ಶಕೀಬ್ ನಂತರ ಬಾಂಗ್ಲಾದೇಶದ ಮತ್ತೋರ್ವ ಕ್ರಿಕೆಟಿಗ ಲಿಟ್ಟನ್ ದಾಸ್ ಅವರಿಗೂ ಇಂತಹ ಬೆದರಿಕೆಗಳು ಬಂದಿದ್ದವು. 2020 ರಲ್ಲಿ, ಲಿಟನ್ ದಾಸ್ ಫೇಸ್‌ಬುಕ್‌ನಲ್ಲಿ ದುರ್ಗಾ ಪೂಜೆಗೆ ಶುಭಕೋರಿದ್ದರು. ಈ ವೇಳೆ ಅನೇಕರು ಆಕ್ರೋಶ ವ್ಯಕ್ತಪಡಿಸಿ ಬೆದರಿಕೆ ಹಾಕಿದ್ದರು. ಅಷ್ಟೇ ಅಲ್ಲದೆ ಇತ್ತೀಚೆಗೆ ನವರಾತ್ರಿಯ ಸಂದರ್ಭದಲ್ಲಿ ಶುಭಾಶಯ ತಿಳಿಸಿ ಹಾಕಿದ ಪೋಸ್ಟ್ಗೂ ಮೂಲಭೂತವಾದಿಗಳು ಆಕ್ರೋಶ ವ್ಯಕ್ತಪಡಿಸಿ, ಬಾಂಗ್ಲಾ ಕ್ರಿಕೆಟಿಗನಿಗೆ ಕೊಲೆ ಬೆದರಿಕೆಯೊಡ್ಡಿದ್ದರು.