ಟಿ20 ವಿಶ್ವಕಪ್‌ಗೆ ಶ್ರೇಯಸ್ ಅಯ್ಯರ್ ತಂಡದಲ್ಲಿ ಆಯ್ಕೆಯಾಗದೇ ಇರಬಹುದು, ಆದರೆ ಏಕದಿನ ಕ್ರಿಕೆಟ್‌ನಲ್ಲಿ ಅವರು ಬ್ಯಾಟಿಂಗ್ ಅದ್ಭುತವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಅರ್ಧಶತಕಕ್ಕೂ ಮುನ್ನ ಅವರು ವೆಸ್ಟ್ ಇಂಡೀಸ್ ವಿರುದ್ಧ ಕ್ರಮವಾಗಿ 80, 54, 63 ಮತ್ತು 44 ರನ್ ಗಳಿಸಿದ್ದರು. ಅವರು ಕಳೆದ ಐದು ಏಕದಿನ ಇನ್ನಿಂಗ್ಸ್‌ಗಳಲ್ಲಿ ಒಟ್ಟು 291 ರನ್ ಗಳಿಸಿದ್ದಾರೆ.