CCL 2024: ಸಿಸಿಎಲ್ನಲ್ಲಿ ಸತತ ಮೂರನೇ ಅರ್ಧಶತಕ ಸಿಡಿಸಿದ ಡಾರ್ಲಿಂಗ್ ಕೃಷ್ಣ..!
CCL 2024: ಕರ್ನಾಟಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಆಲ್ರೌಂಡರ್ ಡಾರ್ಲಿಂಗ್ ಕೃಷ್ಣ ಇಂದಿನ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದರು. ಬ್ಯಾಟಿಂಗ್ನಲ್ಲಿ ಆಡಿದ ಎರಡೂ ಇನ್ನಿಂಗ್ಸ್ನಲ್ಲಿ ಅರ್ಧಶತಕ ಸಿಡಿಸಿದ ಕೃಷ್ಣಗೆ ಈ ಲೀಗ್ನಲ್ಲಿ ಇದು ಸತತ ಮೂರನೇ ಅರ್ಧಶತಕವಾಗಿದೆ.
1 / 6
ಮೊದಲ ಐದು ಪಂದ್ಯಗಳನ್ನು ದುಬೈನ ಶಾರ್ಜಾದಲ್ಲಿ ಆಡಿ ಮುಗಿಸಿದ್ದ ಸಿಸಿಎಲ್ ತಂಡಗಳು ಇದೀಗ ಹೈದರಾಬಾದ್ನಲ್ಲಿ ಅಭಿಮಾನಿಗಳು ರಂಜಿಸುತ್ತಿವೆ. ಇಂದು ನಡೆದ ಲೀಗ್ನ 8ನೇ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ತಂಡವನ್ನು 30 ರನ್ಗಳಿಂದ ಮಣಿಸಿದ ಕರ್ನಾಟಕ ಬುಲ್ಡೋಜರ್ಸ್ ತಂಡ ಲೀಗ್ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ.
2 / 6
ಕರ್ನಾಟಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಆಲ್ರೌಂಡರ್ ಡಾರ್ಲಿಂಗ್ ಕೃಷ್ಣ ಇಂದಿನ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದರು. ಬ್ಯಾಟಿಂಗ್ನಲ್ಲಿ ಆಡಿದ ಎರಡೂ ಇನ್ನಿಂಗ್ಸ್ನಲ್ಲಿ ಅರ್ಧಶತಕ ಸಿಡಿಸಿದ ಕೃಷ್ಣಗೆ ಈ ಲೀಗ್ನಲ್ಲಿ ಇದು ಸತತ ಮೂರನೇ ಅರ್ಧಶತಕವಾಗಿದೆ.
3 / 6
ಲೀಗ್ನಲ್ಲಿ ಮೊದಲ ಪಂದ್ಯವನ್ನು ದುಬೈನ ಶಾರ್ಜಾದಲ್ಲಿ ಮುಂಬೈ ಹೀರೋಸ್ ವಿರುದ್ಧ ಆಡಿದ್ದ ಕರ್ನಾಟಕ ತಂಡ, ಆ ಪಂದ್ಯವನ್ನು 38 ರನ್ಗಳಿಂದ ಗೆದ್ದುಕೊಂಡಿತ್ತು. ಈ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಕೃಷ್ಣ ಸಿಡಿಲಬ್ಬರದ ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
4 / 6
ಈ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 10 ಎಸೆತಗಳಲ್ಲಿ 16 ರನ್ ಕಲೆಹಾಕಿದ್ದ ಕೃಷ್ಣ ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 18 ಎಸೆತಗಳಲ್ಲಿ ಅಜೇಯ 55 ರನ್ಗಳ ಗೆಲುವಿನ ಇನ್ನಿಂಗ್ಸ್ ಆಡಿದ್ದರು. ಕೃಷ್ಣ ಅವರ ಈ ಸ್ಫೋಟಕ ಇನ್ನಿಂಗ್ಸ್ನಲ್ಲಿ 6 ಸಿಕ್ಸರ್ ಸಹ ಸೇರಿದ್ದವು.
5 / 6
ಇನ್ನು ಇಂದು ನಡೆದ ಕರ್ನಾಟಕ ಬುಲ್ಡೋಜರ್ಸ್ ತಂಡದ ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಕೃಷ್ಣ 33 ಎಸೆತಗಳಲ್ಲಿ 72 ರನ್ ಕಲೆಹಾಕಿದರೆ, ಎರಡನೇ ಇನ್ನಿಂಗ್ಸ್ನಲ್ಲಿ 21 ಎಸೆತಗಳಲ್ಲಿ 54 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.
6 / 6
ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ಕಮಾಲ್ ಮಾಡಿದ ಕೃಷ್ಣ ಮೊದಲ ಇನ್ನಿಂಗ್ಸ್ನಲ್ಲಿ 2 ಓವರ್ ಬೌಲ್ ಮಾಡಿ 11 ರನ್ ನೀಡಿ 1 ವಿಕೆಟ್ ಪಡೆದರೆ, ಎರಡನೇ ಇನ್ನಿಂಗ್ಸ್ನಲ್ಲೂ 2 ಓವರ್ ಬೌಲ್ ಮಾಡಿ 31 ರನ್ ಬಿಟ್ಟುಕೊಟ್ಟು ಪ್ರಮುಖ 2 ವಿಕೆಟ್ ಕಬಳಿಸಿದರು.