AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುರ್ಗಾ ಪೂಜೆ-ದಸರಾ ವೇಳೆ ಮೂವರು ಕ್ರಿಕೆಟಿಗರಿಗೆ ಕೊಲೆ ಬೆದರಿಕೆ..!

Mohammed Shami: ಆದರೆ ಈ ಒಳಿತಿನ ಸಂದೇಶದ ನಡುವೆ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಮೊಹಮ್ಮದ್ ಶಮಿಗೆ ಕೆಡಕನ್ನು ಬಯಸಿ ಬೆದರಿಕೆ ಒಡ್ಡಿದ ಘಟನೆ ಕೂಡ ನಡೆದಿದೆ.

TV9 Web
| Edited By: |

Updated on: Oct 06, 2022 | 3:55 PM

Share
ಬುಧವಾರ ದೇಶಾದ್ಯಂತ ಸಂಭ್ರಮದಿಂದ ದಸರಾ ಹಬ್ಬವನ್ನು ಆಚರಿಸಲಾಗಿದೆ. ದೇಶದ ಹಲವು ಭಾಗಗಳಲ್ಲಿ ರಾವಣ ದಹನ ಮಾಡಿ ಕೆಡುಕಿನ ಮೇಲೆ ಗೆಲುವಿನ ಸಂದೇಶ ಸಾರಲಾಗಿತ್ತು. ಆದರೆ ಈ ಒಳಿತಿನ ಸಂದೇಶದ ನಡುವೆ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಮೊಹಮ್ಮದ್ ಶಮಿಗೆ ಕೆಡಕನ್ನು ಬಯಸಿ ಬೆದರಿಕೆ ಒಡ್ಡಿದ ಘಟನೆ ಕೂಡ ನಡೆದಿದೆ.

1 / 6
ಬುಧವಾರ ಭಾರತ ತಂಡದ ವೇಗಿ ಮೊಹಮ್ಮದ್ ಶಮಿ ಸೋಷಿಯಲ್ ಮೀಡಿಯಾ ಮೂಲಕ ದಸರಾ ಹಬ್ಬದ ಶುಭಾಶಯ ಕೋರಿದ್ದರು. ಈ ಶುಭಕಾಮನೆಯ ಸಂದೇಶವು ಇದೀಗ ಮೂಲಭೂತವಾದಿಗಳ ಕಣ್ಣು ಕೆಂಪಾಗಿಸಿದೆ. ಕೆಲವರು ಶಮಿಯ ಧರ್ಮ ನಿಂದನೆ ಮಾಡಿದರೆ, ಮತ್ತೆ ಕೆಲವರು ಟೀಮ್ ಆಟಗಾರನ ವಿರುದ್ದ ಫತ್ವಾ ಹೊರಡಿಸುವುದಾಗಿ ಬೆದರಿಕೆ ಹಾಕಿದ್ದಾರೆ.

2 / 6
ಭಗವಾನ್ ರಾಮನು ನಿಮ್ಮ ಜೀವನದಲ್ಲಿ ಬಹಳಷ್ಟು ಸಂತೋಷ, ಸಮೃದ್ಧಿ ಮತ್ತು ಯಶಸ್ಸನ್ನು ತುಂಬಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ದಸರಾ ಹಬ್ಬದ ಶುಭಾಶಯಗಳು ಎಂದು ಶಮಿ ಹಾಕಿರುವ ಟ್ವೀಟ್ ಪೋಸ್ಟರ್​ಗೆ ಹಲವರು ಬೆದರಿಕೆ ಹಾಕಿದ್ದಾರೆ. ಈ ಎಲ್ಲಾ ಆಕ್ರೋಶಗಳ ನಡುವೆಯೂ ಟೀಮ್ ಇಂಡಿಯಾ ಆಟಗಾರ ತನ್ನ ಟ್ವೀಟ್ ಅನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.

3 / 6
ದಸರಾ ಮತ್ತು ದುರ್ಗಾ ಪೂಜೆಯ ಸಂದರ್ಭದಲ್ಲಿ ಕ್ರಿಕೆಟಿಗರಿಗೆ ಬೆದರಿಕೆಯೊಡ್ಡಿದ ಪ್ರಕರಣ ಇದೇ ಮೊದಲೇನಲ್ಲ.  ಈ ಹಿಂದೆ ಇಬ್ಬರು ಬಾಂಗ್ಲಾದೇಶ ಕ್ರಿಕೆಟಿಗರಿಗೂ ಇಂತಹ ಬೆದರಿಕೆಗಳು ಬಂದಿದ್ದವು ಎಂಬುದು ಗಮನಾರ್ಹ.

4 / 6
2020ರಲ್ಲಿ ಬಾಂಗ್ಲಾದೇಶದ ಸ್ಟಾರ್ ಕ್ರಿಕೆಟಿಗ ಶಕೀಬ್ ಅಲ್ ಹಸನ್‌ಗೆ ಉಗ್ರ ಮೂಲಭೂತವಾದಿಗಳು ಬೆದರಿಕೆಯೊಡ್ಡಿದ್ದರು. ಬಾಂಗ್ಲಾ ಕ್ರಿಕೆಟಿಗ ಕೋಲ್ಕತ್ತಾದಲ್ಲಿ ಕಾಳಿ ಪೂಜೆಯಲ್ಲಿ ಭಾಗವಹಿಸಿದ್ದಕ್ಕೆ, ವ್ಯಕ್ತಿಯೊಬ್ಬರು ವಿಡಿಯೋ ಕರೆ ಮಾಡಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಈ ಬೆದರಿಕೆಯ ನಂತರ, ಶಕೀಬ್ ಅಲ್ ಸಹನ್ ಕ್ಷಮೆಯಾಚಿಸಿದ್ದರು.

5 / 6
ಶಕೀಬ್ ನಂತರ ಬಾಂಗ್ಲಾದೇಶದ ಮತ್ತೋರ್ವ ಕ್ರಿಕೆಟಿಗ ಲಿಟ್ಟನ್ ದಾಸ್ ಅವರಿಗೂ ಇಂತಹ ಬೆದರಿಕೆಗಳು ಬಂದಿದ್ದವು.  2020 ರಲ್ಲಿ, ಲಿಟನ್ ದಾಸ್ ಫೇಸ್‌ಬುಕ್‌ನಲ್ಲಿ ದುರ್ಗಾ ಪೂಜೆಗೆ ಶುಭಕೋರಿದ್ದರು. ಈ ವೇಳೆ ಅನೇಕರು ಆಕ್ರೋಶ ವ್ಯಕ್ತಪಡಿಸಿ ಬೆದರಿಕೆ ಹಾಕಿದ್ದರು. ಅಷ್ಟೇ ಅಲ್ಲದೆ ಇತ್ತೀಚೆಗೆ ನವರಾತ್ರಿಯ ಸಂದರ್ಭದಲ್ಲಿ ಶುಭಾಶಯ ತಿಳಿಸಿ ಹಾಕಿದ ಪೋಸ್ಟ್​ಗೂ ಮೂಲಭೂತವಾದಿಗಳು ಆಕ್ರೋಶ ವ್ಯಕ್ತಪಡಿಸಿ, ಬಾಂಗ್ಲಾ ಕ್ರಿಕೆಟಿಗನಿಗೆ ಕೊಲೆ ಬೆದರಿಕೆಯೊಡ್ಡಿದ್ದರು.

6 / 6
Web contact
Web contact

TV9 Kannada

Read More
Follow Us
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ

ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ

ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್

ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ

ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ

ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್

ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ

40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?

ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬಸವರಾಜ ಬೊಮ್ಮಾಯಿ

ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ