IPL 2022 New Teams: ಹೊಸ ಐಪಿಎಲ್ ತಂಡಗಳಿಗಾಗಿ 6 ನಗರಗಳ ಸ್ಟೇಡಿಯಂ
TV9 Web | Updated By: ಝಾಹಿರ್ ಯೂಸುಫ್
Updated on:
Oct 15, 2021 | 6:22 PM
IPL 2022 New Teams: ಹೊಸ ಎರಡು ತಂಡಗಳ ಹರಾಜಿಗಾಗಿ ಬಿಸಿಸಿಐ ಮೂಲ ಬೆಲೆ ನಿಗದಿಪಡಿಸಿದ್ದು, ಅದರಂತೆ ಒಂದು ತಂಡದ ಬೆಲೆ 2 ಸಾವಿರ ರೂ. ಕೋಟಿ ಆಗಿರಲಿದೆ. ಎರಡು ತಂಡಗಳ ಹರಾಜಿನ ಮೂಲಕ ಬಿಸಿಸಿಐ ಬರೋಬ್ಬರಿ 5 ಸಾವಿರ ರೂ. ಕೋಟಿ ಆದಾಯಗಳಿಸುವ ಇರಾದೆಯಲ್ಲಿದೆ.
1 / 5
ಹಾಗೆಯೇ ಯಾವುದೇ ಟ್ರಾನ್ಸ್ಫರ್ ವಿಂಡೋ ಆಯ್ಕೆ ಕೂಡ ಇರುವುದಿಲ್ಲ. ಟ್ರಾನ್ಫರ್ ವಿಂಡೋ ಅಂದರೆ ಆಟಗಾರರ ವರ್ಗಾವಣೆ. ಈ ಆಯ್ಕೆಯನ್ನು ನೀಡುವುದು ಸಾಮಾನ್ಯ ಹರಾಜಿಗೂ ಮುನ್ನ. ಅಂದರೆ ಮೆಗಾ ಹರಾಜು ಮೂರು ವರ್ಷಕ್ಕೊಮ್ಮೆ ನಡೆಯುತ್ತದೆ. ಉಳಿದ ಎರಡು ವರ್ಷಗಳ ಅವಧಿಯಲ್ಲೂ ನಡೆಯುವ ಹರಾಜಿಗೂ ಮುನ್ನ ಬೇರೆ ತಂಡದಿಂದ ಆಟಗಾರರನ್ನು ವರ್ಗಾವಣೆ ಮಾಡಿಕೊಳ್ಳುವ ಆಯ್ಕೆ ಇರುತ್ತದೆ. ಹಾಗೆಯೇ ಐಪಿಎಲ್ ಮೊದಲಾರ್ಧದ ಮುಕ್ತಾಯದ ಬಳಿಕ ಕೂಡ ಟ್ರಾನ್ಸ್ಫರ್ ವಿಂಡೋ ಆಯ್ಕೆ ಇರುತ್ತದೆ. ಇದರ ಹೊರತಾಗಿ ಮೆಗಾ ಹರಾಜಿಗೂ ಮುನ್ನ ಯಾವುದೇ ಟ್ರಾನ್ಸ್ಫರ್ ಆಯ್ಕೆ ಇರುವುದಿಲ್ಲ.
2 / 5
ಬಿಸಿಸಿಐ ಮೂಲಗಳ ಮಾಹಿತಿ ಪ್ರಕಾರ, 2 ತಂಡಗಳ ಫ್ರಾಂಚೈಸಿಗಾಗಿ ಒಟ್ಟು 6 ನಗರಗಳನ್ನು ಆಯ್ಕೆ ಮಾಡಲಾಗಿದೆ. ಈ ನಗರಗಳ ಸ್ಟೇಡಿಯಂಗಳನ್ನು ಕೇಂದ್ರೀಕರಿಸಿ ತಂಡಗಳ ಬಿಡ್ಡಿಂಗ್ ನಡೆಯಲಿದೆ. ಅದರಂತೆ ಹೊಸ 2 ತಂಡಗಳ ಕೇಂದ್ರಗಳಾಗಿ ಲಕ್ನೋ, ಅಹಮದಾಬಾದ್, ರಾಂಚಿ, ಕಟಕ್, ಗೌವಾಟಿ ಮತ್ತು ಧರ್ಮಶಾಲಾ ನಗರಗಳ ಸ್ಟೇಡಿಯಂಗಳನ್ನು ಆಯ್ಕೆ ಮಾಡಲಾಗಿದೆ.
3 / 5
ಇನ್ನು ಹೊಸ ತಂಡಗಳ ಖರೀದಿಗಾಗಿ ಈಗಾಗಲೇ ಮೂವರು ಉದ್ಯಮಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಪಟ್ಟಿಯಲ್ಲಿ ಆರ್‌ಪಿ-ಸಂಜೀವ್ ಗೋಯೆಂಕಾ ಗ್ರೂಪ್, ಹೈದರಾಬಾದ್ ಮೂಲದ ಅರಬಿಂದೋ ಫಾರ್ಮಾ ಲಿಮಿಟೆಡ್, ಅದಾನಿ ಗ್ರೂಪ್ ಮುಂಚೂಣಿಯಲ್ಲಿದೆ. ಹರಾಜಿಗಾಗಿ ಅರ್ಜಿ ಸಲ್ಲಿಸಲು ಇನ್ನು ಕೂಡ ವಾರಗಳಿದ್ದು, ಹೀಗಾಗಿ ಹೊಸ ತಂಡಗಳ ಖರೀದಿಗೆ ಮತ್ತಷ್ಟು ಉದ್ಯಮಿಗಳು ಮುಂದೆ ಬರುವ ನಿರೀಕ್ಷೆಯಿದೆ.
4 / 5
ಈ ಹಿಂದೆ ಹೊಸ ಎರಡು ತಂಡಗಳ ಮಾರಾಟದಿಂದ ಬಿಸಿಸಿಐ 10 ಸಾವಿರ ಕೋಟಿ ರೂ. ಆದಾಯಗಳಿಸುವ ಇರಾದೆಯಲ್ಲಿತ್ತು. ಆದರೆ ಈ ಹರಾಜಿನಲ್ಲಿನ ಪೈಪೋಟಿಯಿಂದಾಗಿ ನಿರೀಕ್ಷೆಗೂ ಮೀರಿ ಆದಾಯ ಬಂದಿದೆ. ಅದರಂತೆ ಎರಡು ಹೊಸ ತಂಡಗಳ ಮಾರಾಟದಿಂದ ಬಿಸಿಸಿಐ ಗಳಿಸಿದ್ದು ಬರೋಬ್ಬರಿ 12,715 ಕೋಟಿ. ರೂ.
5 / 5
ಒಟ್ಟಿನಲ್ಲಿ ಐಪಿಎಲ್ನಲ್ಲಿ 2011ರ ಬಳಿಕ ಮತ್ತೊಮ್ಮೆ 10 ತಂಡಗಳನ್ನು ಕಣಕ್ಕಿಳಿಯಲ್ಲಿದ್ದು, ಅದರಂತೆ ಯಾವ ಹೊಸ ತಂಡಗಳು ಸೇರ್ಪಡೆಯಾಗಲಿದೆ ಕಾದು ನೋಡಬೇಕಿದೆ.