ಟಿ20 ಕ್ರಿಕೆಟ್‌ನಲ್ಲಿ ಒಂದೇ ಒಂದು ನೋ ಬಾಲ್ ಎಸೆಯದ ಟೀಂ ಇಂಡಿಯಾ ಬೌಲರ್ ಯಾರು ಗೊತ್ತಾ?
TV9 Web | Updated By: ಪೃಥ್ವಿಶಂಕರ
Updated on:
Jan 06, 2023 | 3:02 PM
ತಮ್ಮ ಮೊದಲ ಟಿ20 ಪಂದ್ಯವನ್ನು 15 ಡಿಸೆಂಬರ್ 2012 ರಂದು ಪಾಕಿಸ್ತಾನದ ವಿರುದ್ಧ ಬೆಂಗಳೂರಿನಲ್ಲಿ ಆಡಿದ್ದ ಭುವನೇಶ್ವರ್, ಅಂದಿನಿಂದ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಒಟ್ಟು 298.3 ಓವರ್‌ಗಳನ್ನು ಬೌಲ್ ಮಾಡಿದ್ದಾರೆ.
1 / 5
ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ಗಳು ಮಾಡಿದ ಹಲವು ತಪ್ಪುಗಳಿಂದ ಸೋಲಿನ ಬೆಲೆ ತೆತ್ತಿದೆ. ಈ ಪಂದ್ಯದಲ್ಲಿ ಭಾರತದ ಯುವ ವೇಗದ ಬೌಲರ್ ಅರ್ಷದೀಪ್ ಸಿಂಗ್ ಸಾಕಷ್ಟು ನೋ ಬಾಲ್‌ಗಳನ್ನು ಎಸೆಯುವುದರೊಂದಿಗೆ ಬೇಡದ ವಿಶ್ವದಾಖಲೆ ಮಾಡುವುದರೊಂದಿಗೆ ತಂಡದ ಸೋಲಿಗೂ ಕೊಡುಗೆ ನೀಡಿದರು. ಕ್ರಿಕೆಟ್ ಜಗತ್ತಿನಲ್ಲಿ ನೋ ಬಾಲ್ ಎಸೆಯುವುದು ದೊಡ್ಡ ಕ್ರೈಂ ಎಂದೆ ಹೇಳಲಾಗುತ್ತದೆ. ಆದರೆ ಟಿ20 ಕ್ರಿಕೆಟ್‌ನಲ್ಲಿ ಒಂದೇ ಒಂದು ನೋ ಬಾಲ್ ಎಸೆಯದ ಬೌಲರ್ ಕೂಡ ಇದ್ದಾರೆ.
2 / 5
ಈ ಬೌಲರ್ ಭಾರತದ ಅನುಭವಿ ಆಟಗಾರ ಭುವನೇಶ್ವರ್ ಕುಮಾರ್. ಭುವನೇಶ್ವರ್ ಟಿ20 ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಇದುವರೆಗೆ ಒಂದೇ ಒಂದು ನೋ ಬಾಲ್ ಬೌಲ್ ಮಾಡಿಲ್ಲ.
3 / 5
ತಮ್ಮ ಮೊದಲ ಟಿ20 ಪಂದ್ಯವನ್ನು 15 ಡಿಸೆಂಬರ್ 2012 ರಂದು ಪಾಕಿಸ್ತಾನದ ವಿರುದ್ಧ ಬೆಂಗಳೂರಿನಲ್ಲಿ ಆಡಿದ್ದ ಭುವನೇಶ್ವರ್, ಅಂದಿನಿಂದ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಒಟ್ಟು 298.3 ಓವರ್‌ಗಳನ್ನು ಬೌಲ್ ಮಾಡಿದ್ದಾರೆ. ಆದರೆ ಇದರಲ್ಲಿ ಅವರು ಒಂದೇ ಒಂದು ನೋ ಬಾಲ್ ಅನ್ನು ಬೌಲ್ ಮಾಡಿಲ್ಲ.
4 / 5
ಕಳೆದ ವರ್ಷ ನವೆಂಬರ್ 22 ರಂದು ನೇಪಿಯರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಕೊನೆಯ ಟಿ20 ಪಂದ್ಯವನ್ನು ಆಡಿದ್ದ ಭುವನೇಶ್ವರ್ಗೆ ಪ್ರಸ್ತುತ ಶ್ರೀಲಂಕಾ ವಿರುದ್ಧ ಆಡುತ್ತಿರುವ ಸರಣಿಯಲ್ಲಿ ಆಡುವ ಅವಕಾಶ ಸಿಕ್ಕಿಲ್ಲ.
5 / 5
ಭುವನೇಶ್ವರ್ ಅವರ ಟಿ20 ಅಂತರಾಷ್ಟ್ರೀಯ ವೃತ್ತಿಜೀವನವನ್ನು ನೋಡಿದರೆ, ಇದುವರೆಗೆ 87 ಟಿ20 ಪಂದ್ಯಗಳನ್ನು ಆಡಿರುವ ಭುವಿ 90 ವಿಕೆಟ್ಗಳನ್ನು ಪಡೆದಿದ್ದಾರೆ. ಅಲ್ಲದೆ 6.96 ಎಕಾಮಿನಿಯೊಂದಿಗೆ ರನ್ ನೀಡಿರುವ ಭುವಿ, 23.10 ಸರಾಸರಿಯಲ್ಲಿ ವಿಕೆಟ್ ಪಡೆದಿದ್ದಾರೆ.
Published On - 3:02 pm, Fri, 6 January 23