IPL 2023 Auction: ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಐಪಿಎಲ್ 2023 ಹರಾಜಿಗೆ ಹೆಸರು ಸೂಚಿಸಿದ ಇಬ್ಬರು ಸ್ಟಾರ್ ಇಂಗ್ಲೆಂಡ್ ಪ್ಲೇಯರ್ಸ್

Edited By:

Updated on: Nov 15, 2022 | 9:33 AM

Adil Rashid and Ben Stokes: ಟಿ20 ವಿಶ್ವಕಪ್​ನಲ್ಲಿ ಅದ್ಭುತ ಪ್ರದರ್ಶನ ತೋರಿರುವ ಇಂಗ್ಲೆಂಡ್ ತಂಡದ ಬೆನ್ ಸ್ಟೋಕ್ಸ್ ಹಾಗೂ ಆದಿಲ್ ರಶೀದ್ ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿರುವ ಐಪಿಎಲ್ 2023 ಹರಾಜಿಗೆ ತಮ್ಮ ಹೆಸರನ್ನು ಸೂಚಿಸಿದ್ದಾರೆ.

1 / 8
ಇಂಗ್ಲೆಂಡ್ ಕ್ರಿಕೆಟ್ ತಂಡ ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ. ನವೆಂಬರ್ 13 ರಂದು ಪಾಕಿಸ್ತಾನ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 5 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಆಂಗ್ಲರು ಚಾಂಪಿಯನ್ ಆಗಿ ಹೊರಹೊಮ್ಮಿದರು.

ಇಂಗ್ಲೆಂಡ್ ಕ್ರಿಕೆಟ್ ತಂಡ ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ. ನವೆಂಬರ್ 13 ರಂದು ಪಾಕಿಸ್ತಾನ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 5 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಆಂಗ್ಲರು ಚಾಂಪಿಯನ್ ಆಗಿ ಹೊರಹೊಮ್ಮಿದರು.

2 / 8

ಇಂಗ್ಲೆಂಡ್ ಟಿ20 ವಿಶ್ವಕಪ್ 2022 ರಲ್ಲಿ ಚಾಂಪಿಯನ್ ಆಗಲು ಬ್ಯಾಟರ್​ಗಳು ಎಷ್ಟು ಕಾರಣವೋ ಅಷ್ಟೇ ಕೊಡುಗೆಯನ್ನು ಬೌಲರ್​ಗಳು ನೀಡಿದ್ದಾರೆ. ಬೌಲರ್​ಗಳ ಸಹಾಯದಿಂದಲೇ ಫೈನಲ್​ನಲ್ಲಿ ಪಾಕ್ ಅನ್ನು 137 ರನ್​ಗಳ ಅಲ್ಪ ಮೊತ್ತಕ್ಕೆ ಕಟ್ಟಿಹಾಕಲಾಯಿತು. ಇಂಗ್ಲೆಂಡ್ ಪರ ಬೌಲಿಂಗ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದವರ ಪೈಕಿ ಸ್ಪಿನ್ನರ್ ಆದಿಲ್ ರಶೀದ್ ಕೂಡ ಒಬ್ಬರು.

3 / 8

ರಶೀದ್ ಫೈನಲ್​ನಲ್ಲಿ 4 ಓವರ್ ಬೌಲಿಂಗ್ ಮಾಡಿ ಕೇವಲ 22 ರನ್ ನೀಡಿ ಮೊಹಮ್ಮದ್ ಹ್ಯಾರಿಸ್ ಹಾಗೂ ಬಾಬರ್ ಅಜಮ್ 2 ಪ್ರಮುಖ ವಿಕೆಟ್ ಕಿತ್ತರು. ವಿಶೇಷ ಎಂದರೆ ಪಂದ್ಯದ 12ನೇ ಓವರ್​ನಲ್ಲಿ ಬಾಬರ್ ವಿಕೆಟ್ ಕಿತ್ತ ಇವರ ಓವರ್ ಮೇಡನ್ ಆಯಿತು. ಟಿ20 ವಿಶ್ವಕಪ್ ಫೈನಲ್​ನಲ್ಲಿ ವಿಕೆಟ್ ಪಡೆದು ಮೇಡನ್ ಓವರ್ ಮಾಡಿದ 4ನೇ ಬೌಲರ್ ರಶೀದ್ ಆದರು.

4 / 8

ಇದೀಗ ಟಿ20 ವಿಶ್ವಕಪ್​ನಲ್ಲಿ ಅದ್ಭುತ ಪ್ರದರ್ಶನ ತೋರಿರುವ ಆದಿಲ್ ರಶೀದ್ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಆಡುವ ಕನಸು ಕಾಣುತ್ತಿದ್ದಾರೆ. ಈಗಾಗಲೇ ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿರುವ ಐಪಿಎಲ್ 2023 ಹರಾಜಿಗೆ ತನ್ನ ಹೆಸರನ್ನು ಕೂಡ ಸೂಚಿಸಿದ್ದಾರೆ.

5 / 8

ಆಸ್ಟ್ರೇಲಿಯಾ ಪಿಚ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ರಶೀದ್, ಸ್ಪಿನ್‌ ಬೌಲಿಂಗ್‌ಗೆ ಸಹಕಾರಿಯಾಗಿರುವ ಭಾರತೀಯ ಪಿಚ್‌ಗಳಿಗೆ ಎದುರಾಳಿ ತಂಡಕ್ಕೆ ಮಾರಕವಾಗುವ ಸಾಧ್ಯತೆ ಇದೆ. ಇದೇ ವಿಚಾರ ಅವರ ಬೇಡಿಕೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ.

6 / 8

ಇನ್ನು ಐಪಿಎಲ್ 2022 ರಿಂದ ಹೊರಗುಳಿದಿದ್ದ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಈ ಬಾರಿ ಐಪಿಎಲ್ ಹರಾಜಿನಲ್ಲಿ ಹೆಸರು ನೀಡಿದ್ದಾರೆ. ಏಕದಿನ ಕ್ರಿಕೆಟ್​ನಿಂದ ನಿವೃತ್ತಿ ಪಡೆದು ಟಿ20 ವಿಶ್ವಕಪ್​ ಫೈನಲ್​ನಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿರುವ ಸ್ಟೋಕ್ಸ್​ಗೆ ಹರಾಜಿನಲ್ಲಿ ಭರ್ಜರಿ ಬೇಡಿಕೆ ಇರುವುದಂತು ಸತ್ಯ.

7 / 8

ಇಂಗ್ಲೆಂಡ್‌ನ ಟಿ20 ಸ್ಪೆಷಲಿಸ್ಟ್ ಸ್ಯಾಮ್ ಬಿಲ್ಲಿಂಗ್ಸ್ ಐಪಿಎಲ್‌ನೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದಾರೆ. ಈ ಬಗ್ಗೆ ಟ್ವಿಟರ್​ನಲ್ಲಿ ಪೋಸ್ಟ್ ಬರೆದಿರುವ ಸ್ಯಾಮ್, ಮುಂದಿನ ಐಪಿಎಲ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಕಠಿಣ ನಿರ್ಧಾರ ತೆಗೆದುಕೊಂಡಿದ್ದೇನೆ. ನಾನು ದೀರ್ಘ ಸ್ವರೂಪಗಳ ಮೇಲೆ ಹೆಚ್ಚು ಗಮನಹರಿಸಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

8 / 8

ಇನ್ನು ಮತ್ತೋರ್ವ ಸ್ಟಾರ್ ಆಟಗಾರ ಪ್ಯಾಟ್ ಕಮ್ಮಿನ್ಸ್ ಕೂಡ ಐಪಿಎಲ್ 2023 ಆವೃತ್ತಿಯಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂಬ ವರದಿಗಳು ಬರುತ್ತಿದೆ. ಈಗಾಗಲೇ ಕೆಕೆಆರ್ ಹರಾಜಿಗೆ ಇವರನ್ನು ಬಿಡುಗಡೆ ಮಾಡುವ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿತ್ತು. ಈ ಬೆಳವಣಿಗೆಯ ಮದ್ಯೆಯೆ ಪ್ಯಾಟ್ ಕಮ್ಮಿನ್ಸ್ ಐಪಿಎಲ್​ನಿಂದ ಹಿಂದೆ ಸರಿದಿದ್ದಾರೆ.

Published On - 9:33 am, Tue, 15 November 22

Loading...
Unable to load recommendations.
Follow Us