IND vs SA 2nd Test: ಮತ್ತೊಂದು ಹಸಿರು ಪಿಚ್, ಬೌನ್ಸಿ ಟ್ರ್ಯಾಕ್: ಭಾರತಕ್ಕೆ ಮಾರಕವಾಗಲಿದೆ ಕೇಪ್ ಟೌನ್ ಪಿಚ್

|

Updated on: Jan 02, 2024 | 8:57 AM

Cape Town Pitch Report: ಸೆಂಚುರಿಯನ್ ಪಿಚ್ ನಂತೆಯೇ ಕೇಪ್ ಟೌನ್ ವಿಕೆಟ್ ಕೂಡ ವೇಗಿಗಳಿಗೆ ಹೆಚ್ಚಿನ ನೆರವು ನೀಡುತ್ತದೆ. ನ್ಯೂಲ್ಯಾಂಡ್ಸ್ ಕ್ರಿಕೆಟ್ ಗ್ರೌಂಡ್‌ನಲ್ಲಿರುವ ಪಿಚ್‌ನಲ್ಲಿ ಹೆಚ್ಚು ಹುಲ್ಲು ಇರುತ್ತದೆ, ಇದು ವೇಗದ ಬೌಲರ್‌ಗಳಿಗೆ ಸ್ವಿಂಗ್ ಮತ್ತು ಬೌನ್ಸ್ ನೀಡುತ್ತದೆ. ಆದರೆ ಕೊನೆಯ ಎರಡು ದಿನಗಳ ಪಂದ್ಯದಲ್ಲಿ ಸ್ಪಿನ್ನರ್‌ಗಳಿಗೆ ಬೆಂಬಲ ಸಿಗಲಿದೆ.

1 / 7
ಜನವರಿ 3 ರಿಂದ ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನದಲ್ಲಿ ಭಾರತ ಹಾಗೂ ಆತಿಥೇಯ ದಕ್ಷಿಣ ಆಫ್ರಿಕಾ ನಡುವೆ ಎರಡನೇ ಟೆಸ್ಟ್ ಪಂದ್ಯ ಶುರುವಾಗಲಿದೆ. ಭಾರತ ಸರಣಿಯಲ್ಲಿ 0-1 ಹಿನ್ನಡೆಯಲ್ಲಿರುವ ಕಾರಣ ದ್ವಿತೀಯ ಟೆಸ್ಟ್ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಆದರೆ, ಹಿಂದಿನ ಸೆಂಚುರಿಯನ್ ಪಿಚ್​ನಂತೆ ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನದ ಪಿಚ್ ಕೂಡ ಟೀಮ್ ಇಂಡಿಯಾಕ್ಕೆ ಮಾರಕವಾಗಲಿದೆ.

2 / 7
ಸೆಂಚುರಿಯನ್ ಪಿಚ್ ನಂತೆಯೇ ಕೇಪ್ ಟೌನ್ ವಿಕೆಟ್ ಕೂಡ ವೇಗಿಗಳಿಗೆ ಹೆಚ್ಚಿನ ನೆರವು ನೀಡುತ್ತದೆ. ನ್ಯೂಲ್ಯಾಂಡ್ಸ್ ಕ್ರಿಕೆಟ್ ಗ್ರೌಂಡ್‌ನಲ್ಲಿರುವ ಪಿಚ್‌ನಲ್ಲಿ ಹೆಚ್ಚು ಹುಲ್ಲು ಇರುತ್ತದೆ, ಇದು ವೇಗದ ಬೌಲರ್‌ಗಳಿಗೆ ಸ್ವಿಂಗ್ ಮತ್ತು ಬೌನ್ಸ್ ನೀಡುತ್ತದೆ. ಆದರೆ ಕೊನೆಯ ಎರಡು ದಿನಗಳ ಪಂದ್ಯದಲ್ಲಿ ಸ್ಪಿನ್ನರ್‌ಗಳಿಗೆ ಬೆಂಬಲ ಸಿಗಲಿದೆ.

3 / 7
ಈ ಪಿಚ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವುದು ಸರಿಯಾದ ನಿರ್ಧಾರ. ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನದಲ್ಲಿ ಇದುವರೆಗೆ 59 ಅಂತರಾಷ್ಟ್ರೀಯ ಟೆಸ್ಟ್ ಪಂದ್ಯಗಳು ನಡೆದಿವೆ. ಇಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯ ದಕ್ಷಿಣ ಆಫ್ರಿಕಾ ಮತ್ತು ಭಾರತದ್ದೇ ಆಗಿದೆ. ಇದರಲ್ಲಿ ಭಾರತ ಸೋಲು ಅನುಭವಿಸಿದೆ.

4 / 7
ಭಾರತ ಕ್ರಿಕೆಟ್ ತಂಡ ಈ ಮೈದಾನದಲ್ಲಿ ಒಟ್ಟು 6 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಈವರೆಗೆ ಒಂದೇ ಒಂದು ಗೆಲುವು ಸಾಧಿಸಿಲ್ಲ. ಆತಿಥೇಯರು ಈ ಮೈದಾನದಲ್ಲಿ ಭಾರತವನ್ನು 4 ಬಾರಿ ಸೋಲಿಸುವಲ್ಲಿ ಯಶಸ್ವಿಯಾಗಿದ್ದರೆ, 2 ಟೆಸ್ಟ್‌ಗಳು ಡ್ರಾದಲ್ಲಿ ಕೊನೆಗೊಂಡಿವೆ. ಇದೀಗ ಸರಣಿ ಸೋಲು ತಪ್ಪಿಸಲು ಭಾರತ ಈ ಬಾರಿ ಇತಿಹಾಸ ಸೃಷ್ಟಿಸಬೇಕಿದೆ.

5 / 7
ದಕ್ಷಿಣ ಆಫ್ರಿಕಾದಲ್ಲಿ ಭಾರತ ಈವರೆಗೆ ಟೆಸ್ಟ್ ಸರಣಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಮೊದಲ ಟೆಸ್ಟ್ ಸೋತ ನಂತರ, ಈ ಬಾರಿಯೂ ಇತಿಹಾಸ ಸೃಷ್ಟಿಸುವ ಅವಕಾಶ ಕೈಚೆಲ್ಲಿತು. ಇದುವರೆಗೆ ಭಾರತ ಒಮ್ಮೆ ಮಾತ್ರ ಅವರ ನಾಡಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದೀಗ ಆ ದಾಖಲೆಯನ್ನು ಮುರಿಯುವ ಸಾಧ್ಯತೆಯಿದೆ.

6 / 7
ನ್ಯೂಲ್ಯಾಂಡ್ಸ್, ಕೇಪ್ ಟೌನ್ ನಲ್ಲಿ ಇದುವರೆಗೆ 59 ಟೆಸ್ಟ್ ಪಂದ್ಯಗಳು ನಡೆದಿವೆ. ಇಲ್ಲಿ 14 ಬಾರಿ ತಂಡಗಳು 100 ರನ್ ಗಡಿ ತಲುಪಲು ಸಾಧ್ಯವಾಗಲಿಲ್ಲ. ಈ ಮೈದಾನದಲ್ಲಿ ಕನಿಷ್ಠ ಸ್ಕೋರ್ 35 ರನ್ ಆಗಿದೆ. 1899 ರಲ್ಲಿ, ಇಂಗ್ಲೆಂಡ್ ವಿರುದ್ಧ ಈ ಸಂಖ್ಯೆಯಲ್ಲಿ ಪ್ರೋಟೀಸ್ ಕುಸಿಯಿತು. ಇಲ್ಲಿ ನಾಲ್ಕು ಬಾರಿ ತಂಡಗಳು 50 ರನ್‌ಗಳನ್ನು ತಲುಪಲು ವಿಫಲವಾಗಿವೆ.

7 / 7
ಹಾಗೆಯೆ ಇಲ್ಲಿ ಹೆಚ್ಚಿನ ಸ್ಕೋರಿಂಗ್ ಪಂದ್ಯಗಳು ಕೂಡ ನಡೆದಿವೆ. ಇಲ್ಲಿ 16 ಬಾರಿ 500 ರನ್ ಗಡಿ ದಾಟಿವೆ. ಈ ಮೈದಾನದಲ್ಲಿ ಗರಿಷ್ಠ ಸ್ಕೋರ್ 651 ರನ್. ಮಾರ್ಚ್ 2009 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಈ ಸಾಧನೆ ಮಾಡಿದೆ. ಈ ಮೈದಾನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಜಾಕ್ವೆಸ್ ಕಾಲಿಸ್ ಹೆಸರಿನಲ್ಲಿದೆ. ಅವರು ಇಲ್ಲಿ 22 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 2181 ರನ್ ಗಳಿಸಿದ್ದಾರೆ.