Duleep Trophy: ‘ಪೂಜಾರ ಸರ್ ನನ್ನಂತೆ ಬ್ಯಾಟ್ ಮಾಡಲು ಸಾಧ್ಯವಿಲ್ಲ’! ಸ್ಫೋಟಕ ಹೇಳಿಕೆ ನೀಡಿದ ಪೃಥ್ವಿ ಶಾ

|

Updated on: Jul 09, 2023 | 1:08 PM

Prithvi Shaw: ನಾನು ಯಾವತ್ತೂ ಪೂಜಾರ ಸರ್ ಹಾಗೆ ಬ್ಯಾಟ್ ಮಾಡಲು ಸಾಧ್ಯವಿಲ್ಲ, ಅದೇ ರೀತಿ ಪೂಜಾರ ಸರ್ ನನ್ನಂತೆ ಬ್ಯಾಟ್ ಮಾಡಲು ಆಗುವುದಿಲ್ಲ. ಆಕ್ರಮಣಕಾರಿ ಆಟದ ಶೈಲಿಯನ್ನು ಉಳಿಸಿಕೊಳ್ಳಲು ಬಯಸುತ್ತೇನೆ ಎಂದಿದ್ದಾರೆ.

1 / 6
ವೃತ್ತಿಜೀವನದ ಆರಂಭದಲ್ಲಿ ಟೀಂ ಇಂಡಿಯಾದ ಭವಿಷ್ಯದ ಸೂಪರ್ ಸ್ಟಾರ್ ಎನಿಸಿಕೊಂಡಿದ್ದ ಆರಂಭಿಕ ಆಟಗಾರ ಪೃಥ್ವಿ ಶಾ, ಕಳಪೆ ಫಾರ್ಮ್​ನಿಂದಾಗಿ ಟೀಂ ಇಂಡಿಯಾದಿಂದ ಹೊರಬಿದ್ದು ವರ್ಷಗಳೇ ಕಳೆದಿವೆ. ಇದೀಗ ತಂಡಕ್ಕೆ ಮರಳಿ ಎಂಟ್ರಿಕೊಡಲು ಪ್ರಯತ್ನಿಸಿರುವ ಡೆಲ್ಲಿ ಡ್ಯಾಶರ್, ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

2 / 6
ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿಯಲ್ಲಿ ಪಶ್ಚಿಮ ವಲಯ ತಂಡವನ್ನು ಪ್ರತಿನಿಧಿಸುತ್ತಿರುವ ಪೃಥ್ವಿ ಇಡೀ ಟೂರ್ನಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆದರೂ ಪಶ್ಚಿಮ ವಲಯ ತಂಡ ದುಲೀಪ್ ಟ್ರೋಫಿ ಫೈನಲ್​ಗೆ ಲಗ್ಗೆ ಇಟ್ಟಿದೆ.

3 / 6
ಇನ್ನು 2021ರ ಜುಲೈನಲ್ಲಿ ಕೊನೆಯದಾಗಿ ಟೀಂ ಇಂಡಿಯಾ ಪರ ಆಡಿದ್ದ ಪೃಥ್ವಿ, ಅಂದಿನಿಂದ ಟೀಂ ಇಂಡಿಯಾದಿಂದ ಹೊರಗಿದ್ದಾರೆ. ಇದೀಗ ದುಲೀಪ್ ಟ್ರೋಫಿಯಲ್ಲಿ ಪಶ್ಚಿಮ ವಲಯ ತಂಡ ಫೈನಲ್​ಗೆ ಎಂಟ್ರಿಕೊಟ್ಟ ಬಳಿಕ ತನ್ನ ಮುಂದಿನ ಗುರಿಯ ಬಗ್ಗೆ ಮಾತನಾಡಿರುವ ಪೃಥ್ವಿ, ತನ್ನ ಆಟದ ಶೈಲಿಯನ್ನು ಎಂದಿಗೂ ಬದಲಾಯಿಸುವುದಿಲ್ಲ ಎಂದಿದ್ದಾರೆ.

4 / 6
ಮುಂದುವರೆದು ಮಾತನಾಡಿದ ಪೃಥ್ವಿ, ವೈಯಕ್ತಿಕವಾಗಿ ನಾನು ಯೋಚಿಸುವುದಿಲ್ಲ, ಆಟದ ಶೈಲಿಯನ್ನು ಬದಲಾಯಿಸಲು ನಾನು ಬಯಸುವುದಿಲ್ಲ. ನಾನು ಯಾವತ್ತೂ ಪೂಜಾರ ಸರ್ ಹಾಗೆ ಬ್ಯಾಟ್ ಮಾಡಲು ಸಾಧ್ಯವಿಲ್ಲ, ಅದೇ ರೀತಿ ಪೂಜಾರ ಸರ್ ನನ್ನಂತೆ ಬ್ಯಾಟ್ ಮಾಡಲು ಆಗುವುದಿಲ್ಲ. ಆಕ್ರಮಣಕಾರಿ ಆಟದ ಶೈಲಿಯನ್ನು ಉಳಿಸಿಕೊಳ್ಳಲು ಬಯಸುತ್ತೇನೆ ಎಂದಿದ್ದಾರೆ.

5 / 6
ಸಾಧ್ಯವಾದಷ್ಟು ಪಂದ್ಯಗಳನ್ನು ಆಡುವುದು ನನ್ನ ಗುರಿ. ಭಾರತ ತಂಡಕ್ಕೆ ಪುನರಾಗಮನ ಮಾಡುವುದು ನನ್ನ ಗುರಿ ಆಗಿರುವುದರಿಂದ ನನಗೆ ಪ್ರತಿ ರನ್ ಮುಖ್ಯವಾಗಿದೆ. ನನಗೆ ಪ್ರತಿಯೊಂದು ಪಂದ್ಯವೂ ಮುಖ್ಯ. ನಾನು ದುಲೀಪ್ ಟ್ರೋಫಿಯಲ್ಲಿ ಆಡುತ್ತಿರಲಿ ಅಥವಾ ಮುಂಬೈ ಪರ ಯಾವುದೇ ಪಂದ್ಯದಲ್ಲಿ ಆಡುತ್ತಿರಲಿ, ಅತ್ಯುತ್ತಮವಾದುದನ್ನು ನೀಡುವುದು ಮುಖ್ಯ ಎಂದಿದ್ದಾರೆ.

6 / 6
ಎರಡೂ ಇನಿಂಗ್ಸ್‌ಗಳಲ್ಲಿ ಉತ್ತಮ ಆರಂಭದ ಹೊರತಾಗಿಯೂ ಸೆಮಿಫೈನಲ್‌ನಲ್ಲಿ ದೊಡ್ಡ ರನ್ ಕಲೆಹಾಕಲು ಸಾಧ್ಯವಾಗದಿರುವುದು ಬೇಸರ ತಂದಿದೆ ಎಂದಿರುವ ಪೃಥ್ವಿ, ಟಿ20ಯಲ್ಲೂ ಅದೇ ಮನಸ್ಥಿತಿಯಲ್ಲೇ ಬ್ಯಾಟಿಂಗ್ ಮಾಡುತ್ತೇನೆ. ಮೂಲಭೂತವಾಗಿ ನಾವು ಮಾಡಲು ಪ್ರಯತ್ನಿಸುವುದೇನೆಂದರೆ ಬೌಲರ್‌ನ ಮನಸ್ಥಿತಿಯೊಂದಿಗೆ ಆಟವಾಡುವುದು. ಬೌಲರ್ ಅನ್ನು ಬೆಚ್ಚಿಬೀಳಿಸುವುದು ನನ್ನ ಗುರಿ ಎಂದಿದ್ದಾರೆ.

Published On - 1:08 pm, Sun, 9 July 23