IND vs NZ: ಟೀಂ ಇಂಡಿಯಾ ವಿರುದ್ಧ ಸತತ 2ನೇ ಶತಕ ಬಾರಿಸಿದ ಡ್ಯಾರಿಲ್ ಮಿಚೆಲ್

Updated on: Jan 18, 2026 | 4:40 PM

Daryl Mitchell century: ಭಾರತ vs ನ್ಯೂಜಿಲೆಂಡ್ ಏಕದಿನ ಸರಣಿಯಲ್ಲಿ ಡ್ಯಾರಿಲ್ ಮಿಚೆಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಸತತ ಎರಡನೇ ಶತಕ ಸಿಡಿಸಿ ಮಿಂಚಿರುವ ಮಿಚೆಲ್, ಭಾರತದ ವಿರುದ್ಧ 50+ ಸ್ಕೋರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಕಿವೀಸ್ ಪರ ಭಾರತದ ವಿರುದ್ಧ ಅತಿ ಹೆಚ್ಚು 50+ ರನ್ ಗಳಿಸಿದವರಲ್ಲಿ ಅವರು ಕೇನ್ ವಿಲಿಯಮ್ಸನ್ ನಂತರ ಎರಡನೇ ಸ್ಥಾನದಲ್ಲಿದ್ದಾರೆ. ಅವರ ಈ ಪ್ರದರ್ಶನ ಭಾರತೀಯ ಬೌಲರ್‌ಗಳಿಗೆ ಸವಾಲಾಗಿದೆ.

1 / 6
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯ ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ದುಕೊಂಡಿದ್ದು, ನ್ಯೂಜಿಲೆಂಡ್‌ ಮೊದಲು ಬ್ಯಾಟಿಂಗ್‌ ಮಾಡುತ್ತಿದೆ. ಇಡೀ ಸರಣಿಯಲ್ಲಿ ಭಾರತಕ್ಕೆ ಕಂಟಕವಾಗಿರುವ ಸ್ಟಾರ್ ಬ್ಯಾಟ್ಸ್‌ಮನ್ ಡ್ಯಾರಿಲ್ ಮಿಚೆಲ್ ಈ ಪಂದ್ಯದಲ್ಲಿಯೂ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ.

2 / 6
ಭಾರತದ ವಿರುದ್ಧ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರೆಸಿರುವ ಮಿಚೆಲ್ ಸತತ ಎರಡನೇ ಶತಕ ಸಿಡಿಸಿ ಮಿಂಚಿದ್ದಾರೆ. ವಾಸ್ತವವಾಗಿ  ಈ ಪಂದ್ಯದಲ್ಲಿ ನ್ಯೂಜಿಲೆಂಡ್‌ ಕಳಪೆಯಾಗಿ ಆರಂಭ ಪಡೆಯಿತು. ಕೇವಲ 58 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಆದಾಗ್ಯೂ, ಡ್ಯಾರಿಲ್ ಮಿಚೆಲ್ ಮತ್ತೊಮ್ಮೆ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿ 56 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರೊಂದಿಗೆ ವಿಶೇಷ ಪಟ್ಟಿಯಲ್ಲಿಯೂ ಸ್ಥಾನ ಪಡೆದರು.

3 / 6
ಮೇಲೆ ಹೇಳಿದಂತೆ ಈ ಸರಣಿಯಲ್ಲಿ ಡ್ಯಾರಿಲ್ ಮಿಚೆಲ್ ಉತ್ತಮ ಫಾರ್ಮ್‌ನಲ್ಲಿದ್ದು, ಸರಣಿಯ ಮೊದಲ ಪಂದ್ಯದಲ್ಲಿ ಅವರು 84 ರನ್ ಬಾರಿಸಿದ್ದರು. ಎರಡನೇ ಪಂದ್ಯದಲ್ಲಿ ಅಜೇಯ 131 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಈಗ, ಡ್ಯಾರಿಲ್ ಮಿಚೆಲ್ ಮತ್ತೊಮ್ಮೆ 100 ರನ್‌ಗಳ ಗಡಿ ದಾಟಿದ್ದಾರೆ.

4 / 6
ಇದು ಭಾರತದ ವಿರುದ್ಧ ಏಕದಿನ ಪಂದ್ಯಗಳಲ್ಲಿ ಅವರ ಸತತ ನಾಲ್ಕನೇ 50 ಪ್ಲಸ್ ಸ್ಕೋರ್ ಆಗಿದೆ. ಇದರೊಂದಿಗೆ, ಅವರು ಏಕದಿನ ಪಂದ್ಯಗಳಲ್ಲಿ ಭಾರತದ ವಿರುದ್ಧ ಸತತ ಅತಿ ಹೆಚ್ಚು 50 ಪ್ಲಸ್ ಸ್ಕೋರ್ ಗಳಿಸಿದ ಎರಡನೇ ಕಿವೀಸ್ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

5 / 6
2014 ರಲ್ಲಿ ಸತತ ಐದು 50+ ಸ್ಕೋರ್‌ಗಳನ್ನು ಗಳಿಸುವ ಮೂಲಕ ಕೇನ್ ವಿಲಿಯಮ್ಸನ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಡ್ಯಾರಿಲ್ ಮಿಚೆಲ್ ಈಗ ಸತತ ನಾಲ್ಕು ಇನ್ನಿಂಗ್ಸ್‌ಗಳೊಂದಿಗೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ತಲುಪಿದ್ದಾರೆ. ಈ ಇಬ್ಬರು ಆಟಗಾರರನ್ನು ಹೊರತುಪಡಿಸಿ, ಭಾರತದ ವಿರುದ್ಧ ಯಾವುದೇ ಕಿವೀಸ್ ಬ್ಯಾಟ್ಸ್‌ಮನ್ ಮೂರು ಬಾರಿಗಿಂತ ಹೆಚ್ಚು ಈ ಸಾಧನೆ ಮಾಡಿಲ್ಲ.

6 / 6
ಡ್ಯಾರಿಲ್ ಮಿಚೆಲ್ ತಮ್ಮ ಕೊನೆಯ ಏಳು ಏಕದಿನ ಪಂದ್ಯಗಳಲ್ಲಿ ಆರು ಬಾರಿ 50+ ರನ್ ಗಳಿಸಿದ್ದಾರೆ. ಇನ್ನು ಭಾರತದ ವಿರುದ್ಧದ ಕೊನೆಯ ಏಳು ಏಕದಿನ ಪಂದ್ಯಗಳಲ್ಲಿ ಮೂರು ಶತಕಗಳು ಮತ್ತು ಮೂರು ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಅಂಕಿಅಂಶವು ಮಿಚೆಲ್ ಭಾರತೀಯ ಬೌಲರ್‌ಗಳಿಗೆ ಎಷ್ಟು ಅಪಾಯಕಾರಿ ಎಂದು ಸಾಬೀತುಪಡಿಸುತ್ತದೆ.