T20 World Cup 2024: 25 ಸಾವಿರ ಕೋಟಿಗೆ ಖರೀದಿ; ಲಾಭದ ಮಾತಿರಲಿ, ನಷ್ಟ ತುಂಬಲು ರಿಯಾಯಿತಿ ಕೇಳಿದ ಡಿಸ್ನಿ ಸ್ಟಾರ್

|

Updated on: Aug 26, 2024 | 4:05 PM

T20 World Cup 2024: ಕಳೆದ ವರ್ಷವಷ್ಟೇ ಐಸಿಸಿ ಈವೆಂಟ್​ನ ಪ್ರಸಾರದ ಹಕ್ಕನ್ನು ಡಿಸ್ನಿ-ಸ್ಟಾರ್ ಖರೀದಿಸಿತ್ತು. ಈ ಪ್ರಸಾರದ ಹಕ್ಕನ್ನು ಡಿಸ್ನಿ-ಸ್ಟಾರ್ ಬರೋಬ್ಬರಿ 3 ಬಿಲಿಯನ್ ಡಾಲರ್‌ಗೆ ಅಂದರೆ ಸುಮಾರು 25 ಸಾವಿರ ಕೋಟಿ ರೂಪಾಯಿಗಳಿಗೆ ಖರೀದಿಸಿತ್ತು. ಟಿ20 ವಿಶ್ವಕಪ್‌ನಿಂದಲೇ ಈ ಒಪ್ಪಂದ ಆರಂಭವಾಗಿತ್ತು.

1 / 9
ಕಳೆದ ಜೂನ್ ತಿಂಗಳಲ್ಲಿ ನಡೆದಿದ್ದ ಟಿ20 ವಿಶ್ವಕಪ್​ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಬರೋಬ್ಬರಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಎತ್ತಿಹಿಡಿದಿದ್ದ ಟೀಂ ಇಂಡಿಯಾ ಕೋಟ್ಯಾಂತರ ಭಾರತೀಯರ ಕನಸನ್ನು ನನಸು ಮಾಡಿತ್ತು. ಟೀಂ ಇಂಡಿಯಾದ ಈ ವಿಶ್ವಕಪ್ ಗೆಲುವನ್ನು ಇಂದಿಗೂ ಭಾರತದಲ್ಲಿ ಆಚರಿಸಲಾಗುತ್ತಿದೆ. ಆದರೆ ಭರ್ಜರಿ ಲಾಭ ಗಳಿಸುವ ಸಲುವಾಗಿ ಸಾವಿರಾರು ಕೋಟಿ ನೀಡಿ ಪ್ರಸಾರದ ಹಕ್ಕು ಖರೀದಿಸಿದ್ದ ಡಿಸ್ನಿ-ಸ್ಟಾರ್​ಗೆ ಮಾತ್ರ ಊಹಿಸಲಾಗದಷ್ಟು ನಷ್ಟ ಉಂಟಾಗಿದೆ.

2 / 9
ಕಳೆದ ಜೂನ್ 29ರಂದು ಬಾರ್ಬಡೋಸ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಫೈನಲ್​ನಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ ತಂಡವು 11 ವರ್ಷಗಳಿಂದ ಇದ್ದ ಪ್ರಶಸ್ತಿ ಬರವನ್ನು ಸಹ ಕೊನೆಗೊಳಿಸಿತು. ಅಮೇರಿಕಾ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆದ ಈ ವಿಶ್ವಕಪ್ ಭಾರತೀಯ ಅಭಿಮಾನಿಗಳಿಗೆ ಸ್ಮರಣೀಯವಾಗಿದ್ದರೆ, ಡಿಜಿಟಲ್ ಪ್ರಸಾರದ ಹಕ್ಕು ಖರೀದಿಸಿದ್ದ ಡಿಸ್ನಿ-ಸ್ಟಾರ್ ಮಾತ್ರ ಒಪ್ಪಂದದಲ್ಲಿ ರಿಯಾಯಿತಿ ನೀಡುವಂತೆ ಐಸಿಸಿ ಬಳಿ ಮನವಿ ಮಾಡಿಕೊಂಡಿದೆ.

3 / 9
ಈ ಬಾರಿಯ ಪುರುಷರ ಟಿ20 ವಿಶ್ವಕಪ್‌ನ ಆತಿಥ್ಯವನ್ನು ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಹೊತ್ತುಕೊಂಡಿದ್ದವು. ಅದರಂತೆ ಟೂರ್ನಿಯ ಲೀಗ್​ ಪಂದ್ಯಗಳನ್ನು ಅಮೆರಿಕದಲ್ಲಿ ನಡೆದರೆ, ಸೂಪರ್-8, ಸೆಮಿ-ಫೈನಲ್ ಮತ್ತು ಫೈನಲ್ ಸೇರಿದಂತೆ ಕೆಲವು ಗುಂಪು ಹಂತದ ಪಂದ್ಯಗಳನ್ನು ಕೆರಿಬಿಯನ್‌ನಲ್ಲಿ ಆಯೋಜಿಸಲಾಗಿತ್ತು.

4 / 9
ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್​ಗೆ ಅಮೆರಿಕ ಆತಿಥ್ಯವಹಿಸಿದ್ದರೆ, ನ್ಯೂಯಾರ್ಕ್‌ನಲ್ಲಿ ಮೊದಲ ಬಾರಿಗೆ ಅಂತರಾಷ್ಟ್ರೀಯ ಕ್ರಿಕೆಟ್ ನಡೆದಿತ್ತು. ಇದಕ್ಕಾಗಿ ನಾಸೋ ಕೌಂಟಿಯಲ್ಲಿ ತಾತ್ಕಾಲಿಕ ಕ್ರೀಡಾಂಗಣವನ್ನು ಸಹ ಸಿದ್ಧಪಡಿಸಲಾಗಿತ್ತು. ಆದರೆ ಆ ಮೈದಾನದಲ್ಲಿ ನಡೆದ ಪಂದ್ಯಗಳ ಸ್ಥಿತಿ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ.

5 / 9
ಅಭಿಮಾನಿಗಳನ್ನು ಕ್ರೀಡಾಂಗಣದತ್ತ ಸೆಳೆಯುವುದರಲ್ಲೂ ಐಸಿಸಿ ಎಡವಿತ್ತು. ಇದರಿಂದಾಗಿ ಈಗ ಪಂದ್ಯಾವಳಿಯ ಪ್ರಸಾರಕ ಡಿಸ್ನಿ-ಸ್ಟಾರ್ ಐಸಿಸಿಯಿಂದ 830 ಕೋಟಿ ರೂಪಾಯಿಗಳ ರಿಯಾಯಿತಿಗೆ ಬೇಡಿಕೆಯಿಟ್ಟಿದೆ.

6 / 9
ವಾಸ್ತವವಾಗಿ ಕಳೆದ ವರ್ಷವಷ್ಟೇ ಐಸಿಸಿ ಈವೆಂಟ್​ನ ಪ್ರಸಾರದ ಹಕ್ಕನ್ನು ಡಿಸ್ನಿ-ಸ್ಟಾರ್ ಖರೀದಿಸಿತ್ತು. ಈ ಪ್ರಸಾರದ ಹಕ್ಕನ್ನು ಡಿಸ್ನಿ-ಸ್ಟಾರ್ ಬರೋಬ್ಬರಿ 3 ಬಿಲಿಯನ್ ಡಾಲರ್‌ಗೆ ಅಂದರೆ ಸುಮಾರು 25 ಸಾವಿರ ಕೋಟಿ ರೂಪಾಯಿಗಳಿಗೆ ಖರೀದಿಸಿತ್ತು. ಟಿ20 ವಿಶ್ವಕಪ್‌ನಿಂದಲೇ ಈ ಒಪ್ಪಂದ ಆರಂಭವಾಗಿತ್ತು.

7 / 9
ಆದರೆ ಇಡೀ ಟಿ20 ವಿಶ್ವಕಪ್ ಪಂದ್ಯಾವಳಿ ನಿರೀಕ್ಷಿತ ಮಟ್ಟದಲ್ಲಿ ಡಿಸ್ನಿ-ಸ್ಟಾರ್ ಆದಾಯ ತಂದುಕೊಟ್ಟಿಲ್ಲ. ಹೀಗಾಗಿ ಕೆಲವು ದಿನಗಳ ಹಿಂದೆ ಐಸಿಸಿಗೆ ಎರಡು ಪ್ರತ್ಯೇಕ ಪತ್ರಗಳನ್ನು ಬರೆದಿರುವ ಡಿಸ್ನಿ-ಸ್ಟಾರ್, ಟಿ20 ವಿಶ್ವಕಪ್ ಪಂದ್ಯಗಳಿಂದ ಉಂಟಾದ ನಷ್ಟಕ್ಕಾಗಿ ಪ್ರಸಾರ ಒಪ್ಪಂದದಲ್ಲಿ 100 ಮಿಲಿಯನ್ ಡಾಲ್ ಮನ್ನಾ ಮಾಡಲು ಕೇಳಿದೆ ಎಂದು ಕ್ರಿಕ್‌ಬಜ್ ವರದಿಯಲ್ಲಿ ಹೇಳಿಕೊಂಡಿದೆ.

8 / 9
ಈ ಎರಡು ಪತ್ರದಲ್ಲಿ ತನಗಾದ ನಷ್ಟದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಡಿಸ್ನಿ-ಸ್ಟಾರ್, ಟಿ20 ವಿಶ್ವಕಪ್​ನಲ್ಲಿ ಜೂನ್ 15 ರಂದು ಲಾಡರ್‌ಹಿಲ್‌ನಲ್ಲಿ ನಡೆಯಬೇಕಿದ್ದ ಭಾರತ-ಕೆನಡಾ ಪಂದ್ಯದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿತ್ತು. ಆದರೆ ಮಳೆಯಿಂದಾಗಿ ಪಂದ್ಯವನ್ನು ಪ್ರಾರಂಭಿಸದೆ ಪಂದ್ಯವನ್ನು ರದ್ದುಗೊಳಿಸಲಾಯಿತು. ಇದರಿಂದಾಗ ಸಾಕಷ್ಟು ನಷ್ಟ ಉಂಟಾಗಿದೆ.

9 / 9
ಇದಲ್ಲದೇ ನ್ಯೂಯಾರ್ಕ್​ನಲ್ಲಿ ನಡೆದ ಭಾರತ-ಪಾಕಿಸ್ತಾನ ನಡುವಿನ ಪಂದ್ಯವೂ ನಿರೀಕ್ಷಿಸಿದಷ್ಟು ಯಶಸ್ವಿಯಾಗಲಿಲ್ಲ ಹಾಗೂ ಕಳಪೆ ಪಿಚ್​ ಕಾರಣದಿಂದಾಗಿ ಪಂದ್ಯ ಕಡಿಮೆ ಸ್ಕೋರಿಂಗ್ ಆಗಿತ್ತು. ಇಷ್ಟೇ ಅಲ್ಲ, ಟ್ರಿನಿಡಾಡ್‌ನಲ್ಲಿ ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಮೊದಲ ಸೆಮಿಫೈನಲ್ ಪಂದ್ಯವೂ ಕೂಡ ಏಕಪಕ್ಷೀಯವಾಗಿ ಅಂತ್ಯಗೊಂಡಿದ್ದರಿಂದಲೂ ನಷ್ಟು ಉಂಟಾಗಿದೆ. ಇದಲ್ಲದೆ, ಅನೇಕ ಪಂದ್ಯಗಳ ಆರಂಭದ ಸಮಯ ಮತ್ತು ಪಂದ್ಯಾವಳಿಯ ಮಾರುಕಟ್ಟೆಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿರುವ ಸ್ಟಾರ್ ಡಿಸ್ನಿ, ಐಸಿಸಿ ಬಳಿ ರಿಯಾಯಿತಿಗೆ ಒತ್ತಾಯಿಸಿದೆ.