AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Harry Brook: ಬೂಮ್ ಬೂಮ್ ಬ್ರೂಕ್: ಹೊಸ ವಿಶ್ವ ದಾಖಲೆ ನಿರ್ಮಿಸಿದ ಸ್ಪೋಟಕ ದಾಂಡಿಗ

Harry Brook Records: ಇಂಗ್ಲೆಂಡ್ ಪರ ಇದುವರೆಗೆ 10 ಟೆಸ್ಟ್ ಪಂದ್ಯಗಳನ್ನಾಡಿರುವ ಹ್ಯಾರಿ ಬ್ರೂಕ್ 1028 ರನ್ ಕಲೆಹಾಕಿದ್ದಾರೆ. ಈ ವೇಳೆ 4 ಭರ್ಜರಿ ಶತಕ ಹಾಗೂ 5 ಅರ್ಧಶತಕಗಳನ್ನು ಸಿಡಿಸಿದ್ದಾರೆ.

TV9 Web
| Edited By: |

Updated on:Jul 09, 2023 | 8:33 PM

Share
Ashes 2023: ಲೀಡ್ಸ್​ನ ಹೆಡಿಂಗ್ಲಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಆ್ಯಶಸ್ ಸರಣಿಯ ಮೂರನೇ ಟೆಸ್ಟ್​ ಪಂದ್ಯದ ಮೂಲಕ ಇಂಗ್ಲೆಂಡ್​ನ ಹ್ಯಾರಿ ಬ್ರೂಕ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

1 / 6
ಈ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ 75 ರನ್ ಬಾರಿಸುವ ಮೂಲಕ ಹ್ಯಾರಿ ಬ್ರೂಕ್ ಟೆಸ್ಟ್​ ಕ್ರಿಕೆಟ್​ನಲ್ಲಿ 1000 ರನ್​ ಪೂರೈಸಿದರು. ಅದು ಕೂಡ ಅತ್ಯಂತ ಕಡಿಮೆ ಎಸೆತಗಳ ಮೂಲಕ ಎಂಬುದು ವಿಶೇಷ.

2 / 6
ಅಂದರೆ ಟೆಸ್ಟ್​ ಕ್ರಿಕೆಟ್​ನಲ್ಲಿ ಅತ್ಯಂತ ಕಡಿಮೆ ಎಸೆತಗಳನ್ನು ಎದುರಿಸಿ ಸಾವಿರ ರನ್ ಪೂರೈಸಿದ ವಿಶ್ವ ದಾಖಲೆ ಇದೀಗ ಸ್ಪೋಟಕ ದಾಂಡಿಗ ಹ್ಯಾರಿ ಬ್ರೂಕ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಕಾಲಿನ್ ಡಿ ಗ್ರ್ಯಾಂಡ್​ಹೋಮ್​ ಹೆಸರಿನಲ್ಲಿತ್ತು.

3 / 6
ನ್ಯೂಝಿಲ್ಯಾಂಡ್ ತಂಡದ ಮಾಜಿ ಆಟಗಾರ ಕಾಲಿ ಡಿ ಗ್ರ್ಯಾಂಡ್​ಹೋಮ್ 1140 ಎಸೆತಗಳಲ್ಲಿ 1000 ರನ್ ಪೂರೈಸಿ ವಿಶ್ವ ದಾಖಲೆ ನಿರ್ಮಿಸಿದ್ದರು.

4 / 6
ಇದೀಗ ಕೇವಲ 1058 ಎಸೆತಗಳಲ್ಲಿ 1000 ರನ್ ಬಾರಿಸಿರುವ ಹ್ಯಾರಿ ಬ್ರೂಕ್, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಸಾವಿರ ರನ್ ಕಲೆಹಾಕಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು  ತಮ್ಮದಾಗಿಸಿಕೊಂಡಿದ್ದಾರೆ.

5 / 6
ಇಂಗ್ಲೆಂಡ್ ಪರ ಇದುವರೆಗೆ 10 ಟೆಸ್ಟ್ ಪಂದ್ಯಗಳನ್ನಾಡಿರುವ ಹ್ಯಾರಿ ಬ್ರೂಕ್ 1028 ರನ್ ಕಲೆಹಾಕಿದ್ದಾರೆ. ಈ ವೇಳೆ 4 ಭರ್ಜರಿ ಶತಕ ಹಾಗೂ 5 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಅಂದರೆ ಹ್ಯಾರಿ ಬ್ರೂಕ್ ಇಂಗ್ಲೆಂಡ್ ಪರ ಕಳೆದ 10 ಟೆಸ್ಟ್​ ಪಂದ್ಯಗಳಲ್ಲಿ 94 ರ ಸ್ಟ್ರೈಕ್​ ರೇಟ್​ನಲ್ಲಿ ರನ್​ಗಳಿಸುತ್ತಾ ಬಂದಿದ್ದಾರೆ. ಹೀಗಾಗಿಯೇ ಬ್ರೂಕ್ ಅವರನ್ನು ಡೇಂಜರಸ್ ಬ್ಯಾಟರ್​ ಎಂದು ಪರಿಗಣಿಸಲಾಗುತ್ತದೆ.

6 / 6

Published On - 8:31 pm, Sun, 9 July 23

ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!

ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್

ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ

ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ

ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್

ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ

ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು

ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ

ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ

ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ