ಲಂಡನ್ನಲ್ಲೇ ಕಳ್ಳರ ಟಾರ್ಗೆಟ್ ಆದ ಬೆನ್ ಸ್ಟೋಕ್ಸ್; ಟ್ವಿಟರ್ನಲ್ಲಿ ಅಳಲು ತೊಡಿಕೊಂಡ ಟೆಸ್ಟ್ ನಾಯಕ
Ben Stokes: ಕ್ರಿಕೆಟಿಗ ಸ್ಟೋಕ್ಸ್ ಅವರ ಬಳಿ ಇದ್ದ ಸಾಮಾನು, ಬ್ಯಾಗ್ಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಈ ಬಗ್ಗೆ ಸ್ವತಃ ಬೆನ್ ಸ್ಟೋಕ್ಸ್ ಅವರೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.
1 / 5
ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ಗೆ ತವರಿನಲ್ಲೇ ಕಳ್ಳರು ಉಂಡೆ ನಾಮ ತಿಕ್ಕಿದ್ದಾರೆ. ಕ್ರಿಕೆಟಿಗ ಸ್ಟೋಕ್ಸ್ ಅವರ ಬಳಿ ಇದ್ದ ಸಾಮಾನು, ಬ್ಯಾಗ್ಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಈ ಬಗ್ಗೆ ಸ್ವತಃ ಬೆನ್ ಸ್ಟೋಕ್ಸ್ ಅವರೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.
2 / 5
ಲಂಡನ್‌ನ ಕಿಂಗ್ಸ್ ಕ್ರಾಸ್ ರೈಲು ನಿಲ್ದಾಣದಲ್ಲಿ ಈ ಕಳ್ಳತನ ನಡೆದಿದ್ದು, ಈ ಬಗ್ಗೆ ಟ್ವಿಟರ್ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಸ್ಟೋಕ್ಸ್, ‘ಕಿಂಗ್ಸ್ ಕ್ರಾಸ್ ರೈಲು ನಿಲ್ದಾಣದಲ್ಲಿ ನನ್ನ ಬ್ಯಾಗ್ ಕದ್ದವರು ಯಾರೇ ಆಗಿರಲಿ, ಅವರ ಸೈಜಿಗೆ ನನ್ನ ಬಟ್ಟೆಗಳು ಆಗುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಆಗೆಯೇ ಕೋಪದ ಎಮೋಜಿ ಕೂಡ ಹಾಕಿದ್ದಾರೆ.
3 / 5
ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ. ಈ ಹಿಂದೆ ಪಾಕಿಸ್ತಾನದಲ್ಲಿ ಟೆಸ್ಟ್ ಸರಣಿಯನ್ನು 3-0 ಅಂತರದಲ್ಲಿ ಗೆದ್ದುಕೊಂಡಿದ್ದ ಆಂಗ್ಲ ಪಡೆ ನ್ಯೂಜಿಲೆಂಡ್‌ನಲ್ಲಿ ಡ್ರಾಗೆ ತೃಪ್ತಿಪಟ್ಟುಕೊಂಡಿತ್ತು.
4 / 5
ಅಲ್ಲದೆ ಕಳೆದ ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಗುವಲ್ಲಿ ಸ್ಟೋಕ್ಸ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಸ್ಟೋಕ್ಸ್ ಫಾರ್ಮ್‌ನಲ್ಲಿದ್ದರೂ ಅವರ ಫಿಟ್‌ನೆಸ್ ಅವರಿಗೆ ಸಮಸ್ಯೆ ತಂದೊಟ್ಟಿದೆ. ಹೀಗಾಗಿ ಸ್ಟೋಕ್ಸ್ ಐಪಿಎಲ್ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ.
5 / 5
ಕಳೆದ ಬಾರಿ ನಡೆದ ಮಿನಿ ಹರಾಜಿನಲ್ಲಿ ಸ್ಟೋಕ್ಸ್ ಅವರಿಗೆ 16.25 ಕೋಟಿ ರೂಪಾಯಿ ಖರ್ಚು ಮಾಡುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿತ್ತು. ಫಿಟ್‌ನೆಸ್ ಸಮಸ್ಯೆಯ ನಡುವೆಯೂ ಸ್ಟೋಕ್ಸ್ ಇಡೀ ಸೀಸನ್ ಆಡಲಿದ್ದಾರೆ ಎಂದು ವದರಿಯಾಗಿದೆ.
Published On - 12:03 pm, Mon, 13 March 23