CSK vs LSG: ಚೆನ್ನೈ ಸೂಪರ್ ಕಿಂಗ್ಸ್-ಲಖನೌ ಹೈವೋಲ್ಟೇಜ್ ಪಂದ್ಯದ ರೋಚಕ ಫೋಟೋಗಳು ನೋಡಿ

Chennai vs Lucknow: ಸಂಪೂರ್ಣ 40 ಓವರ್ ನಡೆದ ಪಂದ್ಯದಲ್ಲಿ ಸಿಎಸ್​ಕೆ 12 ರನ್​ಗಳ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ವಿಶೇಷ ಎಂದರೆ ಈ ಪಂದ್ಯದಲ್ಲಿ ಉಭಯ ತಂಡಗಳ ಮೊತ್ತ 200 ಗಡಿ ದಾಟಿದವು. ಗೆಲುವಿನ ಅಂಚಿನಲ್ಲಿ ಎಲ್​​ಎಸ್​ಜಿ ಸೋಲುಂಡಿತು.

Vinay Bhat
|

Updated on: Apr 04, 2023 | 7:29 AM

ಐಪಿಎಲ್ 2023 ರಲ್ಲಿ ಸೋಮವಾರ ಚೆನ್ನೈನ ಎಮ್​ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೆಎಲ್ ನೇತೃತ್ವದ ಲಖನೌ ಸೂಪರ್ ಜೇಂಟ್ಸ್ ನಡುವಣ ಪಂದ್ಯ ರೋಚಕತೆಯಿಂದ ಕೂಡಿತ್ತು.

1 / 8
ಸಂಪೂರ್ಣ 40 ಓವರ್ ನಡೆದ ಪಂದ್ಯದಲ್ಲಿ ಸಿಎಸ್​ಕೆ 12 ರನ್​ಗಳ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ವಿಶೇಷ ಎಂದರೆ ಈ ಪಂದ್ಯದಲ್ಲಿ ಉಭಯ ತಂಡಗಳ ಮೊತ್ತ 200 ಗಡಿ ದಾಟಿದವು. ಗೆಲುವಿನ ಅಂಚಿನಲ್ಲಿ ಎಲ್​​ಎಸ್​ಜಿ ಸೋಲುಂಡಿತು.

2 / 8
ಮೊದಲು ಬ್ಯಾಟ್ ಮಾಡಿದ ಚೆನ್ನೈಗೆ ಓಪನರ್​ಗಳಾದ ರುತುರಾಜ್ ಗಾಯಕ್ವಾಡ್ (57) ಹಾಗೂ ಡೆವೊನ್ ಕಾನ್ವೆ (47) ಸ್ಫೋಟಕ ಬ್ಯಾಟಿಂಗ್ ನಡೆಸಿ ಶತಕದ ಜೊತೆಯಾಟ ಆಡಿದರು. 9.1 ಓವರ್​ನಲ್ಲಿ ಇವರು 110 ರನ್ ಕಲೆಹಾಕಿದರು.

3 / 8
ಶಿವಂ ದುಬೆ 16 ಎಸೆತಗಳಲ್ಲಿ 27 ರನ್ ಬಾರಿಸಿದರೆ, ಮೊಯೀನ್ ಅಲಿ 19, ಬೆನ್ ಸ್ಟೋಕ್ಸ್ 8, ಜಡೇಜಾ 3 ಹಾಗೂ ಅಂಬಟಿ ರಾಯುಡು ಅಜೇಯ 27 ರನ್ ಗಳಿಸಿದರು. ಕೊನೆಯ ಓವರ್​ನಲ್ಲಿ ಧೋನಿ 2 ಸಿಕ್ಸ್ ಸಿಡಿಸಿದರು.

4 / 8
ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿತು. ಎಲ್​​ಎಸ್​ಜಿ ಪರ ಮಾರ್ಕ್ ವುಡ್ ಹಾಗೂ ರವಿ ಬಿಷ್ಟೋಯಿ ತಲಾ 3 ವಿಕೆಟ್ ಪಡೆದರು.

5 / 8
ಟಾರ್ಗೆಟ್ ಬೆನ್ನಟ್ಟಿದ ಲಖನೌ ಕೂಡ ಸ್ಫೋಟಕ ಆರಂಭ ಕಂಡಿತು. ಖೈಲ್ ಮೇಯರ್ಸ್ 22 ಎಸೆತಗಳಲ್ಲಿ 53 ರನ್ ಸಿಡಿಸಿದರು. ಮೊದಲ ವಿಕೆಟ್​ಗೆ ಕೆಎಲ್ ರಾಹುಲ್ (20) ಜೊತೆಗೂಡಿ 79 ರನ್​ಗಳು ಬಂದವು. ದೀಪಕ್ ಹೂಡ (2) ಹಾಗೂ ಕ್ರುನಾಲ್ ಪಾಂಡ್ಯ (9) ಬೇಗನೆ ನಿರ್ಗಮಿಸಿದರು.

6 / 8
ಮಾರ್ಕಸ್ ಸ್ಟೋಯಿನಿಸ್ 21 ಹಾಗೂ ನಿಕೋಲಸ್ ಪೂರನ್ 32 ರನ್​ಗಳ ಕೊಡುಗೆ ನೀಡಿ ಗೆಲುವಿನ ಆಸೆ ಚಿಗುರಿಸಿದರು. ಆಯುಶ್ ಬದೋನಿ ಕೂಡ 23 ರನ್ ಚಚ್ಚಿದರು. ಆದರೆ, ಗೆಲುವು ಸಾಧ್ಯವಾಗಲಿಲ್ಲ.

7 / 8
ಕೃಷ್ಣಪ್ಪ ಗೌತಮ್ 17 ರನ್ ಹಾಗೂ ಮಾರ್ಕ್ ವುಡ್ 10 ರನ್ ಗಳಿಸಿ ಅಜೇಯರಾಗಿ ಉಳಿದರು. ಲಖನೌ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 205 ರನ್ ಬಾರಿಸಲಷ್ಟೆ ಶಕ್ತವಾಯಿತು. ಸಿಎಸ್​ಕೆ ಪರ ಮೊಯಿನ್ ಅಲಿ 4 ವಿಕೆಟ್ ಕಿತ್ತು ಮಿಂಚಿದರು.

8 / 8
Follow us