AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ ದಕ್ಷಿಣ ಆಫ್ರಿಕಾದ ಮಾಜಿ ನಾಯಕ

Dean Elgar retirement: ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಮತ್ತು ಅನುಭವಿ ಬ್ಯಾಟ್ಸ್‌ಮನ್ ಡೀನ್ ಎಲ್ಗರ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ದಶಕಕ್ಕೂ ಹೆಚ್ಚು ಕಾಲ ದೇಶವನ್ನು ಪ್ರತಿನಿಧಿಸಿದ್ದ ಎಲ್ಗರ್, 86 ಟೆಸ್ಟ್‌ಗಳಲ್ಲಿ 5,347 ರನ್ ಮತ್ತು 14 ಶತಕಗಳನ್ನು ಗಳಿಸಿದ್ದಾರೆ. 39ರ ಹರೆಯದ ಎಲ್ಗರ್, ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ನಿರ್ಧರಿಸಿದ್ದು, ಅವರ ನಾಯಕತ್ವದಲ್ಲಿ ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಗೆಲುವು ವೃತ್ತಿಜೀವನದ ಪ್ರಮುಖ ಹೆಗ್ಗುರುತಾಗಿದೆ.

ಪೃಥ್ವಿಶಂಕರ
|

Updated on:Aug 26, 2026 | 10:44 PM

Share
ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸಿದ್ದ ಮಾಜಿ ನಾಯಕ ಡೀನ್ ಎಲ್ಗರ್ ವೃತ್ತಿಪರ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. 2024 ರಲ್ಲಿ ಕೇಪ್ ಟೌನ್​ನಲ್ಲಿ ನಡೆದ ಟೀಂ ಇಂಡಿಯಾ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದ ಡೀನ್ ಎಲ್ಗರ್ ಆ ಬಳಿಕ ದೇಶೀಯ ಪ್ರಥಮ ದರ್ಜೆ ಕ್ರಿಕೆಟ್‌ ಆಡುವುದನ್ನು ಮುಂದುವರೆಸಿದ್ದರು.

1 / 5
ಇದೀಗ ಡೀನ್ ಎಲ್ಗರ್ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ. ದಕ್ಷಿಣ ಆಫ್ರಿಕಾದ ಅತ್ಯಂತ ವಿಶ್ವಾಸಾರ್ಹ ಆರಂಭಿಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದ ಡೀನ್ ಎಲ್ಗರ್ 12 ವರ್ಷಗಳ ಕಾಲ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಿದರು. ಈ ಅವಧಿಯಲ್ಲಿ 86 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಎಲ್ಗರ್ 2024 ರಲ್ಲಿ ಕೊನೆಯ ಬಾರಿಗೆ ದಕ್ಷಿಣ ಆಫ್ರಿಕಾ ತಂಡದ ನಾಯಕತ್ವ ವಹಿಸಿದ್ದರು.

2 / 5
ಡೀನ್ ಎಲ್ಗರ್ ದಕ್ಷಿಣ ಆಫ್ರಿಕಾ ಪರ ಆಡಿದ 86 ಟೆಸ್ಟ್ ಪಂದ್ಯಗಳಲ್ಲಿ 37.92 ಸರಾಸರಿಯಲ್ಲಿ 5,347 ರನ್ ಗಳಿಸಿದ್ದಾರೆ. ಇದರಲ್ಲಿ 14 ಶತಕಗಳು ಸೇರಿವೆ. ಬಾಂಗ್ಲಾದೇಶ ವಿರುದ್ಧ ತಮ್ಮ ವೃತ್ತಿಜೀವನದ ಅತ್ಯುನ್ನತ ಇನ್ನಿಂಗ್ಸ್ ಆಡಿದ್ದ ಎಲ್ಗರ್ ಆ ಪಂದ್ಯದ ಇನ್ನಿಂಗ್ಸ್​ವೊಂದರಲ್ಲಿ 199 ರನ್ ಬಾರಿಸಿದ್ದರು.

3 / 5
ನಿವೃತ್ತಿಯ ಬಗ್ಗೆ ಮಾಹಿತಿ ನೀಡಿರುವ ಎಲ್ಗರ್, ‘ ನಿವೃತ್ತಿ ಘೋಷಿಸಲು ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ನನಗೆ 39 ವರ್ಷ. ಈಗ ನಾನು ಮನೆಯಲ್ಲಿರಲು ಮತ್ತು ನನ್ನ ಸಂಗಾತಿ ಮತ್ತು ಮಕ್ಕಳೊಂದಿಗೆ ಇರಲು ಸರಿಯಾದ ಸಮಯ. ಇಲ್ಲಿಯವರೆಗೆ ನನ್ನದು ಅದ್ಭುತ ಪ್ರಯಾಣವಾಗಿತ್ತು. ನಾನು ದೇಶಿ ಆವೃತ್ತಿಯ ಕೊನೆಯಲ್ಲಿ ಆಟದಿಂದ ನಿವೃತ್ತಿ ಹೊಂದುತ್ತೇನೆ.

4 / 5
ಹನ್ನೆರಡು ವರ್ಷಗಳ ಕಾಲ ನನ್ನ ದೇಶವನ್ನು ಪ್ರತಿನಿಧಿಸುವ ಅದೃಷ್ಟ ನನ್ನದಾಗಿತ್ತು. ನಂತರ (ದಕ್ಷಿಣ ಆಫ್ರಿಕಾದ) ನಾಯಕತ್ವವನ್ನು ವಹಿಸಿಕೊಳ್ಳುವುದು ನನ್ನ ವೃತ್ತಿಜೀವನದ ಅತ್ಯಂತ ಹೆಮ್ಮೆಯ ಕ್ಷಣಗಳಲ್ಲಿ ಒಂದಾಗಿದೆ. ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ್ದು ನನ್ನ ನಾಯಕ ವೃತ್ತಿಜೀವನದ ಅತ್ಯುನ್ನತ ಸಾಧನೆಯಾಗಿದೆ. ನಾನು ಯಾವಾಗಲೂ ನನ್ನ ಪ್ರದರ್ಶನದ ಬಗ್ಗೆ ಹೆಮ್ಮೆಪಡುತ್ತೇನೆ ಎಂದಿದ್ದಾರೆ.

5 / 5

Published On - 10:43 pm, Wed, 26 August 26

Follow Us
ನೇಪಾಳ-ಟಿಬೆಟ್ ಗಡಿಯಲ್ಲಿ ಪ್ರವಾಹಕ್ಕೆ ಕೊಚ್ಚಿಹೋಯ್ತು ತ್ರಿಶೂಲಿ ನದಿ ಸೇತುವೆ

ಏಕಾಏಕಿ ಹೊತ್ತಿ ಉರಿದ ಕಾರು: ಕನ್ಯೆ ನೋಡಲು ಹೋಗಿದ್ದವ ಪ್ರಾಣಾಪಾಯದಿಂದ ಪಾರು

6 ಬಾರಿ ಅಂಬಾರಿ ಹೊತ್ತು ನಿವೃತ್ತಿಯಾದ ಅಭಿಮನ್ಯುಗೆ ಮತ್ತೊಂದು ಹೊಣೆಗಾರಿಕೆ?

ಸಿಎಂ ಡಿಕೆ ಶಿವಕುಮಾರ್ ದಿಢೀರ್ ಸುದ್ದಿಗೋಷ್ಠಿಯ ನೇರಪ್ರಸಾರ

‘ಟಾಕ್ಸಿಕ್’ ಅದ್ದೂರಿ ರಿಲೀಸ್; ತುಮಕೂರಿನಲ್ಲೂ ಯಶ್ ಫ್ಯಾನ್ಸ್ ಸಂಭ್ರಮ

125 ಜೋಡಿಗೆ ಉಚಿತ ಸಾಮೂಹಿಕ ವಿವಾಹ ಮಾಡಿಸಿದ ಶಾಸಕ

ನಾಳೆ ಸಿಎಂ ಡಿಕೆ ಶಿವಕುಮಾರ್ ದೆಹಲಿಗೆ: ಸಂಪುಟಕ್ಕೆ ಸಣ್ಣ ಸರ್ಜರಿ ಆಗುತ್ತಾ?

ಹೆಲ್ಮೆಟ್ ಧರಿಸದೆ ಬೈಕ್ ಓಡಿಸಿದ ಶಾಸಕ ಪ್ರಕಾಶ್ ಕೋಳಿವಾಡಗೆ ಪೊಲೀಸರಿಂದ ದಂಡ

ಉಡುಪಿ ಪೊಲೀಸರ ಮಿಂಚಿನ ಕಾರ್ಯಾಚರಣೆಯಲ್ಲಿ ಬಲೆಗೆ ಬಿದ್ದ ಕ್ರಿಮಿನಲ್!

ಈದ್ ಮಿಲಾದ್​ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್ ಧ್ವಜ ಪ್ರದರ್ಶನ