ಮುಂಬರುವ ಐಪಿಎಲ್ ಸೀಸನ್ಗಾಗಿ ಪೂರ್ವ ತಯಾರಿಗಳು ಶುರುವಾಗಿವೆ. ಈಗಾಗಲೇ SRH, KKR, ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಕೋಚ್ಗಳನ್ನು ಬದಲಿಸಿ ಭರ್ಜರಿ ಸಿದ್ದತೆಗಳನ್ನು ಆರಂಭಿಸಿದೆ. ಇದೀಗ ಬಿಸಿಸಿಐ ಕೂಡ ಮುಂದಿನ ಸೀಸನ್ ಐಪಿಎಲ್ಗಾಗಿ ಪ್ಲ್ಯಾನ್ಗಳನ್ನು ರೂಪಿಸಿದೆ.
ಅದರಂತೆ ಮುಂಬರುವ ಐಪಿಎಲ್ ಹೋಮ್ ಅ್ಯಂಡ್ ಅವೇ ಮಾದರಿಯಲ್ಲಿ ನಡೆಯಲಿದೆ. ಅಂದರೆ ಆಯಾ ಫ್ರಾಂಚೈಸಿಗಳ ಹೋಮ್ ಗ್ರೌಂಡ್ನಲ್ಲೇ ಪಂದ್ಯಗಳು ನಡೆಯಲಿದೆ.
ಅಂದರೆ ಈ ಹಿಂದಿನಂತೆ ತಂಡಗಳು ತವರು ಮೈದಾನದಲ್ಲಿ ಹಾಗೂ ಎದುರಾಗಳಿ ತಂಡಗಳ ತವರು ಮೈದಾನದಲ್ಲಿ ಪಂದ್ಯಗಳನ್ನು ಆಡಲಿದೆ. ಅದರಂತೆ ಮುಂದಿನ ಸೀಸನ್ ಐಪಿಎಲ್ ಬೆಂಗಳೂರಿನಲ್ಲೂ ನಡೆಯಲಿದ್ದು, ಆರ್ಸಿಬಿ ಅಭಿಮಾನಿಗಳಿಗೆ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸುವ ಅವಕಾಶ ದೊರೆಯಲಿದೆ.
ಈ ಹಿಂದೆ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಆಯ್ದ ಸ್ಟೇಡಿಯಂಗಳಲ್ಲಿ ಮಾತ್ರ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಇದೀಗ ಹಳೆಯ ಮಾದರಿಯಲ್ಲಿ ಮುಂದಿನ ಸೀಸನ್ ಐಪಿಎಲ್ ಅನ್ನು ಆಯೋಜಿಸಲು ಯೋಜನೆ ರೂಪಿಸಿರುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಖಚಿತಪಡಿಸಿದ್ದಾರೆ.
ಐಪಿಎಲ್ 2023 ರಲ್ಲಿ ಆರ್ಸಿಬಿ ಬೆಂಗಳೂರಿನಲ್ಲಿ ಕನಿಷ್ಠ 2 ಪಂದ್ಯಗಳನ್ನು ಆಡುವುದು ಖಚಿತ. ಅದರಂತೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮತ್ತೆ ಆರ್ಸಿಬಿ ಕೂಗು ಕೇಳಿ ಬರಲಿದೆ.
Published On - 6:55 pm, Thu, 22 September 22