T20 World Cup 2022: ಟಿ20 ವಿಶ್ವಕಪ್‌ನಿಂದ ಮತ್ತೊಬ್ಬ ಸ್ಟಾರ್ ಕ್ರಿಕೆಟರ್ ಔಟ್..!
TV9 Web | Updated By: ಪೃಥ್ವಿಶಂಕರ
Updated on:
Oct 07, 2022 | 5:29 PM
T20 World Cup 2022: ವರದಿಗಳ ಪ್ರಕಾರ, ಡ್ಯಾರಿಲ್ ಮಿಚೆಲ್ ಚೇತರಿಸಿಕೊಳ್ಳಲು 2 ವಾರಗಳಿಗಿಂತ ಹೆಚ್ಚು ಸಮಯ ಬೇಕಾಗಿದ್ದು, ತಂಡದ ಫಿಸಿಯೋ ಥಿಯೋ ಕಪಾಕೌಲಾಕಿಸ್ ಕೂಡ ಇದೇ ಮಾತನ್ನು ಹೇಳಿದ್ದಾರೆ.
1 / 5
ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡ ಜಸ್ಪ್ರೀತ್ ಬುಮ್ರಾ ಅಲಭ್ಯತೆಯ ಆತಂಕವನ್ನು ಎದುರಿಸುತ್ತಿದ್ದರೆ, ಮತ್ತೊಂದೆಡೆ ನ್ಯೂಜಿಲೆಂಡ್ ಕೂಡ ಟೂರ್ನಿಗೂ ಮುನ್ನ ದೊಡ್ಡ ಹಿನ್ನಡೆ ಅನುಭವಿಸಿದೆ. ನ್ಯೂಜಿಲೆಂಡ್ ಆಲ್ ರೌಂಡರ್ ಡ್ಯಾರಿಲ್ ಮಿಚೆಲ್ ಗಾಯಗೊಂಡಿದ್ದು, ಟಿ20 ವಿಶ್ವಕಪ್‌ನಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ.
2 / 5
ಶುಕ್ರವಾರ ಅಭ್ಯಾಸದ ವೇಳೆ ಡ್ಯಾರಿಲ್ ಮಿಚೆಲ್ ಗಾಯಗೊಂಡಿದ್ದು, ಅವರ ಬೆರಳಿನಲ್ಲಿ ಮುರಿತ ಕಂಡುಬಂದಿದೆ. ಹೀಗಾಗಿ ಮಿಚೆಲ್ ಅವರು 2022 ರ ಟಿ 20 ವಿಶ್ವಕಪ್‌ನಲ್ಲಿ ಆಡಲು ಸಾಧ್ಯವಿಲ್ಲ ಎಂದು ಎಕ್ಸ್-ರೇ ವರದಿ ಬಹಿರಂಗಪಡಿಸಿದೆ.
3 / 5
ವರದಿಗಳ ಪ್ರಕಾರ, ಡ್ಯಾರಿಲ್ ಮಿಚೆಲ್ ಚೇತರಿಸಿಕೊಳ್ಳಲು 2 ವಾರಗಳಿಗಿಂತ ಹೆಚ್ಚು ಸಮಯ ಬೇಕಾಗಿದ್ದು, ತಂಡದ ಫಿಸಿಯೋ ಥಿಯೋ ಕಪಾಕೌಲಾಕಿಸ್ ಕೂಡ ಇದೇ ಮಾತನ್ನು ಹೇಳಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಮಿಚೆಲ್ ಪಾಕಿಸ್ತಾನ-ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ತ್ರಿಕೋನ ಸರಣಿಯಿಂದ ಹೊರಗುಳಿದಿದ್ದಾರೆ.
4 / 5
ನ್ಯೂಜಿಲೆಂಡ್- ಡ್ಯಾರಿಲ್ ಮಿಚೆಲ್, ಲಾಕಿ ಫರ್ಗ್ಯುಸನ್
5 / 5
ಕಳೆದ ಒಂದು ವರ್ಷದಿಂದ ಡ್ಯಾರಿಲ್ ಮಿಚೆಲ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಈ ಆಟಗಾರ ಟೆಸ್ಟ್ ಮತ್ತು ಟಿ20 ಕ್ರಿಕೆಟ್ ಎರಡರಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. T20 ಕ್ರಿಕೆಟ್ ಕುರಿತು ಮಾತನಾಡುವುದಾದರೆ, ಈ ವರ್ಷ ಮಿಚೆಲ್ 10 ಇನ್ನಿಂಗ್ಸ್‌ಗಳಲ್ಲಿ 33 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 265 ರನ್ ಗಳಿಸಿದ್ದಾರೆ.
Published On - 5:27 pm, Fri, 7 October 22