
BBL 2026: ಬಿಗ್ ಬ್ಯಾಷ್ ಲೀಗ್ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಅದು ಕೂಡ ಬ್ಯಾಟರ್ಗಳ ಸಿಡಿಲಬ್ಬರದೊಂದಿಗೆ. ಈ ಸಿಡಿಲಬ್ಬರದೊಂದಿಗೆ ಬಿಗ್ ಬ್ಯಾಷ್ ಲೀಗ್ ಸೀಸನ್ವೊಂದರಲ್ಲಿ ಅತ್ಯಧಿಕ ಸೆಂಚುರಿಗಳು ಮೂಡಿಬಂದಿವೆ.

ಅಂದರೆ ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲೇ ಈ ಬಾರಿಯ ಆವೃತ್ತಿಯಲ್ಲಿ ಅತೀ ಹೆಚ್ಚು ಶತಕಗಳು ದಾಖಲಾಗಿವೆ. BBL 2025-26 ರಲ್ಲಿ ಈವರೆಗೆ 8 ಬ್ಯಾಟರ್ಗಳು ಬರೋಬ್ಬರಿ 9 ಸೆಂಚುರಿ ಸಿಡಿಸಿದ್ದಾರೆ. ಇದಕ್ಕೂ ಮುನ್ನ ಬಿಬಿಎಲ್ನಲ್ಲಿ ಆರಕ್ಕಿಂತ ಅಧಿಕ ಶತಕ ಮೂಡಿಬಂದಿರಲಿಲ್ಲ ಎಂಬುದು ವಿಶೇಷ.

2022-23 ರ ಸೀಸನ್ನಲ್ಲಿ ಒಟ್ಟು 6 ಶತಕಗಳು ಮೂಡಿಬಂದಿದ್ದವು. ಅದಕ್ಕೂ ಮುನ್ನ 2015-16 ರಲ್ಲಿ 5 ಸೆಂಚುರಿಗಳು ದಾಖಲಾಗಿದ್ದವು. ಅಲ್ಲದೆ ಕಳೆದ ಸೀಸನ್ನಲ್ಲಿ ದಾಖಲಾದ ಒಟ್ಟು ಶತಕಗಳ ಸಂಖ್ಯೆ ಕೇವಲ 5 ಮಾತ್ರ. ಆದರೆ ಈ ಬಾರಿ ಬ್ಯಾಟರ್ಗಳು ಭರ್ಜರಿ ಪ್ರದರ್ಶನ ನೀಡಿದ್ದಾರೆ.

ಅದರಲ್ಲೂ ಈ ಬಾರಿ ಆಸ್ಟ್ರೇಲಿಯನ್ ದಾಂಡಿಗ ಡೇವಿಡ್ ವಾರ್ನರ್ 2 ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲೇ ಸೀಸನ್ವೊಂದರಲ್ಲಿ ಎರಡು ಶತಕ ಬಾರಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಡೇವಿಡ್ ವಾರ್ನರ್ ತಮ್ಮದಾಗಿಸಿಕೊಂಡಿದ್ದಾರೆ.

ಡೇವಿಡ್ ವಾರ್ನರ್ ಅಲ್ಲದೆ, ಟಿಮ್ ಸೈಫರ್ಟ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಫಿನ್ ಅಲೆನ್, ಮ್ಯಾಟ್ ರೆನ್ಶಾ, ಜ್ಯಾಕ್ ವೈಲ್ಡರ್ಮತ್, ಸ್ಯಾಮ್ ಹರ್ಪರ್ ಸಹ ಈ ಬಾರಿಯ ಬಿಗ್ ಬ್ಯಾಷ್ ಲೀಗ್ನಲ್ಲಿ ಶತಕ ಸಿಡಿಸಿದ್ದಾರೆ. ಇದರೊಂದಿಗೆ ಬಿಗ್ ಬ್ಯಾಷ್ ಲೀಗ್ ಸೀಸನ್-15 ಅತ್ಯಧಿಕ ಸೆಂಚುರಿ ಮೂಡಿಬಂದ ಆವೃತ್ತಿಯಾಗಿ ಮಾರ್ಪಟ್ಟಿದೆ.