- Kannada News Photo gallery Cricket photos Kannada News | CSK vs GT IPL 2023 Final could very well be the farewell game of India legend MS Dhoni
MS Dhoni retirement: ಇಂದು ಎಎಸ್ ಧೋನಿ ನಿವೃತ್ತಿ ಸಾಧ್ಯತೆ: ಪ್ರಶಸ್ತಿಯೊಂದಿಗೆ ವಿದಾಯ ಹೇಳ್ತಾರ ಎಂಎಸ್ಡಿ?
CSK vs GT, IPL 2023 Final: ಐಪಿಎಲ್ 2023 ರಲ್ಲಿಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
Updated on: May 28, 2023 | 11:17 AM

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಂದು ಅಂತಿಮ ಫೈನಲ್ ಪಂದ್ಯ ನಡೆಯಲಿದೆ. ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ಮುಖಾಮುಖಿ ಆಗಲಿದೆ. ಈ ಪಂದ್ಯ ಅನೇಕ ವಿಶೇಷ ಘಟನೆಗಳಿಗೆ ಸಾಕ್ಷಿಯಾಗಲಿದೆ.

ಇಂದಿನ ಪಂದ್ಯದಲ್ಲಿ ಸಿಎಸ್ಕೆ ಚಾಂಪಿಯನ್ ಆದರೆ 5ನೇ ಬಾರಿ ಟ್ರೋಫಿ ಎತ್ತಿ ಹಿಡಿದ ಸಾಧನೆ ಮಾಡಲಿದೆ. ಜಿಟಿ ಗೆದ್ದರೆ ಸತತ ಎರಡನೇ ಬಾರಿ ಟ್ರೋಫಿ ಮುಡಿಗೇರಿಸಿಕೊಳ್ಳಲಿದೆ. ಇದರ ನಡುವೆ ಎಂಎಸ್ ಧೋನಿ, ಶುಭ್ಮನ್ ಗಿಲ್ ಐತಿಹಾಸಿಕ ದಾಖಲೆ ಬರೆಯಲೂ ಸಜ್ಜಾಗಿದ್ದಾರೆ.

ಹೀಗಿರುವಾಗ ಮಹೇಂದ್ರ ಸಿಂಗ್ ಧೋನಿ ಇಂದು ನಿವೃತ್ತಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಐಪಿಎಲ್ 2023 ಆರಂಭವಾದಾಗಿನಿಂದ ಧೋನಿ ನಿವೃತ್ತಿ ವಿಚಾರ ಭಾರೀ ಚರ್ಚೆಯಲ್ಲಿದೆ. ಈ ಬಗ್ಗೆ ಧೋನಿ ಸೇರಿದಂತೆ ಯಾರುಕೂಡ ಈ ವರೆಗೆ ಖಚಿತ ಮಾಹಿತಿ ಹೊರಹಾಕಿಲ್ಲ.

ಟಾಸ್ ವೇಳೆ ಅಥವಾ ಪೋಸ್ಟ್ ಮ್ಯಾಚ್ ಸಂದರ್ಭ ಧೋನಿ ಬಳಿ ನಿವೃತ್ತಿಗೆ ಸಂಬಂಧಿಸಿದಂತೆ ಹಲವಾರು ಬಾರಿ ಪ್ರಶ್ನೆಗಳನ್ನು ಕೇಳಿದರೂ ಇದರ ಬಗ್ಗೆ ಮಾತನಾಡದೇ ಮೌನವಾಗಿದ್ದರು. ಇಂದು ಫೈನಲ್ ಪಂದ್ಯ ಆಗಿರುವುದರಿಂದ ನಿವೃತ್ತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ನಿವೃತ್ತಿ ಬಳಿಕ ಧೋನಿ ಸಿಎಸ್ಕೆ ತಂಡದ ಕೋಚ್ ಆಗುವ ಸಾಧ್ಯತೆ ಇದೆ. ಮೊನ್ನೆಯಷ್ಟೆ ಧೋನಿ, ನಿವೃತ್ತಿ ಬಗ್ಗೆ ತೀರ್ಮಾನ ಕೈಗೊಳ್ಳಲು ನನಗಿನ್ನೂ 8ರಿಂದ 9 ತಿಂಗಳ ಸಮಯವಿದೆ. ನಾನು ಯಾವಾಗಲೂ ಚೆನ್ನೈ ಸೂಪರ್ ಕಿಂಗ್ಸ್ ಪರ ಇರುತ್ತೇನೆ, ಅದು ಆಡುವಾಗಾದರೂ ಸರಿ ಅಥವಾ ತಂಡದಿಂದ ಹೊರಗಿದ್ದಾದರೂ ಸರಿ ಎಂದು ಹೇಳಿದ್ದರು.

ಈ ಮೂಲಕ ಧೋನಿ ಇನ್ನೂ ಎಂಟರಿಂದ ಒಂಬತ್ತು ತಿಂಗಳ ಸಮಯವಿದ್ದು, ಆಟಗಾರನಾಗಿ ಇರ್ತೀನೋ ಅಥವಾ ಕೋಚ್ ಆಗಿ ಇರ್ತೀನೋ ಗೊತ್ತಿಲ್ಲ, ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿಯೇ ಇರುತ್ತೇನೆ ಎಂದು ಪರೋಕ್ಷವಾಗಿ ಇದೇ ತನ್ನ ಕೊನೆಯ ಐಪಿಎಲ್ ಎಂದು ತಿಳಿಸಿದ್ದರು.

ಎಂಎಸ್ ಧೋನಿ ಸದ್ಯ ಮೊಣಕಾಲು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರ ಮಧ್ಯೆಯೂ ಐಪಿಎಲ್ ಆಡುತ್ತಿರುವುದು ವಿಶೇಷ. ಐಪಿಎಲ್ ಮುಗಿದ ಬೆನ್ನಲ್ಲೆ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಧೋನಿ ಇಂದು ನಿವೃತ್ತಿ ಘೋಷಣೆ ಮಾಡಿದರೆ ಚೆನ್ನೈ ಗೆಲುವಿನ ವಿದಾಯ ಹೇಳುತ್ತಾ ಎಂಬುದು ನೋಡಬೇಕಿದೆ.




