ಇದಲ್ಲದೆ ಐಪಿಎಲ್ನಲ್ಲಿ ಅತ್ಯಂತ ಯಶಸ್ವಿ ವಿಕೆಟ್ ಕೀಪರ್ ಎಂಬ ದಾಖಲೆ ಕೂಡ ಧೋನಿ ಹೆಸರಿನಲ್ಲಿದೆ. 236 ಐಪಿಎಲ್ ಪಂದ್ಯಗಳ ಮೂಲಕ 131 ಕ್ಯಾಚ್ ಹಾಗೂ 39 ಸ್ಟಂಪಿಂಗ್ ಮಾಡಿರುವ ಧೋನಿ ಒಟ್ಟು 170 ಆಟಗಾರರ ಔಟ್ಗೆ ಕಾರಣರಾಗಿದ್ದಾರೆ. ಅಲ್ಲದೆ ಐಪಿಎಲ್ನ ಅತ್ಯಂತ ಹಿರಿಯ ನಾಯಕ ಎಂಬ ಹೆಗ್ಗಳಿಕೆಗೂ ಧೋನಿ (41 ವರ್ಷ) ಪಾತ್ರರಾಗಿದ್ದಾರೆ.