Updated on:Oct 06, 2022 | 5:40 PM
ಮಹಿಳಾ ಏಷ್ಯಾಕಪ್ನ 11 ನೇ ಪಂದ್ಯದಲ್ಲಿ ಬಾಂಗ್ಲಾದೇಶ ಮಹಿಳಾ ಪಡೆ, ಮಲೇಷ್ಯಾ ವಿರುದ್ಧ 88 ರನ್‌ಗಳ ಬೃಹತ್ ಜಯ ದಾಖಲಿಸಿದೆ. ಸಿಲ್ಹೆಟ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ 129 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಮಲೇಷ್ಯಾ ತಂಡವು ಕೇವಲ 41 ರನ್‌ಗಳಿಗೆ ಆಲೌಟಾಯಿತು.
ಬಾಂಗ್ಲಾದೇಶ ಪರ ಎಡಗೈ ಬೌಲರ್ ಫರಿಹಾ ತೃಷ್ನಾ ಅದ್ಭುತ ಬೌಲಿಂಗ್ ಮಾಡುವ ಮೂಲಕ ಹ್ಯಾಟ್ರಿಕ್ ವಿಕೆಟ್ ಪಡೆದರು. ಇದು ಫರಿಹಾ ಅವರ ಚೊಚ್ಚಲ ಪಂದ್ಯವಾಗಿದ್ದು, ಅವರು ತಮ್ಮ ಮೊದಲ ಪಂದ್ಯದಲ್ಲಿಯೇ ಹ್ಯಾಟ್ರಿಕ್ ಪಡೆದು ದಾಖಲೆ ಬರೆದಿದ್ದಾರೆ.
ಫರಿಹಾ ಅವರ ಮಾರಕ ಬೌಲಿಂಗ್‌ನಿಂದ ಬಾಂಗ್ಲಾದೇಶ ಮಲೇಷ್ಯಾವನ್ನು ಶರಣಾಗುವಂತೆ ಮಾಡಿತು. ಮಲೇಷ್ಯಾದ ಒಬ್ಬ ಬ್ಯಾಟರ್ಗೂ ಡಬಲ್ ಫಿಗರ್ ಅನ್ನು ಮುಟ್ಟಲು ಸಾಧ್ಯವಾಗಲಿಲ್ಲ. ಜೊತೆಗೆ ಐದು ಆಟಗಾರರಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.
ಆದರೆ, ಬಾಂಗ್ಲಾದೇಶದ ಗೆಲುವಿನಲ್ಲಿ ನಾಯಕಿ ನಿಗರ್ ಸುಲ್ತಾನ ಪ್ರಮುಖ ಪಾತ್ರವಹಿಸಿದರು. ವೇಗವಾಗಿ ಬ್ಯಾಟಿಂಗ್ ಮಾಡಿದ ನಿಗರ್ 34 ಎಸೆತಗಳಲ್ಲಿ 53 ರನ್ ಗಳಿಸಿದರು. ಅವರನ್ನು ಹೊರತುಪಡಿಸಿ ಮುರ್ಷಿದಾ ಖಾತೂನ್ 56 ರನ್‌ಗಳ ಇನಿಂಗ್ಸ್ ಆಡಿದರು.
ಈ ಗೆಲುವಿನೊಂದಿಗೆ ಬಾಂಗ್ಲಾದೇಶ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಬಾಂಗ್ಲಾದೇಶ 3 ಪಂದ್ಯಗಳಲ್ಲಿ 2 ಗೆಲುವು ಸಾಧಿಸಿದೆ. ಪಾಕಿಸ್ತಾನ ಕೂಡ 3 ಪಂದ್ಯಗಳಲ್ಲಿ 2 ಪಂದ್ಯ ಗೆದ್ದಿದ್ದು, ಎರಡನೇ ಸ್ಥಾನದಲ್ಲಿದೆ. ಅದೇ ಹೊತ್ತಿಗೆ ಭಾರತ ತಂಡ ಮೂರೂ ಪಂದ್ಯಗಳನ್ನು ಗೆದ್ದು ಅಗ್ರಸ್ಥಾನದಲ್ಲಿದೆ.
Published On - 5:40 pm, Thu, 6 October 22