7 ಇನಿಂಗ್ಸ್​ನಲ್ಲಿ 3 ಶತಕ… ದಾಖಲೆಗಳನ್ನು ಉಡೀಸ್ ಮಾಡಿದ ಸ್ಟೀವ್ ಸ್ಮಿತ್

|

Updated on: Jan 12, 2025 | 9:53 AM

Steve Smith Records: ಬಿಗ್ ಬ್ಯಾಷ್ ಲೀಗ್​ನಲ್ಲಿ ಭರ್ಜರಿ ಸೆಂಚುರಿಗಳನ್ನು ಬಾರಿಸುತ್ತಾ ಸ್ಟೀವ್ ಸ್ಮಿತ್ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಅದು ಕೂಡ ಕೇವಲ 32 ಇನಿಂಗ್ಸ್​ಗಳ ಮೂಲಕ ಎಂಬುದು ವಿಶೇಷ. ಅಂದರೆ 100 ಪಂದ್ಯಗಳಲ್ಲಿ ಕಣಕ್ಕಿಳಿದು ಬರೆದ ದಾಖಲೆಗಳನ್ನು ಸ್ಮಿತ್ ಕೇವಲ 32 ಪಂದ್ಯಗಳ ಮೂಲಕ ಅಳಿಸಿ ಹಾಕಿದ್ದಾರೆ.

1 / 6
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್​ನಲ್ಲಿ ಸ್ಟೀವ್ ಸ್ಮಿತ್ ಅಬ್ಬರ ಮುಂದುವರೆದಿದೆ. ಅದು ಕೂಡ ಬ್ಯಾಕ್ ಟು ಬ್ಯಾಕ್ ಶತಕಗಳನ್ನು ಸಿಡಿಸುವ ಮೂಲಕ ಎಂಬುದು ವಿಶೇಷ. ಅಂದರೆ ಬಿಗ್ ಬ್ಯಾಷ್ ಲೀಗ್​ನಲ್ಲಿ ಆಡಿದ ಕೊನೆಯ 7 ಇನಿಂಗ್ಸ್​​ಗಳಲ್ಲಿ ಸ್ಮಿತ್ ಬರೋಬ್ಬರಿ 3 ಶತಕ ಬಾರಿಸಿದ್ದಾರೆ.

2 / 6
ಸಿಡ್ನಿ ಸಿಕ್ಸರ್ಸ್ ಪರ ಕಣಕ್ಕಿಳಿಯುತ್ತಿರುವ ಸ್ಟೀವ್ ಸ್ಮಿತ್, ಪರ್ತ್ ಸ್ಕಾಚರ್ಸ್ ವಿರುದ್ಧದ ಪಂದ್ಯದಲ್ಲಿ 64 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 10 ಫೋರ್​ಗಳೊಂದಿಗೆ 121 ರನ್ ಚಚ್ಚಿದ್ದಾರೆ. ಈ ಶತಕದೊಂದಿಗೆ ಬಿಗ್ ಬ್ಯಾಷ್ ಲೀಗ್​ನಲ್ಲಿ ಅತ್ಯಧಿಕ ಶತಕ ಸಿಡಿಸಿದ ಬ್ಯಾಟರ್​​ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

3 / 6
ಇದಕ್ಕೂ ಮುನ್ನ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದದ್ದು ಬೆನ್​ ಮೆಕ್​ಡಮಾರ್ಟ್. ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟರ್ 100 ಪಂದ್ಯಗಳಲ್ಲಿ 3 ಶತಕ ಸಿಡಿಸಿ ಈ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನು ಸ್ಟೀವ್ ಸ್ಮಿತ್ ಸರಿಗಟ್ಟಿದ್ದಾರೆ.

4 / 6
ಬಿಗ್ ಬ್ಯಾಷ್ ಲೀಗ್​ನಲ್ಲಿ ಈವರೆಗೆ 32 ಇನಿಂಗ್ಸ್ ಆಡಿರುವ ಸ್ಟೀವ್ ಸ್ಮಿತ್ 3 ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ಈ ಮೂಲಕ ಬಿಬಿಎಲ್ ಇತಿಹಾಸದಲ್ಲಿ ಅತ್ಯಧಿಕ ಸೆಂಚುರಿ ಸಿಡಿಸಿದ ಬ್ಯಾಟರ್​​ಗಳ ಪಟ್ಟಿಯಲ್ಲಿ ಜಂಟಿಯಾಗಿ ಅಗ್ರಸ್ಥಾನ ಅಲಂಕರಿಸಿದ್ದಾರೆ.

5 / 6
ಹಾಗೆಯೇ ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲೇ ಅತ್ಯುತ್ತಮ ಸರಾಸರಿಯೊಂದಿಗೆ 1000 ರನ್ ಪೂರೈಸಿದ ದಾಖಲೆ ಕೂಡ ಸ್ಟೀವ್ ಸ್ಮಿತ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಮಾಜಿ ಆಟಗಾರ ಬ್ರಾಡ್ ಹಾಡ್ಜ್ ಹೆಸರಿನಲ್ಲಿತ್ತು. ಹಾಡ್ಜ್​ 42.78 ಸರಾಸರಿಯೊಂದಿಗೆ ಸಾವಿರ ರನ್ ಪೂರೈಸಿದ್ದರು.

6 / 6
ಇದೀಗ ಸ್ಟೀವ್ ಸ್ಮಿತ್ ಕೇವಲ 32 ಇನಿಂಗ್ಸ್​ಗಳ ಮೂಲಕ 1000ಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. ಅದು ಕೂಡ 45.88 ಸರಾಸರಿಯಲ್ಲಿ ಎಂಬುದು ವಿಶೇಷ. ಈ ಮೂಲಕ ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲೇ ಅತ್ಯುತ್ತಮ  ಸರಾಸರಿಯೊಂದಿಗೆ 1000 ರನ್ ಕಲೆಹಾಕಿದ ದಾಖಲೆಯನ್ನು ಸ್ಟೀವ್ ಸ್ಮಿತ್ ತಮ್ಮದಾಗಿಸಿಕೊಂಡಿದ್ದಾರೆ.