ಭಾರತದ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಬುಧವಾರ (ಡಿಸೆಂಬರ್ 6) 29ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 2023 ರ ವಿಶ್ವಕಪ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು T20I ಸರಣಿಯಿಂದ ವಿಶ್ರಾಂತಿ ಪಡೆದು ಬ್ರೇಕ್ನಲ್ಲಿದ್ದ ಅಯ್ಯರ್ ಇದೀಗ ದಕ್ಷಿಣ ಆಫ್ರಿಕಾ ಸರಣಿಗಾಗಿ ಹರಿಣಗಳ ನಾಡಿಗೆ ತಲುಪಿದ್ದಾರೆ.
ಶ್ರೇಯಸ್ ಅಯ್ಯರ್ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಮುಖ್ಯವಾಗಿ ಯುಜ್ವೇಂದ್ರ ಚಹಾಲ್ ಅವರ ಪತ್ನಿ ಧನಶ್ರೀ ವರ್ಮಾ ಕೂಡ ಶ್ರೇಯಸ್ ಅಯ್ಯರ್ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಧನಶ್ರೀ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೇಟಸ್ ಹಂಚಿಕೊಂಡಿದ್ದರು.
ಬುಧವಾರ ಅಯ್ಯರ್ ಹುಟ್ಟುಹಬ್ಬದ ದಿನದಂದು ಚಹಲ್ ಪತ್ನಿ ಧನಶ್ರೀ ವರ್ಮಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಅಯ್ಯರ್ ತನ್ನ ತಾಯಿ ಜೊತೆಯಿರುವ ಫೋಟೋವನ್ನು ಹಂಚಿಕೊಂಡು ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ. ಈ ಫೋಟೋ ವೈರಲ್ ಆಗುತ್ತಿದೆ.
ಅಯ್ಯರ್ ಹಾಗೂ ಧನಶ್ರೀ ಈ ಹಿಂದೆ ರೀಲ್‌ಗಳಲ್ಲಿ ಒಟ್ಟಿಗೆ ನೃತ್ಯ ಮಾಡಿದ್ದರು. ಈ ವಿಡಿಯೋಗಳೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸಿತ್ತು. ಜೊತೆಗೆ ಇಬ್ಬರೂ ಗ್ರೂಪ್ ಫೋಟೋಗಳಲ್ಲಿ ಅನೇಕ ಬಾರಿ ಕಾಣಿಸಿಕೊಂಡಿದ್ದರು. ಯುಜ್ವೇಂದ್ರ ಚಹಲ್ ಕೂಡ ಅಯ್ಯರ್ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.
ಶ್ರೇಯಸ್ ಅಯ್ಯರ್ ಇತ್ತೀಚೆಗೆ ಮುಕ್ತಾಯಗೊಂಡ 2023 ರ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಈ ಮೂಲಕ 4ನೇ ಕ್ರಮಾಂಕದ ತೊಂದರೆಯನ್ನು ಹೋಗಲಾಡಿಸಿದ್ದಾರೆ. 11 ಪಂದ್ಯಗಳಲ್ಲಿ, ಅಯ್ಯರ್ ಎರಡು ಶತಕಗಳು ಮತ್ತು ಮೂರು ಅರ್ಧಶತಕಗಳನ್ನು ಒಳಗೊಂಡಂತೆ 66.25 ರ ಸರಾಸರಿಯಲ್ಲಿ 530 ರನ್ ಗಳಿಸಿದರು.
Published On - 12:28 pm, Thu, 7 December 23