ಭಾರತದಲ್ಲಿ ಬಿರುಸಿನ ಶತಕ ಸಿಡಿಸಿದ ವಿದೇಶಿ ಬ್ಯಾಟರ್ ಯಾರು ಗೊತ್ತಾ?

| Updated By: ಝಾಹಿರ್ ಯೂಸುಫ್

Updated on: Feb 18, 2024 | 9:04 AM

India vs England 3rd Test: ಭಾರತದ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಸೆಂಚುರಿ ಸಿಡಿಸಿ ಇಂಗ್ಲೆಂಡ್ ಬ್ಯಾಟರ್ ಬೆನ್ ಡಕೆಟ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ದಾಖಲೆಯ ಹೊರತಾಗಿಯೂ ಭಾರತದಲ್ಲಿ ಅತೀ ವೇಗದ ಸೆಂಚುರಿ ಬಾರಿಸಿದ ರೆಕಾರ್ಡ್​ ಅನ್ನು ಮುರಿಯಲು ಡಕೆಟ್​ಗೆ ಸಾಧ್ಯವಾಗಿಲ್ಲ. ಹಾಗಿದ್ರೆ ಭಾರತದಲ್ಲಿ ಬಿರುಸಿನ ಟೆಸ್ಟ್ ಶತಕ ಸಿಡಿಸಿ ವಿದೇಶಿ ಬ್ಯಾಟರ್ ಯಾರು? ಇಲ್ಲಿದೆ ಮಾಹಿತಿ

1 / 5
ರಾಜ್​ಕೋಟ್​ನ ನಿರಂಜನ್ ಶಾ ಮೈದಾನದಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆರಂಭಿಕ ಆಟಗಾರ ಬೆನ್ ಡಕೆಟ್ ಅಕ್ಷರಶಃ ಅಬ್ಬರಿಸಿದ್ದರು. ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಡಕೆಟ್ ಕೇವಲ 88 ಎಸೆತಗಳಲ್ಲಿ ಶತಕ ಪೂರೈಸಿದ್ದರು.

2 / 5
ಈ ಶತಕದೊಂದಿಗೆ ಭಾರತದಲ್ಲಿ ಅತೀ ವೇಗವಾಗಿ ಟೆಸ್ಟ್ ಸೆಂಚುರಿ ಸಿಡಿಸಿದ 3ನೇ ವಿದೇಶಿ ಬ್ಯಾಟರ್ ಎಂಬ ದಾಖಲೆಯನ್ನು ಡಕೆಟ್ ನಿರ್ಮಿಸಿದ್ದರು. ಹಾಗಿದ್ರೆ ಭಾರತದಲ್ಲಿ ಅತೀ ವೇಗದ ಟೆಸ್ಟ್​ ಶತಕ ಬಾರಿಸಿದ ವಿದೇಶಿ ಬ್ಯಾಟ್ಸ್​ಮನ್ ಯಾರು? ಯಾವಾಗ ಸೆಂಚುರಿ ಸಿಡಿಸಿ ಈ ದಾಖಲೆ ಬರೆದಿದ್ದರು? ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

3 / 5
1- ಆ್ಯಡಂ ಗಿಲ್​ಕ್ರಿಸ್ಟ್​: ಭಾರತದಲ್ಲಿ ಅತೀ ವೇಗವಾಗಿ ಟೆಸ್ಟ್ ಶತಕ ಸಿಡಿಸಿದ ವಿದೇಶಿ ಬ್ಯಾಟರ್ ದಾಖಲೆ ಆಸ್ಟ್ರೇಲಿಯಾದ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಆ್ಯಡಂ ಗಿಲ್​ಕ್ರಿಸ್ಟ್​ ಹೆಸರಿನಲ್ಲಿದೆ. 2001 ರಲ್ಲಿ ಮುಂಬೈನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಗಿಲ್​ಕ್ರಿಸ್ಟ್​ ಕೇವಲ 84 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ಈ ದಾಖಲೆ ಬರೆದಿದ್ದಾರೆ.

4 / 5
2- ಕ್ಲೈವ್ ಲಾಯ್ಡ್​: ಆ್ಯಡಂ ಗಿಲ್​ಕ್ರಿಸ್ಟ್​ಗೂ ಮುನ್ನ ಈ ದಾಖಲೆ ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಕ್ಲೈವ್ ಲಾಯ್ಡ್​ ಅವರ ಹೆಸರಿನಲ್ಲಿತ್ತು. 1974 ರಲ್ಲಿ ಬೆಂಗಳೂರಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಲಾಯ್ಡ್​ 85 ಎಸೆತಗಳಲ್ಲಿ ಶತಕ ಪೂರೈಸಿ ಈ ವಿಶೇಷ ದಾಖಲೆ ಬರೆದಿದ್ದರು. ಇದೀಗ ಭಾರತದಲ್ಲಿ ಸ್ಪೋಟಕ ಸೆಂಚುರಿ ಸಿಡಿಸಿದ ವಿದೇಶಿ ಬ್ಯಾಟರ್​ಗಳ ಪಟ್ಟಿಯಲ್ಲಿ ಲಾಯ್ಡ್​ ದ್ವಿತೀಯ ಸ್ಥಾನದಲ್ಲಿದ್ದಾರೆ.

5 / 5
3- ಬೆನ್ ಡಕೆಟ್: ರಾಜ್​ಕೋಟ್​ನ ನಿರಂಜನ್ ಶಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್ ಬೆನ್ ಡಕೆಟ್ ಕೇವಲ 88 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಈ ಮೂಲಕ ಭಾರತದ ವಿರುದ್ಧ ಬಿರುಸಿನ ಶತಕ ಸಿಡಿಸಿದ ಇಂಗ್ಲೆಂಡ್ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಭಾರತದಲ್ಲಿ ಅತೀ ವೇಗದ ಶತಕ ಬಾರಿಸಿದ ಮೂರನೇ ವಿದೇಶಿ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.