Dinesh Karthik: ಆರ್​ಸಿಬಿಗೆ ದೊಡ್ಡ ಆಘಾತ: ದಿನೇಶ್ ಕಾರ್ತಿಕ್ ಆರೋಗ್ಯದಲ್ಲಿ ಏರುಪೇರು

|

Updated on: May 11, 2023 | 9:41 AM

RCB, IPL 2023: ಸಂಕಷ್ಟದಲ್ಲಿರುವ ಆರ್​ಸಿಬಿಗೆ ಮತ್ತೊಂದು ಆಘಾತ ಉಂಟಾಗಿದೆ. ತಂಡದ ಪ್ರಮುಖ ವಿಕೆಟ್ ಕೀಪರ್, ಬ್ಯಾಟರ್ ದಿನೇಶ್ ಕಾರ್ತಿಕ್ ಆರೋಗ್ಯದಲ್ಲಿ ಏರು-ಪೇರಾಗಿದೆ. ಅನಾರೋಗ್ಯದಿಂದ ಕಾರ್ತಿಕ್ ಬಳಲುತ್ತಿದ್ದಾರೆ.

1 / 7
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೈಫಲ್ಯ ಮುಂದುವರೆದಿದೆ. ಆಡಿರುವ 11 ಪಂದ್ಯಗಳಲ್ಲಿ ಐದು ಗೆಲುವು ಹಾಗೂ ಆರು ಪಂದ್ಯಗಳಲ್ಲಿ ಸೋಲು ಕಂಡು 10 ಅಂಕದೊಂದಿಗೆ ಏಳನೇ ಸ್ಥಾನದಲ್ಲಿದೆ.

2 / 7
ಪಾಯಿಂಟ್ ಟೇಬಲ್​ನಲ್ಲಿ ಮೈನಸ್ ರನ್​ರೇಟ್​ನಲ್ಲಿರುವ ಆರ್​ಸಿಬಿಗೆ ಪ್ಲೇ ಆಫ್ ಹಾದಿ ದುರ್ಗಮವಾಗಿದೆ. ಉಳಿದಿರುವ ಮೂರು ಪಂದ್ಯಗಳಲ್ಲಿ ದೊಡ್ಡ ಅಂತರದ ಗೆಲುವು ಸಾಧಿಸಿದರೆ ಮಾತ್ರ ಮುಂದಿನ ಹಂತಕ್ಕೆ ತೇರ್ಗಡೆ ಸಾಧ್ಯ. ಇದರ ಜೊತೆಗೆ ಇತರೆ ತಂಡಗಳ ಫಲಿತಾಂಶ ಕೂಡ ಮುಖ್ಯವಾಗುತ್ತದೆ.

3 / 7
ಹೀಗೆ ಸಂಕಷ್ಟದಲ್ಲಿರುವ ಆರ್​ಸಿಬಿಗೆ ಮತ್ತೊಂದು ಆಘಾತ ಉಂಟಾಗಿದೆ. ತಂಡದ ಪ್ರಮುಖ ವಿಕೆಟ್ ಕೀಪರ್, ಬ್ಯಾಟರ್ ದಿನೇಶ್ ಕಾರ್ತಿಕ್ ಆರೋಗ್ಯದಲ್ಲಿ ಏರು-ಪೇರಾಗಿದೆ. ಅನಾರೋಗ್ಯದಿಂದ ಕಾರ್ತಿಕ್ ಬಳಲುತ್ತಿದ್ದಾರೆ.

4 / 7
ಕಳೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದ್ದರು. 18 ಎಸೆತಗಳಲ್ಲಿ 4 ಫೋರ್, 1 ಸಿಕ್ಸರ್​ನಿಂದ 30 ರನ್ ಗಳಿಸಿದ್ದರು. ಇಲ್ಲಿ ಔಟಾಗಿ ಪೆವಿಲಿಯನ್​ನತ್ತ ತೆರಳುತ್ತಿರುವಾಗ ಕಾರ್ತಿಕ್ ಜೋರಾಗಿ ಕೆಮ್ಮುತ್ತಿರುವುದು ಕಂಡುಬಂದಿದೆ.

5 / 7
ಮುಂಬೈ ವಿರುದ್ಧದ ಪಂದ್ಯದ ಮಧ್ಯೆಯೇ ಕಾರ್ತಿಕ್ ಅವರ ಆರೋಗ್ಯದಲ್ಲಿ ತೊಂದರೆ ಉಂಟಾಗಿದೆ. ಹೀಗಾಗಿ ಅವರು ಆರ್​ಸಿಬಿ ಫೀಲ್ಡಿಂಗ್ ಮಾಡುವಾಗ ಮೈದಾನಕ್ಕೆ ಬರಲಿಲ್ಲ. ಈ ಬಗ್ಗೆ ತಂಡದ ಮುಖ್ಯ ಕೋಚ್ ಸಂಜಯ್ ಬಂಗಾರ್ ಮಾಹಿತಿ ನೀಡಿದ್ದಾರೆ.

6 / 7
''ಪಂದ್ಯದ ಮಧ್ಯೆ ದಿನೇಶ್ ಕಾರ್ತಿಕ್ ಅವರು ಅಸ್ವಸ್ಥರಾಗಿದ್ದರು. ಹೊಟ್ಟೆಯಲ್ಲಿ ಸಮಸ್ಯೆ ಉಂಟಾಗಿತ್ತು. ಔಟಾಗಿ ವಾಪಸು ಬರುವಾಗ ವಾಂತಿ ಕೂಡ ಮಾಡಿಕೊಂಡರು. ಔಷಧಿ ನೀಡಲಾಗಿದೆ. ಅವರು ನಮ್ಮ ತಂಡದ ಪ್ರಮುಖ ಸದಸ್ಯರರು. ಪಂದ್ಯದಲ್ಲಿ ಅವರು ದೊಡ್ಡ ಪಾತ್ರವನ್ನು ವಹಿಸುತ್ತಾರೆ," ಎಂದು ಬಂಗಾರ್ ಹೇಳಿದ್ದಾರೆ.

7 / 7
ಆರ್​ಸಿಬಿ ತನ್ನ ಮುಂದಿನ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ. ಜೈಪುರದ ಸವಾಯ್ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ಈ ಪಂದ್ಯ ಏರ್ಪಡಿಸಲಾಗಿದ್ದು, ಮಧ್ಯಾಹ್ನ 3.30ಕ್ಕೆ ಶುರುವಾಗಲಿದೆ. ಈ ಹೊತ್ತಿಗೆ ಕಾರ್ತಿಕ್ ಗುಣಮುಖರಾಗುತ್ತಾ ನೋಡಬೇಕು.