
ಕ್ರಿಕೆಟ್ ಅಂಗಳದ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಅವರ ಹೆಸರಿನಲ್ಲಿದ್ದ ವಿಶೇಷ ವಿಶ್ವ ದಾಖಲೆಯೊಂದನ್ನು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಸರಿಗಟ್ಟಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ 2ನೇ ಪಂದ್ಯದಲ್ಲಿ ಡೇವಿಡ್ ವಾರ್ನರ್ ಅರ್ಧಶತಕ ಬಾರಿಸಿ ಮಿಂಚಿದ್ದರು. ಈ ಅರ್ಧಶತಕದೊಂದಿಗೆ ಟಿ20 ಕ್ರಿಕೆಟ್ನಲ್ಲಿ 100 ಹಾಫ್ ಸೆಂಚುರಿ ಬಾರಿಸಿದ 2ನೇ ಬ್ಯಾಟ್ಸ್ಮನ್ ಎನಿಸಿಕೊಂಡರು.

ಇದಕ್ಕೂ ಮುನ್ನ ಇಂತಹದೊಂದು ವಿಶೇಷ ವಿಶ್ವ ದಾಖಲೆಯನ್ನು ಕ್ರಿಸ್ ಗೇಲ್ ನಿರ್ಮಿಸಿದ್ದರು. ಇದೀಗ ಈ ಸಾಧನೆ ಮಾಡಿದ 2ನೇ ಆಟಗಾರನಾಗಿ ಡೇವಿಡ್ ವಾರ್ನರ್ ಹೊರಹೊಮ್ಮಿದ್ದಾರೆ. ಈ ಮೂಲಕ ಗೇಲ್ ಅವರ ಈ ದಾಖಲೆಯನ್ನು ಸರಿಗಟ್ಟಿದ್ದಾರೆ.

ಇದಾಗ್ಯೂ ಟಿ20 ಕ್ರಿಕೆಟ್ನ ಅರ್ಧಶತಕಗಳ ದಾಖಲೆಯ ಪಟ್ಟಿಯಲ್ಲಿ ಈಗಲೂ ಗೇಲ್ ಮುಂಚೂಣಿಯಲ್ಲಿದ್ದಾರೆ. ಕ್ರಿಸ್ ಗೇಲ್ ಟಿ20 ಯಲ್ಲಿ 110 ಬಾರಿ ಅರ್ಧಶತಕ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಇದೀಗ 100 ಅರ್ಧಶತಕಗಳನ್ನು ಪೂರೈಸುವ ಮೂಲಕ ಡೇವಿಡ್ ವಾರ್ನರ್ ಈ ಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿದ್ದಾರೆ. ವಿಶೇಷ ಎಂದರೆ ಕ್ರಿಸ್ ಗೇಲ್ ಹಾಗೂ ಡೇವಿಡ್ ವಾರ್ನರ್ ಅವರನ್ನು ಹೊರತುಪಡಿಸಿ ಯಾವುದೇ ಬ್ಯಾಟ್ಸ್ಮನ್ ಟಿ20 ಯಲ್ಲಿ 100 ಅರ್ಧಶತಕಗಳನ್ನು ಬಾರಿಸಿಲ್ಲ.

ಇನ್ನು ಐಪಿಎಲ್ ಹಾಗೂ ಟೀಮ್ ಇಂಡಿಯಾ ಪರ ಆಡಿರುವ ವಿರಾಟ್ ಕೊಹ್ಲಿ 87 ಅರ್ಧಶತಕಗಳನ್ನು ಬಾರಿಸಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಅಲಂಕರಿಸಿದ್ದಾರೆ. ಹಾಗೆಯೇ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಅರ್ಧಶತಕ ಬಾರಿಸಿದ ಬ್ಯಾಟ್ಸ್ಮನ್ ಎಂಬ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ.