ಸಚಿನ್ ತೆಂಡೂಲ್ಕರ್ ಬಿಸಿಸಿಐನ ಮುಂದಿನ ಅಧ್ಯಕ್ಷ? ಕ್ರಿಕೆಟ್ ದೇವರು ಹೇಳಿದ್ದೇನು?

Updated on: Sep 11, 2025 | 8:46 PM

Next BCCI President: ರೋಜರ್ ಬಿನ್ನಿ ಅವರ ರಾಜೀನಾಮೆಯಿಂದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೊಸ ಅಧ್ಯಕ್ಷರನ್ನು ಹುಡುಕುತ್ತಿದೆ. ಸಚಿನ್ ತೆಂಡೂಲ್ಕರ್ ಅವರ ಹೆಸರು ಚರ್ಚೆಯಲ್ಲಿದ್ದರೂ, ಅವರು ಈ ಹುದ್ದೆಗೆ ಸ್ಪರ್ಧಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸೆಪ್ಟೆಂಬರ್ 2025ರಲ್ಲಿ ನಡೆಯುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು.

1 / 5
ವಿಶ್ವ ಕ್ರಿಕೆಟ್​ನ ದೊಡ್ಡಣ್ಣ ಬಿಸಿಸಿಐ ಹೊಸ ಅಧ್ಯಕ್ಷರನ್ನು ಹುಡುಕುತ್ತಿದೆ. ವಾಸ್ತವವಾಗಿ 2022 ರಿಂದ ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತದ್ದ ರೋಜರ್ ಬಿನ್ನಿ ತಮಗೆ 70 ವರ್ಷ ತುಂಬಿದ ಕಾರಣ ಈ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹಂಗಾಮಿ ಅಧ್ಯಕ್ಷರಾಗಿ ಮಂಡಳಿಯನ್ನು ಮುನ್ನಡೆಸುತ್ತಿದ್ದಾರೆ.

2 / 5
ಪ್ರಸ್ತುತ ಖಾಲಿಯಾಗಿರುವ ಬಿಸಿಸಿಐ ಅಧ್ಯಕ್ಷರ ಹುದ್ದೆಗೆ ಹಲವು ದಿಗ್ಗಜರ ಹೆಸರು ಕೇಳಿಬರುತ್ತಿದೆ. ಆದರೆ ಆ ಸುದ್ದಿಗಳಿಗೆ ಯಾವುದೇ ಪುರಾವೆಯಿಲ್ಲ. ಇದೆಲ್ಲವುಗಳ ನಡುವೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಈ ಹುದ್ದೆಯನ್ನು ವಹಿಸಿಕೊಳ್ಳಬಹುದು ಎಂದು ಕೆಲವು ವರದಿಗಳು ಹೇಳಿವೆ.

3 / 5
ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿನ್ ತೆಂಡೂಲ್ಕರ್, ‘ಬಿಸಿಸಿಐ ಅಧ್ಯಕ್ಷ ಹುದ್ದೆಗೆ ನನ್ನ ಹೆಸರನ್ನು ಪರಿಗಣಿಸಲಾಗುತ್ತಿದೆ ಅಥವಾ ನಾಮನಿರ್ದೇಶನ ಮಾಡಲಾಗಿದೆ ಎಂಬ ಬಗ್ಗೆ ಕೆಲವು ಸುದ್ದಿಗಳು ಮತ್ತು ವದಂತಿಗಳು ಹರಡುತ್ತಿವೆ ಎಂದು ನಮಗೆ ತಿಳಿದುಬಂದಿದೆ. ಆದರೆ ಈ ರೀತಿಯ ಏನೂ ಸಂಭವಿಸಿಲ್ಲ ಎಂದು ನಾವು ಸ್ಪಷ್ಟವಾಗಿ ಹೇಳಲು ಬಯಸುತ್ತೇವೆ. ಆಧಾರರಹಿತ ಊಹಾಪೋಹಗಳಿಗೆ ಗಮನ ಕೊಡಬೇಡಿ ಎಂದು ನಾನು ಎಲ್ಲರಲ್ಲೂ ವಿನಂತಿಸುವೆ ಎಂದಿದ್ದಾರೆ.

4 / 5
ಸಚಿನ್ ತೆಂಡೂಲ್ಕರ್ ತಮ್ಮ 24 ವರ್ಷಗಳ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಭಾರತವನ್ನು ಅನೇಕ ಸ್ಮರಣೀಯ ವಿಜಯಗಳಿಗೆ ಕರೆದೊಯ್ದರು, ಆದರೆ ಅವರು ಯಾವಾಗಲೂ ಕ್ರಿಕೆಟ್ ಆಡಳಿತದಿಂದ ದೂರವಿರುವುದಕ್ಕೆ ಇಷ್ಟಪಡುತ್ತಾರೆ. ಅದರಂತೆ ಇದೀಗ ಎದ್ದಿರುವ ಊಹಪೋಹಗಳಿಗೆ ತೆರೆ ಎಳೆದಿರುವ ಸಚಿನ್ ನಾನು ಅಧ್ಯಕ್ಷ ಹುದ್ದೆಯೆ ಸ್ಪರ್ಧಿ ಅಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ.

5 / 5
ಸೆಪ್ಟೆಂಬರ್ 2025 ರ ಅಂತ್ಯದಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹೊಸ ಅಧ್ಯಕ್ಷರ ಆಯ್ಕೆಯು ಪ್ರಮುಖ ವಿಷಯವಾಗಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ತನ್ನ ಮುಂದಿನ ಅಧ್ಯಕ್ಷರಾಗಿ ಭಾರತದ ಸ್ಟಾರ್ ಕ್ರಿಕೆಟಿಗನನ್ನು ಹುಡುಕುತ್ತಿದೆ. ರೋಜರ್​ ಬಿನ್ನಿಗಿಂತ ಮೊದಲು, ಸೌರವ್ ಗಂಗೂಲಿಯಂತಹ ಲೆಜೆಂಡರಿ ನಾಯಕರು ಈ ಹುದ್ದೆಯನ್ನು ಅಲಂಕರಿಸಿದ್ದರು. ಇದೀಗ ಅವರಂತಹ ಆಟಗಾರರನ್ನೇ ಈ ಹುದ್ದೆಯಲ್ಲಿ ಕೂರಿಸಲು ಬಿಸಿಸಿಐ ನೋಡುತ್ತಿದೆ.