AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

96 ವರ್ಷಗಳ ಹಳೆಯ ರೆಕಾರ್ಡ್ ಬ್ರೇಕ್ ಮಾಡಿದ ಲ್ಯಾಥಮ್-ಕಾನ್ವೆ..!

England vs New Zealand, 3rd Test: ಟ್ರೆಂಟ್ ಬಿಡ್ಜ್​ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 438 ರನ್ ಕಲೆಹಾಕಿದೆ. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ 2ನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 223 ರನ್​ ಗಳಿಸಿದೆ.

ಝಾಹಿರ್ ಯೂಸುಫ್
|

Updated on:Jun 27, 2026 | 11:37 AM

Share
ಇಂಗ್ಲೆಂಡ್‌ನ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೂಲಕ ನ್ಯೂಝಿಲೆಂಡ್​ನ ಟಾಮ್ ಲ್ಯಾಥಮ್ ಮತ್ತು ಡೆವೊನ್ ಕಾನ್ವೆ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ ಮೊದಲ ವಿಕೆಟ್​ಗೆ ತ್ರಿಶತಕದ ಜೊತೆಯಾಟವಾಡುವ ಮೂಲಕ ಎಂಬುದು ವಿಶೇಷ. (PC: getty images)

1 / 5
ಇಂಗ್ಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡಕ್ಕೆ ಟಾಮ್ ಲ್ಯಾಥಮ್ ಹಾಗೂ ಡೆವೊನ್ ಕಾನ್ವೆ ಭರ್ಜರಿ ಆರಂಭ ಒದಗಿಸಿದ್ದರು. ಎಚ್ಚರಿಕೆಯ ಬ್ಯಾಟಿಂಗ್​ನೊಂದಿಗೆ ಇನಿಂಗ್ಸ್ ಕಟ್ಟಿದ ಈ ಜೋಡಿಯು ಮೊದಲ ವಿಕೆಟ್​ಗೆ ಪೇರಿಸಿದ್ದು ಬರೋಬ್ಬರಿ 317 ರನ್​ಗಳು. (PC: getty images)

2 / 5
214 ಎಸೆತಗಳನ್ನು ಎದುರಿಸಿದ ಟಾಮ್ ಲ್ಯಾಥಮ್ 15 ಬೌಂಡರಿಗಳೊಂದಿಗೆ 151 ರನ್ ಗಳಿಸಿದರೆ, ಡೆವೊನ್ ಕಾನ್ವೆ 224 ಎಸೆತಗಳಲ್ಲಿ 22 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 157 ರನ್ ಚಚ್ಚಿದರು. ಈ ಮೂಲಕ ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ ನ್ಯೂಝಿಲೆಂಡ್ ಪರ ಮೊದಲ ವಿಕೆಟ್​ಗೆ ಗರಿಷ್ಠ ರನ್​ಗಳ ಜೊತೆಯಾಟವಾಡಿದ ಜೋಡಿ ಎನಿಸಿಕೊಂಡರು. (PC: getty images)

3 / 5
ಅಷ್ಟೇ ಅಲ್ಲದೆ ಇಂಗ್ಲೆಂಡ್ ವಿರುದ್ಧ ನ್ಯೂಝಿಲೆಂಡ್ ಪರ ಯಾವುದೇ ವಿಕೆಟ್‌ಗೆ ಗರಿಷ್ಠ ರನ್‌ಗಳ ಜೊತೆಯಾಟದ ದಾಖಲೆಯನ್ನು ಸಹ ತಮ್ಮದಾಗಿಸಿಕೊಂಡರು. ಇದಕ್ಕೂ ಈ ದಾಖಲೆ ಸ್ಟೀವ್ ಡೆಂಪ್ಸ್ಟರ್ ಮತ್ತು ಜಾಕಿ ಮಿಲ್ಸ್ ಹೆಸರಿನಲ್ಲಿತ್ತು. ಈ ಜೋಡಿಯು 1930ರಲ್ಲಿ ವೆಲ್ಲಿಂಗ್ಟನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 276 ರನ್ ಕಲೆಹಾಕಿದ್ದರು. (PC: getty images)

4 / 5
ಇದೀಗ ಬರೋಬ್ಬರಿ 96 ವರ್ಷಗಳ ಬಳಿಕ ಟಾಮ್ ಲ್ಯಾಥಮ್ ಮತ್ತು ಡೆವೊನ್ ಕಾನ್ವೆ ಜೋಡಿಯು ನ್ಯೂಝಿಲೆಂಡ್ ಪರ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ 317 ರನ್​ಗಳ ಮೊದಲ ವಿಕೆಟ್​ ಜೊತೆಯಾಟದೊಂದಿಗೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಸೌತ್ ಆಫ್ರಿಕಾದ ಗ್ರೇಮ್ ಸ್ಮಿತ್ ಮತ್ತು ಹರ್ಷಲ್ ಗಿಬ್ಸ್ ನಂತರ 2 ಬಾರಿ 300ಕ್ಕೂ ಹೆಚ್ಚು ರನ್‌ಗಳ ಆರಂಭಿಕ ಜೊತೆಯಾಟವಾಡಿದ ವಿಶ್ವದ 2ನೇ ಜೋಡಿ ಎಂಬ ಕೀರ್ತಿಗೆ ಇವರು ಪಾತ್ರರಾಗಿದ್ದಾರೆ. (PC: getty images)

5 / 5

Published On - 11:33 am, Sat, 27 June 26

Follow Us
ಸಚಿವ ಸಂಪುಟದಲ್ಲಿ 2-3 ಮಹಿಳಾ ಶಾಸಕರಿಗೆ ಸ್ಥಾನ ನೀಡಬೇಕಿತ್ತು: ರಮ್ಯಾ

ಬರಿದಾದ ತುಂಗಭದ್ರಾ ನದಿ: ಮಂತ್ರಾಲಯದಲ್ಲಿ ಪುಣ್ಯ ಸ್ನಾನಕ್ಕೂ ಭಕ್ತರ ಪರದಾಟ

ಮೈದುಂಬಿದ ಚಿಕ್ಲಿಹೊಳೆ ಜಲಾಶಯ: ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ನೀರು

ಬೀದಿ ದೀಪ ಅಳವಡಿಸದ ಹಿನ್ನೆಲೆ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಕ್ಲಾಸ್​​

ಶಾಲೆಗೆ ಹೋಗಲು ಪ್ರಾಣ ಪಣಕ್ಕಿಡುತ್ತಿರುವ ಮಕ್ಕಳು! ವಿಡಿಯೋ ವೈರಲ್

‘ಅಯೋಗ್ಯ 2’ ತಂಡದ ಭರ್ಜರಿ ಭೋಜನ, ವಿಡಿಯೋ ನೋಡಿ

ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ

ಸಿದ್ದರಾಮಯ್ಯ ಮುನಿಸಿಕೊಂಡಿದ್ದಾರಾ?: ಅಸಲಿ ಸತ್ಯ ಬಿಚ್ಚಿಟ್ಟ ಶಿವಲಿಂಗೇಗೌಡ

3 ವರ್ಷಗಳಲ್ಲಿ 1,000 ರೋಬೋಟಿಕ್ ಸರ್ಜರಿ ಯಶಸ್ವಿ

ದಿನೇಶ್ ಗುಂಡೂರಾವ್​​ಗೆ ಕೈತಪ್ಪಿದ ಸಚಿವ ಸ್ಥಾನ: ಬೆಂಬಲಿಗರಿಂದ ಪ್ರತಿಭಟನೆ