Women’s Asia Cup 2024: 7 ಸಿಕ್ಸರ್, 119 ರನ್; ಏಷ್ಯಾಕಪ್​ನಲ್ಲಿ ಇತಿಹಾಸ ಸೃಷ್ಟಿಸಿದ ಚಾಮರಿ ಅಟಪಟ್ಟು

|

Updated on: Jul 22, 2024 | 9:50 PM

Chamari Atapattu, Women’s Asia Cup 2024: ಸಿಡಿಲಬ್ಬರದ ಶತಕದೊಂದಿಗೆ ಚಾಮರಿ ಅಟಪಟ್ಟು ಟಿ20 ಮಾದರಿಯಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಈ ಮೊದಲು ಟಿ20 ಏಷ್ಯಾಕಪ್‌ನಲ್ಲಿ ಯಾವುದೇ ಮಹಿಳಾ ಆಟಗಾರ್ತಿ ಶತಕ ಸಿಡಿಸಿರಲಿಲ್ಲ.

1 / 7
ಶ್ರೀಲಂಕಾದಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯಾಕಪ್​ನಲ್ಲಿ ಇಂದು ನಡೆದ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡ, ಮಲೇಷ್ಯಾ ತಂಡವನ್ನು ಬರೋಬ್ಬರಿ 144 ರನ್​ಗಳ ಬೃಹತ್ ಅಂತರದಿಂದ ಪಣಿಸಿದೆ. ಲಂಕಾ ನೀಡಿದ 184 ರನ್​​ಗಳ ಗುರಿ ಬೆನ್ನಟ್ಟಿದ ಮಲೇಷ್ಯಾ ತಂಡ ಕೇವಲ 40 ರನ್​ಗಳಿಗೆ ಆಲೌಟ್ ಆಯಿತು.

2 / 7
ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 184 ರನ್ ಗಳಿಸಿತು. ತಂಡದ ಪರ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ನಾಯಕಿ ಚಾಮರಿ ಅಟಪಟ್ಟು ಕೇವಲ 69 ಎಸೆತಗಳಲ್ಲಿ 119 ರನ್‌ಗಳ ಅಜೇಯ ಇನ್ನಿಂಗ್ಸ್‌ ಆಡಿದರು. ಅಟಪಟ್ಟು ಅವರ ಇನ್ನಿಂಗ್ಸ್​ನಲ್ಲಿ 14 ಬೌಂಡರಿ ಹಾಗೂ 7 ಸಿಕ್ಸರ್‌ಗಳು ಸೇರಿದ್ದವು.

3 / 7
ಈ ಸಿಡಿಲಬ್ಬರದ ಶತಕದೊಂದಿಗೆ ಚಾಮರಿ ಅಟಪಟ್ಟು ಟಿ20 ಮಾದರಿಯಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಈ ಮೊದಲು ಟಿ20 ಏಷ್ಯಾಕಪ್‌ನಲ್ಲಿ ಯಾವುದೇ ಮಹಿಳಾ ಆಟಗಾರ್ತಿ ಶತಕ ಸಿಡಿಸಿರಲಿಲ್ಲ.

4 / 7
ಈ ಶತಕದೊಂದಿಗೆ ಅಟಪಟ್ಟು ಟಿ20 ವೃತ್ತಿಜೀವನದಲ್ಲಿ ಮೂರನೇ ಶತಕ ದಾಖಲಿಸಿದರು. ಇಲ್ಲಿಯವರೆಗೆ ಅವರು 136 ಪಂದ್ಯಗಳಲ್ಲಿ 24.44 ರ ಸರಾಸರಿಯಲ್ಲಿ 3153 ರನ್ ಗಳಿಸಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾ ಮತ್ತು ಸ್ಕಾಟ್ಲೆಂಡ್ ವಿರುದ್ಧವೂ ಅವರು ಶತಕ ಬಾರಿಸಿದ್ದರು.

5 / 7
ಇದಲ್ಲದೆ ಮಲೇಷ್ಯಾ ವಿರುದ್ಧ ತನ್ನ ಇನ್ನಿಂಗ್ಸ್‌ನಲ್ಲಿ 7 ಸಿಕ್ಸರ್‌ಗಳನ್ನು ಬಾರಿಸಿದ ಅಟಪಟ್ಟು, ಏಷ್ಯಾಕಪ್ ಪಂದ್ಯವೊಂದರಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ದಾಖಲೆ ಕೂಡ ನಿರ್ಮಿಸಿದರು. ಇವರಿಗೂ ಮುನ್ನ ಯಾವುದೇ ಮಹಿಳಾ ಆಟಗಾರ್ತಿ ಏಷ್ಯಾಕಪ್ ಪಂದ್ಯವೊಂದರಲ್ಲಿ ಇಷ್ಟು ಸಿಕ್ಸರ್ ಬಾರಿಸಿಲ್ಲ.

6 / 7
ಈ ಟೂರ್ನಿಯಲ್ಲಿ ಇನ್ನಿಂಗ್ಸ್‌ನಲ್ಲಿ ಗರಿಷ್ಠ 3 ಸಿಕ್ಸರ್‌ಗಳನ್ನು ಬಾರಿಸಿರುವುದು ಇಲ್ಲಿಯವರೆಗಿನ ದಾಖಲೆಯಾಗಿತ್ತು. 2022ರ ಏಷ್ಯಾಕಪ್‌ನಲ್ಲಿ ಭಾರತದ ಶೆಫಾಲಿ ವರ್ಮಾ ಮಲೇಷ್ಯಾ ವಿರುದ್ಧ 3 ಸಿಕ್ಸರ್‌ಗಳನ್ನು ಬಾರಿಸಿದ್ದರು. ಹಾಗೆಯೇ ಭಾರತದ ರಿಚಾ ಘೋಷ್ ಕೂಡ ಪಾಕಿಸ್ತಾನದ ವಿರುದ್ಧ ಮೂರು ಸಿಕ್ಸರ್‌ಗಳನ್ನು ಬಾರಿಸಿದ್ದರು.

7 / 7
ಇವರಲ್ಲದೆ ಪಾಕಿಸ್ತಾನದ ಅಲಿಯಾ ರಿಯಾಜ್ 2022 ರ ಏಷ್ಯಾಕಪ್‌ನಲ್ಲಿ ಯುಎಇ ವಿರುದ್ಧ ಮೂರು ಸಿಕ್ಸರ್‌ಗಳನ್ನು ಬಾರಿಸಿದ್ದರು. ಭಾರತದ ಸ್ಮೃತಿ ಮಂಧಾನ ಕೂಡ 2022 ರಲ್ಲಿ ಶ್ರೀಲಂಕಾ ವಿರುದ್ಧ ಮೂರು ಸಿಕ್ಸರ್‌ಗಳನ್ನು ಬಾರಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈಗ ಈ ಎಲ್ಲಾ ದಾಖಲೆಗಳನ್ನು ಅಟಪಟ್ಟು ಮುರಿದಿದ್ದಾರೆ.