IND vs ENG: ಗಾಯದಿಂದ ಚೇತರಿಸಿಕೊಳ್ಳದ ಸ್ಟಾರ್ ವೇಗಿ; ಇಂಗ್ಲೆಂಡ್ ಸರಣಿಯಿಂದ ಔಟ್!

|

Updated on: Jan 11, 2025 | 4:49 PM

IND vs ENG: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಗೆ ಟೀಂ ಇಂಡಿಯಾವನ್ನು ಇನ್ನೂ ಪ್ರಕಟವಾಗಿಲ್ಲ. ಆದರೆ, ಪ್ರಮುಖ ವೇಗಿ ಮಯಾಂಕ್ ಯಾದವ್ ಗಾಯದಿಂದಾಗಿ ಈ ಸರಣಿಯಿಂದ ಹೊರಗುಳಿದಿದ್ದಾರೆ ಎಂಬ ಸುದ್ದಿ ಆಘಾತ ತಂದಿದೆ. ಬಾಂಗ್ಲಾದೇಶ ವಿರುದ್ಧದ ಸರಣಿಯ ನಂತರ ಬೆನ್ನುನೋವಿನಿಂದ ಬಳಲುತ್ತಿರುವ ಮಯಾಂಕ್ ಇಂಗ್ಲೆಂಡ್ ಸರಣಿಗೂ ಫಿಟ್ ಆಗುವ ಸಾಧ್ಯತೆ ಕಡಿಮೆ ಎಂದು ವರದಿಯಾಗಿದೆ.

1 / 7
ಭಾರತ ಹಾಗೂ ಇಂಗ್ಲೆಂಡ್‌ ನಡುವೆ ಜನವರಿ 23 ರಿಂದ ಐದು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಈ ಸರಣಿಗಾಗಿ ಈಗಾಗಲೇ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಆದರೆ ಆತಿಥೇಯ ಟೀಂ ಇಂಡಿಯಾವನ್ನು ಇದುವರೆಗೂ ಪ್ರಕಟಿಸಲಾಗಿಲ್ಲ. ಮಾಹಿತಿ ಪ್ರಕಾರ ಇನ್ನೇರಡು ದಿನಗಳಲ್ಲಿ ಬಿಸಿಸಿಐ ತನ್ನ ತಂಡವನ್ನು ಘೋಷಿಸಲಿದೆ.

2 / 7
ಆಪ್ತ ಮೂಲಗಳ ಪ್ರಕಾರ, ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲಿ ಆಡಿದ್ದ ತಂಡವನ್ನೇ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಆದರೆ ಅದಕ್ಕೂ ಮುನ್ನ ಟೀಂ ಇಂಡಿಯಾ ಪಾಳಯದಿಂದ ಆಘಾತಕ್ಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ತಂಡದ ಸ್ಟಾರ್ ಯುವ ವೇಗಿ ಮಯಾಂಕ್ ಯಾದವ್ ಈ ಸರಣಿಗೆ ಲಭ್ಯರಿಲ್ಲ ಎಂದು ಹೇಳಲಾಗುತ್ತಿದೆ.

3 / 7
2024 ರ ಐಪಿಎಲ್​ನಲ್ಲಿ ತನ್ನ ವೇಗದ ಬೌಲಿಂಗ್ ಮೂಲಕ ಟೀಂ ಇಂಡಿಯಾದ ಕದ ತಟ್ಟಿದ್ದ ಮಯಾಂಕ್ ಯಾದವ್ ಪ್ರತಿ ಗಂಟೆಗೆ 150 ಕಿಮೀ ವೇಗದಲ್ಲಿ ಸ್ಥಿರವಾಗಿ ಬೌಲಿಂಗ್ ಮಾಡಲು ಹೆಸರುವಾಸಿಯಾಗಿದ್ದಾರೆ. ಆದರೆ ಅವರು ತಮ್ಮ ಅಲ್ಪಾವಧಿಯ ವೃತ್ತಿಜೀವನದಲ್ಲಿ ಅನೇಕ ಬಾರಿ ಗಾಯಕ್ಕೆ ತುತ್ತಾಗುತ್ತಿದ್ದಾರೆ. ಐಪಿಎಲ್ ಮಧ್ಯದಲ್ಲಿ ಮಯಾಂಕ್ ಯಾದವ್ ಗಾಯಗೊಂಡು ಲೀಗ್‌ನಿಂದ ಹೊರಗುಳಿದಿದ್ದರು.

4 / 7
ಇದಾದ ನಂತರ ಚೇತರಿಸಿಕೊಂಡಿದ್ದ ಮಯಾಂಕ್ ಯಾದವ್​ರನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಟಿ20ಗೆ ತಂಡದಲ್ಲಿ ಆಯ್ಕೆ ಮಾಡಲಾಗಿತ್ತು. ಇದಲ್ಲದೆ ಆಡುವ ಹನ್ನೊಂದರ ಬಳಗದಲ್ಲೂ ಮಯಾಂಕ್ ಅವಕಾಶ ಪಡೆದಿದ್ದರು. ಆದರೆ ಈ ಸರಣಿಯ ನಂತರ ಬೆನ್ನುನೋವಿಗೆ ತುತ್ತಾಗಿದ್ದ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಗೆ ಆಯ್ಕೆ ಮಾಡಲಾಗಿರಲಿಲ್ಲ.

5 / 7
ಮಾಧ್ಯಮ ವರದಿಗಳ ಪ್ರಕಾರ, ಮಯಾಂಕ್ ಯಾದವ್ ಇನ್ನೂ ಗಾಯದಿಂದ ಚೇತರಿಸಿಕೊಂಡಿಲ್ಲ. ಇದರಿಂದಾಗಿ ಅವರು ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟಿ20 ಸರಣಿಗೂ ಟೀಂ ಇಂಡಿಯಾದಲ್ಲಿ ಆಯ್ಕೆಯಾಗುವುದಿಲ್ಲ. ಬಿಸಿಸಿಐ ಮೂಲವನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದ್ದು, ಮಯಾಂಕ್ ಬೆನ್ನುನೋವಿನಿಂದ ಬಳಲುತ್ತಿದ್ದು, ಇಂಗ್ಲೆಂಡ್ ಸರಣಿಗೆ ಫಿಟ್ ಆಗುವ ಸಾಧ್ಯತೆಯಿಲ್ಲ. ಇದಲ್ಲದೆ ಜನವರಿ 23 ರಿಂದ ಆರಂಭವಾಗಲಿರುವ 2ನೇ ಹಂತದ ರಣಜಿ ಟ್ರೋಫಿಯ ಮೊದಲ ಪಂದ್ಯಕ್ಕೂ ಅವರನ್ನು ಆಯ್ಕೆ ಮಾಡಲಾಗಿಲ್ಲ.

6 / 7
ಮಯಾಂಕ್ ಯಾದವ್ ಇದುವರೆಗೆ ಟೀಂ ಇಂಡಿಯಾ ಪರ 3 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ಅವಧಿಯಲ್ಲಿ ಅವರು 20.75ರ ಸರಾಸರಿಯಲ್ಲಿ 4 ವಿಕೆಟ್ ಪಡೆದಿದ್ದಾರೆ. ವಿಶೇಷವೆಂದರೆ ಅವರು ಕೇವಲ 6.91 ಎಕಾನಮಿ ದರದಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ.

7 / 7
ಮಯಾಂಕ್ ಯಾದವ್ ತಮ್ಮ ಚೊಚ್ಚಲ ಪಂದ್ಯದ ಮೊದಲ ಓವರ್‌ನಲ್ಲಿಯೇ ಮೇಡನ್ ಬೌಲ್ ಮಾಡಿದ್ದರು. ಈ ಮೂಲಕ ಟೀಂ ಇಂಡಿಯಾದ ಭವಿಷ್ಯದ ಸ್ಟಾರ್ ವೇಗಿ ಎನಿಸಿಕೊಳ್ಳುವ ಸೂಚನೆ ನೀಡಿದ್ದ ಮಯಾಂಕ್​ ಪದೇ ಪದೇ ಗಾಯಕ್ಕೆ ತುತ್ತಾಗುತ್ತಿದ್ದಾರೆ. ಹೀಗಾಗಿ ಅವರ ವೃತ್ತಿಜೀವನಕ್ಕೆ ಹಿನ್ನಡೆಯುಂಟಾಗುತ್ತಿದೆ.