ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡ ಜಸ್ಪ್ರೀತ್ ಬುಮ್ರಾ ಅಲಭ್ಯತೆಯ ಆತಂಕವನ್ನು ಎದುರಿಸುತ್ತಿದ್ದರೆ, ಮತ್ತೊಂದೆಡೆ ನ್ಯೂಜಿಲೆಂಡ್ ಕೂಡ ಟೂರ್ನಿಗೂ ಮುನ್ನ ದೊಡ್ಡ ಹಿನ್ನಡೆ ಅನುಭವಿಸಿದೆ. ನ್ಯೂಜಿಲೆಂಡ್ ಆಲ್ ರೌಂಡರ್ ಡ್ಯಾರಿಲ್ ಮಿಚೆಲ್ ಗಾಯಗೊಂಡಿದ್ದು, ಟಿ20 ವಿಶ್ವಕಪ್‌ನಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ.
ಶುಕ್ರವಾರ ಅಭ್ಯಾಸದ ವೇಳೆ ಡ್ಯಾರಿಲ್ ಮಿಚೆಲ್ ಗಾಯಗೊಂಡಿದ್ದು, ಅವರ ಬೆರಳಿನಲ್ಲಿ ಮುರಿತ ಕಂಡುಬಂದಿದೆ. ಹೀಗಾಗಿ ಮಿಚೆಲ್ ಅವರು 2022 ರ ಟಿ 20 ವಿಶ್ವಕಪ್‌ನಲ್ಲಿ ಆಡಲು ಸಾಧ್ಯವಿಲ್ಲ ಎಂದು ಎಕ್ಸ್-ರೇ ವರದಿ ಬಹಿರಂಗಪಡಿಸಿದೆ.
ವರದಿಗಳ ಪ್ರಕಾರ, ಡ್ಯಾರಿಲ್ ಮಿಚೆಲ್ ಚೇತರಿಸಿಕೊಳ್ಳಲು 2 ವಾರಗಳಿಗಿಂತ ಹೆಚ್ಚು ಸಮಯ ಬೇಕಾಗಿದ್ದು, ತಂಡದ ಫಿಸಿಯೋ ಥಿಯೋ ಕಪಾಕೌಲಾಕಿಸ್ ಕೂಡ ಇದೇ ಮಾತನ್ನು ಹೇಳಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಮಿಚೆಲ್ ಪಾಕಿಸ್ತಾನ-ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ತ್ರಿಕೋನ ಸರಣಿಯಿಂದ ಹೊರಗುಳಿದಿದ್ದಾರೆ.
ನ್ಯೂಜಿಲೆಂಡ್- ಡ್ಯಾರಿಲ್ ಮಿಚೆಲ್, ಲಾಕಿ ಫರ್ಗ್ಯುಸನ್
ಕಳೆದ ಒಂದು ವರ್ಷದಿಂದ ಡ್ಯಾರಿಲ್ ಮಿಚೆಲ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಈ ಆಟಗಾರ ಟೆಸ್ಟ್ ಮತ್ತು ಟಿ20 ಕ್ರಿಕೆಟ್ ಎರಡರಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. T20 ಕ್ರಿಕೆಟ್ ಕುರಿತು ಮಾತನಾಡುವುದಾದರೆ, ಈ ವರ್ಷ ಮಿಚೆಲ್ 10 ಇನ್ನಿಂಗ್ಸ್‌ಗಳಲ್ಲಿ 33 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 265 ರನ್ ಗಳಿಸಿದ್ದಾರೆ.
Published On - 5:27 pm, Fri, 7 October 22