BPL 2023: ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್‌ಗೆ ಭಾರತೀಯ ಆಟಗಾರ ಎಂಟ್ರಿ..!
TV9 Web | Updated By: ಝಾಹಿರ್ ಯೂಸುಫ್
Updated on:
Nov 23, 2022 | 7:23 PM
BPL 2023: ಅಮೆರಿಕ ರಾಷ್ಟ್ರೀಯ ತಂಡದ ಪರ ಪದಾರ್ಪಣೆ ಮಾಡುವ ಹಂಬಲ ಹೊಂದಿರುವ 29 ವರ್ಷದ ಉನ್ತುಕ್ತ್ ಚಂದ್, USA ಯ ಮೇಜರ್ ಲೀಗ್ ಕ್ರಿಕೆಟ್‌ನೊಂದಿಗೆ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
1 / 5
ಟೀಮ್ ಇಂಡಿಯಾ ಅಂಡರ್-19 ತಂಡದ ಮಾಜಿ ನಾಯಕ ಉನ್ಮುಕ್ತ್ ಚಂದ್ ಇದೀಗ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್‌ಗೆ ಆಯ್ಕೆಯಾದ ಮೊದಲ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಬಿಪಿಎಲ್ 2023ರ (BPL 2023) ಟೂರ್ನಿಗಾಗಿ ಆಟಗಾರರ ಡ್ರಾಫ್ಟ್ ಪ್ರಕ್ರಿಯೆ ನಡೆಯುತ್ತಿದ್ದು, ಉನ್ಮುಕ್ತ್ ಚಂದ್ ಅವರನ್ನು ಚಟ್ಟೋಗ್ರಾಮ್ ಚಾಲೆಂಜರ್ಸ್ ತಂಡ ಡ್ರಾಫ್ಟ್ ಮಾಡಿಕೊಂಡಿದೆ.
2 / 5
ವಿಶೇಷ ಎಂದರೆ ಉನ್ಮುಕ್ತ್ ಚಂದ್ ನಾಯಕತ್ವದಲ್ಲಿ ಭಾರತ ತಂಡವು 2012 ರಲ್ಲಿ ಅಂಡರ್-19 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಆ ಬಳಿಕ ಅವರು ಶೀಘ್ರದಲ್ಲೇ ಭಾರತ ತಂಡಕ್ಕೆ ಆಯ್ಕೆಯಾಗಲಿದ್ದಾರೆ. ಆದರೆ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡುವ ಅವಕಾಶ ದೊರಕಿರಲಿಲ್ಲ. ಇದಾಗ್ಯೂ ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ದರು.
3 / 5
ಆದರೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 21 ಪಂದ್ಯಗಳನ್ನಾಡಿದ್ದ ಉನ್ಮುಕ್ತ್ ಕಲೆಹಾಕಿದ್ದು ಕೇವಲ 300 ರನ್ ಮಾತ್ರ. ಹೀಗಾಗಿ ಐಪಿಎಲ್ ಕೆರಿಯರ್ ಕೂಡ ಬೇಗನೆ ಮುಗಿಯಿತು.
4 / 5
2021 ರಲ್ಲಿ ಭಾರತೀಯ ಕ್ರಿಕೆಟ್ ತೊರೆದಿದ್ದ ಉನ್ಮುಕ್ತ್ ಚಂದ್ ಅಮೆರಿಕದತ್ತ ಮುಖ ಮಾಡಿದ್ದರು. ಅಷ್ಟೇ ಅಲ್ಲದೆ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ನಲ್ಲೂ ಸ್ಥಾನ ಪಡೆದಿದ್ದರು. ಈ ಮೂಲಕ ಬಿಬಿಎಲ್ನಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ಕ್ರಿಕೆಟಿಗ ಎನಿಸಿಕೊಂಡರು.
5 / 5
ಸದ್ಯ ಅಮೆರಿಕ ರಾಷ್ಟ್ರೀಯ ತಂಡದ ಪರ ಪದಾರ್ಪಣೆ ಮಾಡುವ ಹಂಬಲ ಹೊಂದಿರುವ 29 ವರ್ಷದ ಉನ್ತುಕ್ತ್ ಚಂದ್, USA ಯ ಮೇಜರ್ ಲೀಗ್ ಕ್ರಿಕೆಟ್‌ನೊಂದಿಗೆ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದರ ನಡುವೆ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ನಲ್ಲೂ ಅವಕಾಶ ಪಡೆದಿದ್ದಾರೆ.