ಬಾಲ್ಯದ ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ CSK ವೇಗಿ..!

| Updated By: ಝಾಹಿರ್ ಯೂಸುಫ್

Updated on: Jun 13, 2023 | 5:09 PM

Tushar Deshpande: ತುಷಾರ್ ದೇಶಪಾಂಡೆ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು.

1 / 6
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ತುಷಾರ್ ದೇಶಪಾಂಡೆ ತಮ್ಮ ಬಾಲ್ಯದ ಗೆಳತಿ ನಭಾ ಗಡ್ಡಂವಾರ್​ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

2 / 6
ಶಾಲಾ ದಿನಗಳಿಂದಲೂ ಜೊತೆಯಾಗಿದ್ದ ತುಷಾರ್‌ಗೆ ಮೊದಲೇ ನಭಾ ಮೇಲೆ ಕ್ರಶ್ ಇತ್ತು. ಇದೀಗ ಬಾಲ್ಯದ ಗೆಳತಿಯನ್ನೇ ತಮ್ಮ ಸಂಗಾತಿಯನ್ನಾಗಿಸಲು ನಿರ್ಧರಿಸಿದ್ದಾರೆ.

3 / 6
ಅದರಂತೆ ನಭಾ ಗಡ್ಡಂವಾರ್​ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ಶುಭ ಘಳಿಗೆಯ ಫೋಟೋಗಳನ್ನು ತುಷಾರ್ ದೇಶಪಾಂಡೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

4 / 6
ವಿಶೇಷ ಎಂದರೆ ನಿಶ್ಚಿತಾರ್ಥದ ಫೋಟೋದಲ್ಲೂ ಸಿಎಸ್​ಕೆ ವೇಗಿ ತನ್ನ ಸಂಗಾತಿ ಜೊತೆ ರೆಡ್ ಬಾಲ್ ಹಿಡಿದು ಪೋಸ್ ನೀಡಿದ್ದಾರೆ. ಇದೀಗ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

5 / 6
ಇನ್ನು ತುಷಾರ್ ದೇಶಪಾಂಡೆ ಅವರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಸಿಎಸ್​ಕೆ ತಂಡದ ಸಹ ಆಟಗಾರ ಶಿವಂ ದುಬೆ ಕೂಡ ಕಾಣಿಸಿಕೊಂಡಿದ್ದರು.

6 / 6
ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪರ ಒಟ್ಟು 23 ಪಂದ್ಯಗಳನ್ನಾಡಿರುವ ತುಷಾರ್ ದೇಶಪಾಂಡೆ 25 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಅಲ್ಲದೆ ಈ ಬಾರಿಯ ಐಪಿಎಲ್​ ಚಾಂಪಿಯನ್​ ಸಿಎಸ್​ಕೆ ತಂಡದ ಪ್ರಮುಖ ವೇಗಿಯಾಗಿ ಕಾಣಿಸಿಕೊಂಡಿದ್ದರು.