Updated on: Jul 31, 2023 | 10:09 PM
Ashes 2023: ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ ಕಡೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಆರಂಭಿಕರು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ದ್ವಿತೀಯ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ನೀಡಿದ 384 ರನ್ಗಳ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ ಹಾಗೂ ಉಸ್ಮಾನ್ ಖ್ವಾಜಾ ಶತಕದ ಜೊತೆಯಾಟವಾಡಿದರು.
38 ಓವರ್ಗಳ ಮುಕ್ತಾಯದ ವೇಳೆಗೆ ಮೊದಲ ವಿಕೆಟ್ಗೆ 135 ರನ್ಗಳನ್ನು ಕಲೆಹಾಕಿದ ವಾರ್ನರ್-ಖ್ವಾಜಾ ಜೋಡಿ ಆಸ್ಟ್ರೇಲಿಯಾ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದ್ದಾರೆ. ಈ ಶತಕದ ಜೊತೆಯಾಟದೊಂದಿಗೆ ಡೇವಿಡ್ ವಾರ್ನರ್ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆಯನ್ನೂ ಕೂಡ ನಿರ್ಮಿಸಿದ್ದಾರೆ.
ಉಸ್ಮಾನ್ ಖ್ವಾಜಾ ಜೊತೆಗೂಡಿ 100 ರನ್ ಕಲೆಹಾಕುವುದರೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಬಾರಿ ಶತಕದ ಜೊತೆಯಾಟವಾಡಿದ ಆರಂಭಿಕ ಆಟಗಾರ ಎಂಬ ವಿಶ್ವ ದಾಖಲೆ ಡೇವಿಡ್ ವಾರ್ನರ್ ಪಾಲಾಗಿದೆ.
ಇದಕ್ಕೂ ಮುನ್ನ ಈ ದಾಖಲೆ ಜಾಕ್ ಹೊಬ್ಸ್ (ಇಂಗ್ಲೆಂಡ್), ಗ್ರೇಮ್ ಸ್ಮಿತ್ (ಸೌತ್ ಆಫ್ರಿಕಾ), ಅಲಿಸ್ಟರ್ ಕುಕ್ (ಇಂಗ್ಲೆಂಡ್) ಹೆಸರಿನಲ್ಲಿತ್ತು. ಈ ಮೂವರು ಆರಂಭಿಕ ಆಟಗಾರರು ಟೆಸ್ಟ್ ಕ್ರಿಕೆಟ್ನಲ್ಲಿ ತಲಾ 24 ಬಾರಿ ಶತಕದ ಜೊತೆಯಾಟವಾಡಿ ದಾಖಲೆ ನಿರ್ಮಿಸಿದ್ದರು.
ಇದೀಗ 25ನೇ ಬಾರಿ ಶತಕದ ಜೊತೆಯಾಟವಾಡುವ ಮೂಲಕ ಡೇವಿಡ್ ವಾರ್ನರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಬಾರಿ ಸೆಂಚುರಿಯ ಪಾಲುದಾರಿಕೆ ನೀಡಿದ ಆರಂಭಿಕ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಡೇವಿಡ್ ವಾರ್ನರ್ ತಮ್ಮದಾಗಿಸಿಕೊಂಡಿದ್ದಾರೆ.
Published On - 9:23 pm, Sun, 30 July 23