CSK vs LSG: ಚೆನ್ನೈ ಸೂಪರ್ ಕಿಂಗ್ಸ್-ಲಖನೌ ಹೈವೋಲ್ಟೇಜ್ ಪಂದ್ಯದ ರೋಚಕ ಫೋಟೋಗಳು ನೋಡಿ
Chennai vs Lucknow: ಸಂಪೂರ್ಣ 40 ಓವರ್ ನಡೆದ ಪಂದ್ಯದಲ್ಲಿ ಸಿಎಸ್ಕೆ 12 ರನ್ಗಳ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ವಿಶೇಷ ಎಂದರೆ ಈ ಪಂದ್ಯದಲ್ಲಿ ಉಭಯ ತಂಡಗಳ ಮೊತ್ತ 200 ಗಡಿ ದಾಟಿದವು. ಗೆಲುವಿನ ಅಂಚಿನಲ್ಲಿ ಎಲ್ಎಸ್ಜಿ ಸೋಲುಂಡಿತು.
1 / 8
ಐಪಿಎಲ್ 2023 ರಲ್ಲಿ ಸೋಮವಾರ ಚೆನ್ನೈನ ಎಮ್ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೆಎಲ್ ನೇತೃತ್ವದ ಲಖನೌ ಸೂಪರ್ ಜೇಂಟ್ಸ್ ನಡುವಣ ಪಂದ್ಯ ರೋಚಕತೆಯಿಂದ ಕೂಡಿತ್ತು.
2 / 8
ಸಂಪೂರ್ಣ 40 ಓವರ್ ನಡೆದ ಪಂದ್ಯದಲ್ಲಿ ಸಿಎಸ್ಕೆ 12 ರನ್ಗಳ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ವಿಶೇಷ ಎಂದರೆ ಈ ಪಂದ್ಯದಲ್ಲಿ ಉಭಯ ತಂಡಗಳ ಮೊತ್ತ 200 ಗಡಿ ದಾಟಿದವು. ಗೆಲುವಿನ ಅಂಚಿನಲ್ಲಿ ಎಲ್ಎಸ್ಜಿ ಸೋಲುಂಡಿತು.
3 / 8
ಮೊದಲು ಬ್ಯಾಟ್ ಮಾಡಿದ ಚೆನ್ನೈಗೆ ಓಪನರ್ಗಳಾದ ರುತುರಾಜ್ ಗಾಯಕ್ವಾಡ್ (57) ಹಾಗೂ ಡೆವೊನ್ ಕಾನ್ವೆ (47) ಸ್ಫೋಟಕ ಬ್ಯಾಟಿಂಗ್ ನಡೆಸಿ ಶತಕದ ಜೊತೆಯಾಟ ಆಡಿದರು. 9.1 ಓವರ್ನಲ್ಲಿ ಇವರು 110 ರನ್ ಕಲೆಹಾಕಿದರು.
4 / 8
ಶಿವಂ ದುಬೆ 16 ಎಸೆತಗಳಲ್ಲಿ 27 ರನ್ ಬಾರಿಸಿದರೆ, ಮೊಯೀನ್ ಅಲಿ 19, ಬೆನ್ ಸ್ಟೋಕ್ಸ್ 8, ಜಡೇಜಾ 3 ಹಾಗೂ ಅಂಬಟಿ ರಾಯುಡು ಅಜೇಯ 27 ರನ್ ಗಳಿಸಿದರು. ಕೊನೆಯ ಓವರ್ನಲ್ಲಿ ಧೋನಿ 2 ಸಿಕ್ಸ್ ಸಿಡಿಸಿದರು.
5 / 8
ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿತು. ಎಲ್ಎಸ್ಜಿ ಪರ ಮಾರ್ಕ್ ವುಡ್ ಹಾಗೂ ರವಿ ಬಿಷ್ಟೋಯಿ ತಲಾ 3 ವಿಕೆಟ್ ಪಡೆದರು.
6 / 8
ಟಾರ್ಗೆಟ್ ಬೆನ್ನಟ್ಟಿದ ಲಖನೌ ಕೂಡ ಸ್ಫೋಟಕ ಆರಂಭ ಕಂಡಿತು. ಖೈಲ್ ಮೇಯರ್ಸ್ 22 ಎಸೆತಗಳಲ್ಲಿ 53 ರನ್ ಸಿಡಿಸಿದರು. ಮೊದಲ ವಿಕೆಟ್ಗೆ ಕೆಎಲ್ ರಾಹುಲ್ (20) ಜೊತೆಗೂಡಿ 79 ರನ್ಗಳು ಬಂದವು. ದೀಪಕ್ ಹೂಡ (2) ಹಾಗೂ ಕ್ರುನಾಲ್ ಪಾಂಡ್ಯ (9) ಬೇಗನೆ ನಿರ್ಗಮಿಸಿದರು.
7 / 8
ಮಾರ್ಕಸ್ ಸ್ಟೋಯಿನಿಸ್ 21 ಹಾಗೂ ನಿಕೋಲಸ್ ಪೂರನ್ 32 ರನ್ಗಳ ಕೊಡುಗೆ ನೀಡಿ ಗೆಲುವಿನ ಆಸೆ ಚಿಗುರಿಸಿದರು. ಆಯುಶ್ ಬದೋನಿ ಕೂಡ 23 ರನ್ ಚಚ್ಚಿದರು. ಆದರೆ, ಗೆಲುವು ಸಾಧ್ಯವಾಗಲಿಲ್ಲ.
8 / 8
ಕೃಷ್ಣಪ್ಪ ಗೌತಮ್ 17 ರನ್ ಹಾಗೂ ಮಾರ್ಕ್ ವುಡ್ 10 ರನ್ ಗಳಿಸಿ ಅಜೇಯರಾಗಿ ಉಳಿದರು. ಲಖನೌ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 205 ರನ್ ಬಾರಿಸಲಷ್ಟೆ ಶಕ್ತವಾಯಿತು. ಸಿಎಸ್ಕೆ ಪರ ಮೊಯಿನ್ ಅಲಿ 4 ವಿಕೆಟ್ ಕಿತ್ತು ಮಿಂಚಿದರು.