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಬೌಲಿಂಗ್‌ನಲ್ಲಿ ಅವರ ಪ್ರದರ್ಶನ ಉತ್ತಮವಾಗಿದೆ. ನಾಲ್ಕು ಪಂದ್ಯಗಳಿಂದ ಶಕೀಭ್ ಆರು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

7 / 9
ವರದಿಯಾಗಿರುವಂತೆ ಶಕೀಬ್, ಅಕ್ಟೋಬರ್ 27 ರಂದು ನೆದರ್ಲ್ಯಾಂಡ್ಸ್ ವಿರುದ್ಧದ ವಿಶ್ವಕಪ್ ಪಂದ್ಯದ ಮುನ್ನಾದಿನದಂದು ಬಾಂಗ್ಲಾದೇಶ ತಂಡವನ್ನು ಸೇರಿಕೊಳ್ಳಲಿದ್ದಾರೆ.

8 / 9
ಬಾಂಗ್ಲಾದೇಶ ತನ್ನ ಮುಂದಿನ ಎರಡು ಪಂದ್ಯಗಳನ್ನು ಕೋಲ್ಕತ್ತಾದಲ್ಲಿ ಆಡಲಿದೆ. ಇದಕ್ಕಾಗಿ ತಂಡ ಕೋಲ್ಕತ್ತಾ ತಲುಪಿದ್ದು, ಅಕ್ಟೋಬರ್ 28 ರಂದು ನೆದರ್ಲ್ಯಾಂಡ್ಸ್ ವಿರುದ್ಧ ಪಂದ್ಯವನ್ನು ಆಡಲಿದೆ.

9 / 9
ಹಾಗೆಯೇ ಅಕ್ಟೋಬರ್ 31 ರಂದು ಪಾಕಿಸ್ತಾನದ ವಿರುದ್ಧ ಪಂದ್ಯವನ್ನು ಆಡಲಿರುವ ಬಾಂಗ್ಲಾ ತಂಡಕ್ಕೆ ಈ ಎರಡೂ ಪಂದ್ಯಗಳು ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಸೆಮಿಫೈನಲ್‌ ರೇಸ್‌ನಲ್ಲಿ ಉಳಿಯಲು, ಬಾಂಗ್ಲಾ ಈ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕು.