IPL 2024 NEWS: ಐಪಿಎಲ್ 2024 ಕುರಿತ ಬಿಗ್ ನ್ಯೂಸ್: ಈ ಬಾರಿ ಟೂರ್ನಿ ಎಲ್ಲಿ ನಡೆಯಲಿದೆ ಗೊತ್ತೇ?

|

Updated on: Feb 15, 2024 | 8:04 AM

IPL 2024 Venue: ಲೋಕಸಭೆ ಚುನಾವಣೆಯಿಂದಾಗಿ ಐಪಿಎಲ್ 17ನೇ ಸೀಸನ್ ಯುಎಇ ಅಥವಾ ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರವಾಗಲಿದೆ ಎಂಬ ಊಹಾಪೋಹಗಳು ಈ ಹಿಂದೆ ಇದ್ದವು. ಆದರೆ, ಈಗ ಈ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 17 ನೇ ಸೀಸನ್‌ನ ಅಂತಿಮ ಪಂದ್ಯ ಮೇ 26 ರಂದು ಆಯೋಜಿಸಲಾಗಿದೆ. ಟೂರ್ನಿ ಎಲ್ಲಿ ನಡೆಯಲಿದೆ ನೋಡಿ.

1 / 6
ಇಂಡಿಯನ್ ಪ್ರೀಮಿಯರ್ ಲೀಗ್‌ನ 17 ನೇ ಆವೃತ್ತಿ ಎಲ್ಲಿ ನಡೆಯಲಿದೆ ಎಂಬ ಮಾತು ಕಳೆದ ಕೆಲವು ತಿಂಗಳುಗಳಿಂದ ಕೇಳಿಬರುತ್ತಲೇ ಇತ್ತು. ಆದರೀಗ ಈ ಬಗ್ಗೆ  ಐಪಿಎಲ್ ಅಧ್ಯಕ್ಷರು ಖಚಿತಪಡಿಸಿದ್ದು, ಐಪಿಎಲ್ 2024 ಟೂರ್ನಿ ಭಾರತದಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ. ಸಂಪೂರ್ಣ ಟೂರ್ನಿ ದೇಶದಲ್ಲೇ ನಡೆಯಲಿದೆಯಂತೆ.

2 / 6
ಲೋಕಸಭೆ ಚುನಾವಣೆಯಿಂದಾಗಿ ಐಪಿಎಲ್ 17ನೇ ಸೀಸನ್ ಯುಎಇ ಅಥವಾ ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರವಾಗಲಿದೆ ಎಂಬ ಊಹಾಪೋಹಗಳು ಈ ಹಿಂದೆ ಇದ್ದವು. ಆದರೆ, ಈಗ ಈ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 17 ನೇ ಸೀಸನ್‌ನ ಅಂತಿಮ ಪಂದ್ಯ ಮೇ 26 ರಂದು ನಡೆಯಲಿದೆ ಎಂದಿದ್ದಾರೆ.

3 / 6
ಐಪಿಎಲ್ 2024ರ ಸಂಪೂರ್ಣ ವೇಳಾಪಟ್ಟಿ ಇನ್ನೂ ಅಂತಿಮಗೊಂಡಿಲ್ಲ. ಆದರೆ, ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಭಾರತೀಯ ಆಟಗಾರರಿಗೆ 8ರಿಂದ 10 ದಿನಗಳ ಕಾಲಾವಕಾಶ ನೀಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಯಸಿದೆಯಂತೆ.

4 / 6
ಸುದ್ದಿ ಸಂಸ್ಥೆ ಐಎಎನ್‌ಎಸ್‌ನೊಂದಿಗೆ ಮಾತನಾಡಿದ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್, 17 ನೇ ಸೀಸನ್ ಭಾರತದಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ. ದಿನಾಂಕವನ್ನು ಬಿಸಿಸಿಐ ಶೀಘ್ರದಲ್ಲೇ ಪ್ರಕಟಿಸಲಿದೆ. ನಾವು ಲೋಕಸಭೆ ಚುನಾವಣೆ ದಿನಾಂಕಗಳಿಗಾಗಿ ಕಾಯುತ್ತಿದ್ದೇವೆ. ಲೋಕಸಭೆ ಚುನಾವಣೆ ಘೋಷಣೆಯಾದ ತಕ್ಷಣ ಐಪಿಎಲ್ 17ನೇ ಸೀಸನ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ.

5 / 6
ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, ಐಪಿಎಲ್ ಸೀಸನ್ 17 ರ ಅಂತಿಮ ಪಂದ್ಯವನ್ನು ಮೇ 26 ರವರೆಗೆ ಆಡಬಹುದು. ಜೂನ್ 5ರಿಂದ ಟಿ20 ವಿಶ್ವಕಪ್ ಆರಂಭವಾಗಲಿರುವ ಕಾರಣ ಬಿಸಿಸಿಐ ಆಟಗಾರರಿಗೆ ತಯಾರಿ ನಡೆಸಲು 8ರಿಂದ 10 ದಿನಗಳ ಕಾಲಾವಕಾಶ ನೀಡಬಹುದು. ಆದಾಗ್ಯೂ, ಈ ಬಗ್ಗೆ ಇನ್ನೂ ಅಧಿಕೃತ ದೃಢೀಕರಣವಿಲ್ಲ.

6 / 6
2009 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಐಪಿಎಲ್ ಎರಡನೇ ಸೀಸನ್ ದಕ್ಷಿಣ ಆಫ್ರಿಕಾದಲ್ಲಿ ನಡೆಯಿತು. ಅಲ್ಲದೆ 2014ರಲ್ಲಿ ಲೋಕಸಭೆ ಚುನಾವಣೆಯಿಂದಾಗಿ ಐಪಿಎಲ್‌ನ ಮೊದಲಾರ್ಧ ಯುಎಇಗೆ ಸ್ಥಳಾಂತರಗೊಂಡಿತ್ತು. ಆದರೆ, ಈ ಬಾರಿ ಲೋಕಸಭೆ ಚುನಾವಣೆ ವೇಳೆ ಬಿಸಿಸಿಐ ಐಪಿಎಲ್ 17ನೇ ಸೀಸನ್ ಅನ್ನು ಭಾರತದಲ್ಲಿ ಆಯೋಜಿಸಲು ತೀರ್ಮಾನಿಸಿದೆ.