
ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಅದು ಕೂಡ ಸಿಕ್ಸ್ ಸಿಡಿಸದೇ ಎಂಬುದು ವಿಶೇಷ. ಅಂದರೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸಿಕ್ಸ್ ಬಾರಿಸದೇ ಅತ್ಯಧಿಕ ರನ್ಗಳಿಸಿದ ಭರ್ಜರಿ ದಾಖಲೆಯೊಂದು ಝಿಂಬಾಬ್ವೆ ತಂಡದ ಆರಂಭಿಕ ದಾಂಡಿಗ ಬ್ರಿಯಾನ್ ಬೆನ್ನೆಟ್ (Brian Bennett) ಹೆಸರಿಗೆ ಸೇರ್ಪಡೆಯಾಗಿದೆ.

ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಝಿಂಬಾಬ್ವೆ ಪರ ಆರಂಭಿಕನಾಗಿ ಕಣಕ್ಕಿಳಿದ ಬ್ರಿಯಾನ್ ಬೆನ್ನೆಟ್ 57 ಎಸೆತಗಳಲ್ಲಿ 81 ರನ್ ಬಾರಿಸಿದ್ದರು. ಈ 81 ರನ್ಗಳಲ್ಲಿ 12 ಫೋರ್ಗಳು ಒಳಗೊಂಡಿದ್ದರೂ ಒಂದೇ ಒಂದು ಸಿಕ್ಸ್ ಇರಲಿಲ್ಲ.

ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಸಿಕ್ಸ್ ಸಿಡಿಸದೇ ಗರಿಷ್ಠ ವೈಯುಕ್ತಿಕ ಸ್ಕೋರ್ಗಳಿಸಿದ ದಾಖಲೆಯನ್ನು ಬ್ರಿಯಾನ್ ಬೆನ್ನೆಟ್ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ಪಾಕಿಸ್ತಾನ್ ತಂಡದ ಮಾಜಿ ನಾಯಕ ಬಾಬರ್ ಆಝಂ ಹೆಸರಿನಲ್ಲಿತ್ತು.

2022 ರಲ್ಲಿ ನ್ಯೂಝಿಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಬಾಬರ್ ಆಝಂ 53 ಎಸೆತಗಳಲ್ಲಿ 11 ಫೋರ್ಗಳೊಂದಿಗೆ ಅಜೇಯ 79 ರನ್ ಬಾರಿಸಿದ್ದರು. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸಿಕ್ಸ್ ಬಾರಿಸದೇ ಅತ್ಯಧಿಕ ರನ್ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದರು.

ಇದೀಗ ಈ ದಾಖಲೆಯನ್ನು ಮುರಿಯುವಲ್ಲಿ ಬ್ರಿಯಾನ್ ಬೆನ್ನೆಟ್ ಯಶಸ್ವಿಯಾಗಿದ್ದಾರೆ. ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿರುವ ಬೆನ್ನೆಟ್ 57 ಎಸೆತಗಳಲ್ಲಿ ಒಂದೇ ಒಂದು ಸಿಕ್ಸ್ ಬಾರಿಸದೇ 81 ರನ್ಗಳಿಸಿದ್ದಾರೆ. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸಿಕ್ಸ್ ಬಾರಿಸದೇ ಅತೀ ಹೆಚ್ಚು ರನ್ಗಳಿಸಿದ ಬ್ಯಾಟರ್ ಎಂಬ ದಾಖಲೆಯನ್ನು ಬ್ರಿಯಾನ್ ಬೆನ್ನೆಟ್ ತಮ್ಮದಾಗಿಸಿಕೊಂಡಿದ್ದಾರೆ.