
16ನೇ ಆವೃತ್ತಿ ಐಪಿಎಲ್ ಆರಂಭವಾಗಲೂ ಇನ್ನೂ ಸುಮಾರು 6 ತಿಂಗಳುಗಳು ಉಳಿದಿವೆ. ಆದರೆ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ಖುಷಿಯ ಸಂತಸದ ಸುದ್ದಿಯೊಂದು ಸಿಕ್ಕಿದೆ. 5 ಬಾರಿಯ ಚಾಂಪಿಯನ್ ಮುಂಬೈ ತಂಡ ಇದುವರೆಗೆ ಕೆಲವು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳನ್ನು ಸೃಷ್ಟಿಸಿದೆ. ಅದರಲ್ಲಿ ಕಳೆದ ಸೀಸನ್ನಲ್ಲಿ ತಂಡಕ್ಕೆ ಎಂಟ್ರಿಕೊಟ್ಟ 19 ವರ್ಷದ ಡೆವಾಲ್ಡ್ ಬ್ರೆವಿಸ್ ಕೂಡ ಸೇರಿದ್ದಾರೆ. ಮೊದಲ ಸೀಸನ್ನಲ್ಲೇ ಕೆಲವು ಅದ್ಭುತ ಇನ್ನಿಂಗ್ಸ್ ಆಡಿದ್ದ, ಬೇಬಿ ಎಬಿ, ಈಗ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಮುಂಬೈ ಪಾಳಾಯದಲ್ಲಿ ಸಂತಸ ಹೆಚ್ಚಿಸಿದ್ದಾರೆ.

ಸಿಪಿಎಲ್‌ನಲ್ಲಿ ತಮ್ಮ ಬ್ಯಾಟಿಂಗ್ ವೈಭವ ತೋರಿಸಿದ ದಕ್ಷಿಣ ಆಫ್ರಿಕಾದ ಯುವ ಬ್ಯಾಟ್ಸ್‌ಮನ್ ಡೆವಾಲ್ಡ್ ಬ್ರೆವಿಸ್, ಟ್ರಿನ್‌ಬಾಗೊ ನೈಟ್ ರೈಡರ್ಸ್ ವಿರುದ್ಧ ಕೇವಲ 6 ಎಸೆತಗಳಲ್ಲಿ 30 ರನ್ ಸಿಡಿಸುವ ಮೂಲಕ ತಲ್ಲಣ ಮೂಡಿಸಿದರು.

ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ಪರ ಆಡುತ್ತಿರುವ ಬ್ರೆವಿಸ್ 19ನೇ ಓವರ್‌ನಲ್ಲಿ ವಿಂಡೀಸ್ ಸ್ಪಿನ್ನರ್ ಅಕಿಲ್ ಹೊಸೈನ್ ಅವರ ಕೊನೆಯ 3 ಎಸೆತಗಳಲ್ಲಿ ಸತತ ಆರು ಸಿಕ್ಸರ್‌ಗಳನ್ನು ಬಾರಿಸಿದರು.

ಇಲ್ಲಿಗೆ ನಿಲ್ಲಿಸಿದ ಬ್ರೆವಿಸ್, ನಂತರ ಕೊನೆಯ ಓವರ್‌ನ ಐದನೇ ಮತ್ತು ಆರನೇ ಎಸೆತಗಳಲ್ಲಿ ಸ್ಟ್ರೈಕ್‌ಗೆ ಬಂದು, ಈ ಎರಡು ಎಸೆತಗಳನ್ನು ಸಿಕ್ಸರ್‌ಗಳಿಗೆ ಕಳುಹಿಸಿದರು. ಈ ಮೂಲಕ ಬ್ರೆವಿಸ್ ಸತತ 5 ಎಸೆತಗಳಲ್ಲಿ ಸಿಕ್ಸರ್ ಬಾರಿಸುವ ಮೂಲಕ ಸಂಚಲನ ಮೂಡಿಸಿದರು.

ಬ್ರೆವಿಸ್ ಈ ವರ್ಷ ಅಂಡರ್-19 ವಿಶ್ವಕಪ್‌ನಲ್ಲಿ ತನ್ನ ಛಾಪು ಮೂಡಿಸಿದರು. ನಂತರ ಐಪಿಎಲ್ ಹರಾಜಿನಲ್ಲಿ ಮುಂಬೈ ತಂಡ ಅವರನ್ನು 3 ಕೋಟಿ ರೂ.ಗೆ ಖರೀದಿಸಿತ್ತು. ಮೊದಲ ಸೀಸನ್ ಕೆಲವು ಪಂದ್ಯಗಳಲ್ಲಿ ಅವಕಾಶಗಳನ್ನು ಪಡೆದ ಬ್ರೆವಿಸ್, ಆ ಪಂದ್ಯಗಳಲ್ಲಿಯೂ ದೊಡ್ಡ ಹೊಡೆತಗಳನ್ನು ಹೊಡೆಯುವ ಸಾಮರ್ಥ್ಯವನ್ನು ತೋರಿಸಿದರು.